ಬೀಜಿಂಗ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ರಚನಾತ್ಮಕ ಪಾತ್ರ ವಹಿಸಲು ಆಸಕ್ತಿ ಹೊಂದಿರುವುದಾಗಿ ಚೀನಾ ಹೇಳಿದೆ.

‘ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೀಡಿರುವ ಸಕಾರಾತ್ಮಕ ಹೇಳಿಕೆಗಳು ಸ್ವಾಗತಾರ್ಹ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಹೇಳಿದ್ದಾರೆ.

‘ಪ್ರಾದೇಶಿಕ ಸ್ಥಿರತೆ, ಶಾಂತಿ ಹಾಗೂ ಅಭಿವೃದ್ಧಿಗಾಗಿ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುವುದು ಅಗತ್ಯ’ ಎಂದೂ ಅವರು ಹೇಳಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನ ದಕ್ಷಿಣ ಏಷ್ಯಾದ ಪ್ರಮುಖ ರಾಷ್ಟ್ರಗಳು. ಎರಡೂ ದೇಶಗಳಿಗೆ ಸಾಮಾನ್ಯ ನೆರೆರಾಷ್ಟ್ರವಾಗಿರುವ ಚೀನಾ, ಉಭಯ ದೇಶಗಳ ನಡುವೆ ಪರಸ್ಪರ ನಂಬಿಕೆ ವೃದ್ಧಿಸಲು, ಭಿನ್ನಾಭಿಪ್ರಾಯ ಶಮನ ಮಾಡುವ ಪ್ರಯತ್ನಕ್ಕೆ ಸಹಕಾರ ನೀಡಲಿದೆ’ ಎಂದೂ ಹೇಳಿದರು.

‘ಚೀನಾ ವಹಿಸಬಹುದಾದ ರಚನಾತ್ಮಕ ಪಾತ್ರದ ಸ್ವರೂಪದ ಬಗ್ಗೆ ನಾನು ಏನೂ ಹೇಳಲಾರೆ. ಯಾವ ಯಾವ ವಿಷಯಗಳಿಗೆ ಸಂಬಂಧಿಸಿ
ದಂತೆ ನಾವು ಮಾಡಬಹುದಾದ ಕಾರ್ಯದ ಬಗ್ಗೆಯೂ ಈಗ ಹೇಳಲಾಗದು. ಆದರೆ, ಉಭಯ ದೇಶಗಳು ನೀಡಿರುವ ಸಕಾರಾತ್ಮಕ ಹೇಳಿಕೆಗಳ ಬಗ್ಗೆ ನಮಗೆ ಸಂತೋಷವಿದೆ ಎಂದಷ್ಟೆ ಹೇಳಬಲ್ಲೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಂತಿ ಸ್ಥಾಪನೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಭಾರತ ಮತ್ತು ಪಾಕಿಸ್ತಾನ ತಮ್ಮ ಬದ್ಧತೆಯನ್ನು ಪ್ರದರ್ಶಿಸಲಿವೆ ಎಂಬ ವಿಶ್ವಾಸ ನಮ್ಮದು.

–ಲು ಕಾಂಗ್ ವಕ್ತಾರ, ಚೀನಾ ವಿದೇಶಾಂಗ ಸಚಿವಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.