ಲಂಡನ್: ಪ್ರಸಕ್ತ ಸಾಲಿನ ಬೂಕರ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಮಹಿಳಾ ಲೇಖಕರು ಪ್ರಾಬಲ್ಯ ಸಾಧಿಸಿದ್ದಾರೆ. ಅಂತಿಮ ಪಟ್ಟಿಯಲ್ಲಿರುವ ಆರು ಲೇಖಕರ ಪೈಕಿ ಐವರು ಮಹಿಳಾ ಲೇಖಕರು ಎಂಬುದು ಈ ಬಾರಿಯ ವಿಶೇಷವಾಗಿದೆ.

ಬೂಕರ್ ಪ್ರಶಸ್ತಿಯ 55 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಲೇಖಕರು ಹೆಚ್ಚಿನ ಸಂಖ್ಯೆಯಲ್ಲಿ ಅಂತಿಮ ಪಟ್ಟಿಯಲ್ಲಿದ್ದಾರೆ. ಪ್ರತಿಷ್ಠಿತ ಈ ಪ್ರಶಸ್ತಿಯು 50,000 ಪೌಂಡ್ (₹ 55.33 ಲಕ್ಷ) ನಗದು ಬಹುಮಾನ ಮತ್ತು ಫಲಕವನ್ನು ಒಳಗೊಂಡಿದೆ.

ಲೇಖಕಿಯರಾದ ಬ್ರಿಟನ್‌ನ ಸಮಂತಾ ಹಾರ್ವೆ ಅವರ ‘ಆರ್ಬಿಟಲ್’, ಅಮೆರಿಕದ ರಾಚೆಲ್ ಕುಶ್ನರ್ ಅವರ ‘ಕ್ರಿಯೇಷನ್ ಲೇಕ್’, ಕೆನಡಾದ ಅನ್ನೆ ಮೈಕೆಲ್ಸ್ ಅವರ ‘ಹೆಲ್ಡ್’, ಆಸ್ಟ್ರೇಲಿಯಾದ ಚಾರ್ಲೆಟ್ ವುಡ್ ಅವರ ‘ಸ್ಟೋನ್ ಯಾರ್ಡ್ ಡಿವೋಷನಲ್’, ಡಚ್‌ನ ಯೆಲ್ ವ್ಯಾನ್ ಡೆರ್ ವುಡೆನ್ ಅವರ ‘ದಿ ಸೇಫ್‌ಕೀಪ್’ ಕೃತಿಗಳು ಅಂತಿಮ ಪಟ್ಟಿಯಲ್ಲಿವೆ. ಅಮೆರಿಕದ ಲೇಖಕ ಪರ್ಸಿವಲ್ ಎವೆರೆಟ್ ಅವರ ‘ಜೇಮ್ಸ್’ ಕೃತಿಯೂ ಪಟ್ಟಿಯಲ್ಲಿದ್ದು, ಅಂತಿಮ ಸ್ಪರ್ಧೆಯಲ್ಲಿರುವ ಏಕೈಕ ಪುರುಷ ಲೇಖಕರಾಗಿದ್ದಾರೆ ಎಂದು ಬೂಕರ್ ಪ್ರಶಸ್ತಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕರಾದ ಗೇಬಿ ವುಡ್ ತಿಳಿಸಿದ್ದಾರೆ. ಬೂಕರ್ ಪ್ರಸಸ್ತಿಯನ್ನು ನವೆಂಬರ್ 12ರಂದು ಲಂಡನ್‌ನಲ್ಲಿ ವಿತರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.