ಜಿನಿವಾ: ಮಲೇರಿಯಾ ತಡೆ ಔಷಧಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾ ವೈರಸ್‌ಗೆ ಮದ್ದಾಗಬಹುದೇ ಎಂಬುದರ ನಿಟ್ಟಿನಲ್ಲಿ ವಿಶ್ವದಾದ್ಯಂತ ನಡೆಯುತ್ತಿರುವ ವೈದ್ಯಕೀಯ ಪ್ರಯೋಗ (ಕ್ಲಿನಿಕಲ್ ಟ್ರಯಲ್)ಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ತಾತ್ಕಾಲಿಕ ತಡೆ ನೀಡಿದೆ.

ಇದನ್ನೂ ಓದಿ:ಮಲೇರಿಯಾ ಮಾತ್ರೆಯಿಂದ ಕೋವಿಡ್ ಗುಣವಾಗುವ ಬದಲಿಗೆ ಸಾವಿನ ಅಪಾಯ: ಸಂಶೋಧನಾ ವರದಿ

ಮುನ್ನೆಚ್ಚರಿಕೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.

‘ಮಲೇರಿಯಾ ರೋಗಿಗಳಿಗೆ ನೀಡುವ ಹೈಡ್ರೊಕ್ಲೋರೊಕ್ವಿನ್ ಮತ್ತು ಕ್ಲೋರೊಕ್ವಿನ್ ಮಾತ್ರೆಗಳ ಸೇವನೆಯಿಂದ ಕೋವಿಡ್–19 ರೋಗಿಗಳಿಗೆ ಯಾವುದೇ ಉಪಯೋಗವಿಲ್ಲ. ಬದಲಿಗೆ ಕೋವಿಡ್ ರೋಗಿಗಳು ಸಾವನ್ನಪ್ಪುವ ಅಪಾಯವನ್ನು ಈ ಮಾತ್ರೆಗಳು ಹೆಚ್ಚಿಸುತ್ತವೆ,’ ಎಂಬ ಅಧ್ಯಯನ ವರದಿಯೊಂದು ಇತ್ತೀಚೆಗೆ ‘ದಿ ಲಾನ್ಸೆಟ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿತ್ತು. ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ:ಹೈಡ್ರಾಕ್ಸಿಕ್ಲೊರೊಕ್ವಿನ್ ಅದ್ಭುತ ಔಷಧವಲ್ಲ: ತಜ್ಞರ ಅಭಿಮತ

ಕೊರೊನಾ ವೈರಸ್‌ಗೆ ಔಷಧ ಕಂಡು ಹಿಡಿಯುವ ಸಲುವಾಗಿ ವಿಶ್ವದಾದ್ಯಂತ ಸಾವಿರಾರು ಆಸ್ಪತ್ರೆಗಳು ಕ್ಲಿನಿಕಲ್ ಟ್ರಯಲ್‌ಗಾಗಿ ರೋಗಿಗಳನ್ನು ಆರೋಗ್ಯ ಸಂಸ್ಥೆಯ ‘ಕಾರ್ಯನಿರ್ವಾಹಕ ಗುಂಪಿ’ನ ‘ಸಾಲಿಡಾರಿಟಿ ಟ್ರಯಲ್‌ನಲ್ಲಿ (ಒಗ್ಗಟ್ಟಿನ ಪ್ರಯೋಗ)’ ನೊಂದಾಯಿಸಿವೆ. ಈ ಕ್ಲಿನಿಕಲ್ ಪ್ರಯೋಗದಲ್ಲಿ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್‌ನ ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಅವರು ಹೇಳಿದರು.

‘ಹೈಡ್ರಾಕ್ಸಿಕ್ಲೋರೋಕ್ವಿನ್ ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ ಅದರ ಕ್ಲಿನಿಕಲ್ ಟ್ರಯಲ್‌ಗೆ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ತಂಡವು ತಾತ್ಕಾಲಿಕ ತಡೆ ನೀಡಿದೆ. ಇನ್ನುಳಿದ ಎಲ್ಲ ಪ್ರಯೋಗಗಳು ಎಂದಿನಂತೇ ನಡೆಯಲಿವೆ,’ ಎಂದು ಟೆಡ್ರೋಸ್ ಹೇಳಿದರು.

ಮತ್ತಷ್ಟು...

ವೈದ್ಯರು ಹೇಳದೇ ಹೈಡ್ರಾಕ್ಸಿ ಕ್ಲೋರೋಕ್ವಿನ್ ಬಳಸಿದ್ರೆ ಹೃದಯಕ್ಕೆ ಅಪಾಯ: ಎಫ್ಡಿಎ

ಔಷಧ ಕಳುಹಿಸಿಕೊಟ್ಟ ಭಾರತವನ್ನು ಅಭಿನಂದಿಸಿದ ಇಸ್ರೇಲ್

ನೆರವನ್ನು ಎಂದಿಗೂ ಮರೆಯುವುದಿಲ್ಲ, ‘ಥ್ಯಾಂಕ್ ಯು’ ಭಾರತ: ಟ್ರಂಪ್

ಅಮೆರಿಕ ತಲುಪಿದ ಹೈಡ್ರಾಕ್ಸಿಕ್ಲೋರೋಕ್ವಿನ್: ಭಾರತೀಯ ರಾಯಭಾರಿ ಟ್ವೀಟ್

ಮಲೇರಿಯಾ ಮಾತ್ರೆ ಬಿಕ್ಕಟ್ಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.