ವಾಷಿಂಗ್ಟನ್:ಅಮೆರಿಕ ಸೇನಾ ಪಡೆಗಳು ದೇಶತೊರೆಯಬೇಕು ಎಂಬ ಇರಾಕ್ ಸಂಸತ್ನ ಸೂಚನೆಯಿಂದ ಕೆಂಡಾಮಂಡಲಗೊಂಡಿರುವ ಡೊನಾಲ್ಡ್ ಟ್ರಂಪ್, ಇರಾಕ್ ಮೇಲೆ ನಿರ್ಬಂಧ ಹೇರುವ ಬೆದರಿಕೆ ಹಾಕಿದ್ದಾರೆ.

ಒಂದು ವೇಳೆ ಸೇನಾ ಪಡೆಗಳು ಇರಾಕ್ ತೊರೆಯುವಂತಾದರೆ, ಅನ್ಬರ್ ಪ್ರಾಂತ್ಯದಲ್ಲಿರುವ ಮಿಲಿಟರಿ ವಾಯುನೆಲೆಗೆ ಅಮೆರಿಕ ಮಾಡಿರುವ ಖರ್ಚು ವೆಚ್ಚಗಳನ್ನು ಇರಾಕ್ ಭರಿಸಿಕೊಡಬೇಕು ಎಂದು ಹೇಳಿದ್ದಾರೆ.

‘ ಇರಾಕ್ನಲ್ಲಿ ನಾವು ಅತ್ಯಾಧುನಿಕ ಮತ್ತು ಅತಿ ದುಬಾರಿ ವಾಯುನೆಲೆಯನ್ನು ಹೊಂದಿದ್ದೇವೆ. ಅದನ್ನು ನಿರ್ಮಿಸಲು ಶತಕೋಟಿ ಡಾಲರ್ಗಳಷ್ಟು ಹಣ ವ್ಯಯಿಸಿದ್ದೇವೆ. ನನ್ನ ಸರ್ಕಾರ ಮತ್ತು ಈ ಹಿಂದಿನ ಅಮೆರಿಕ ಸರ್ಕಾರಗಳೂ ಹಣ ಖರ್ಚು ಮಾಡಿವೆ. ಇದನ್ನು ಮರುಪಾವತಿಸದೇ ನಮ್ಮ ಪಡೆಗಳು ಇರಾಕ್ ತೊರೆಯುವುದಿಲ್ಲ,’ ಎಂದು ಅವರು ಹೇಳಿದ್ದಾರೆ.

‘ಒಂದು ವೇಳೆ ಸ್ನೇಹ ಪೂರ್ವಕವಲ್ಲದ ನಡೆ ಅನುಸರಿಸಿ ಅಮೆರಿಕ ಪಡೆಗಳನ್ನು ಇರಾಕ್ನಿಂದ ಹೊರ ಹಾಕಿದರೆ, ಹಿಂದೆಂದೂ ನೋಡಿರದಂಥ ನಿರ್ಬಂಧವನ್ನು ಇರಾಕ್ ಮೇಲೆ ಹೇರುತ್ತೇವೆ. ಅದು ಸ್ವಲ್ಪ ಮಟ್ಟಿಗೆ ಇರಾನ್ ಮೇಲಿನ ನಿರ್ಬಂಧದಂತೇ ಇರುತ್ತದೆ,’ ಎಂದು ಅವರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.