ಕ್ಯಾನ್ಬೆರಾ: ಬ್ರಿಟನ್ನ ರಾಜ 3ನೇ ಚಾರ್ಲ್ಸ್ ಮತ್ತು ಅವರ ಪತ್ನಿ ಆಸ್ಟ್ರೇಲಿಯಾಗೆ ಸಂಸತ್ತಿಗೆ ಸೋಮವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಸೆನೆಟರ್ ಒಬ್ಬರು, ‘ಆಸ್ಟ್ರೇಲಿಯಾ ನಿಮ್ಮ ನೆಲ ಅಲ್ಲ, ನೀವು ನಮ್ಮ ರಾಜ ಅಲ್ಲ’ ಎಂದು ಕೂಗಿದರು.

ಸೆನೆಟರ್ ಲಿಡಿಯಾ ಥೋರ್ಪ್ ಅವರು, ‘ಬ್ರಿಟಿಷ್ ವಸಹಾತುಶಾಹಿಗಳು ನಮ್ಮ ನೆಲವನ್ನು ಕಸಿದುಕೊಂಡಿದ್ದಾರೆ’ ಎಂದು ಕೂಗಿದರು.

‘ನೀವು ನಮ್ಮ ಜನರ ವಿರುದ್ಧ ಹತ್ಯಾಕಾಂಡ ನಡೆಸಿದಿರಿ’, ‘ನಮ್ಮಿಂದ ಕಿತ್ತುಕೊಂಡಿದ್ದನ್ನು ವಾಪಸ್ ಕೊಡಿ’, ‘ನಮ್ಮ ನೆಲವನ್ನು ನಾಶ ಮಾಡಿದ್ದೀರಿ, ನಮಗೆ ನ್ಯಾಯ ಕೊಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಥೋರ್ಪ್ ಅವರನ್ನು ಭದ್ರತಾ ಸಿಬ್ಬಂದಿ ತಡೆದರು. ಬಳಿಕ ಅವರನ್ನು ಸಂಸತ್ತಿನಿಂದ ಹೊರಹಾಕಲಾಯಿತು.

ನಂತರ ಚಾರ್ಲ್ಸ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.