ಕೊಲಂಬೊ: ‘ಈಸ್ಟರ್ ಭಾನುವಾರದಂದು ಬಾಂಬ್ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಭಾರತೀಯ ಗುಪ್ತಚರ ಇಲಾಖೆ ನೀಡಿದ್ದ ಎಚ್ಚರಿಕೆ ಕುರಿತು ನನಗೆ ಮಾಹಿತಿ ಇರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ನನಗೆ ಈ ವಿಷಯ ತಿಳಿಸಿದ್ದರೆ, ದಾಳಿ ಸಂಭವಿಸುವುದನ್ನು ತಡೆಯಬಹುದಾಗಿತ್ತು’ ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹೇಳಿದ್ದಾರೆ.

ಏ.21ರಂದು ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ಇದಕ್ಕೂ 17 ದಿನ ಮೊದಲು, ಭಾರತ ಈ ದಾಳಿ ಸಂಭವದ ಬಗ್ಗೆ ಶ್ರೀಲಂಕಾಗೆ ಸ್ಪಷ್ಟ ಎಚ್ಚರಿಕೆ ನೀಡಿತ್ತು.

‘ಏ.16ರಂದು ನಾನು ವಿದೇಶ ಪ್ರವಾಸಕ್ಕೆ ಹೊರಟೆ. ಅಲ್ಲಿಯವರೆಗೂ ನನಗೆ ಈ ಕುರಿತು ಯಾವುದೇ ಮಾಹಿತಿ ತಿಳಿದಿರಲಿಲ್ಲ. ಆದರೆ ರಕ್ಷಣಾ ಕಾರ್ಯದರ್ಶಿ ಹಾಗೂ ಆಗಿನ ಪೊಲೀಸ್ ಮಹಾನಿರ್ದೇಶಕರ ನಡುವೆ ಈ ವಿಷಯ ಚರ್ಚೆಯಾಗುತ್ತಿತ್ತಂತೆ. ಕೆಲವು ಸರ್ಕಾರಿ ಅಧಿಕಾರಿಗಳ ಮಿತಿಯಿಂದಾಗಿ ದಾಳಿ ತಡೆಯಲು ಆಗಲಿಲ್ಲ’ ಎಂದು ಸಿರಿಸೇನಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.