ವಾಷಿಂಗ್ಟನ್ (ಪಿಟಿಐ): ಭಯೋತ್ಪಾದನಾ ಚಟುವಟಿಕೆಗೆ ಬಳಕೆಯಾಗುತ್ತಿರುವ ತನ್ನ ಸೇವಾ ವೇದಿಕೆಯ ರಕ್ಷಣೆಗೆ ಮುಂದಾಗಿರುವ ಸಾಮಾಜಿಕ ಜಾಲತಾಣ ಟ್ವಿಟ್ಟರ್, ಉಗ್ರ ಕೃತ್ಯಗಳಿಗೆ ಉತ್ತೇಜನ ನೀಡುತ್ತಿದ್ದ ಆರೋಪದಡಿ 1.25 ಲಕ್ಷ ಖಾತೆಗಳನ್ನು ಅಮಾನತುಗೊಳಿಸಿದೆ. ಇದರಲ್ಲಿ ಬಹುತೇಕ ಖಾತೆಗಳು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ನಂಟುಹೊಂದಿದ್ದವು.

ಆದರೆ, ಭಾರತ ಕೇಂದ್ರೀತ ಭಯೋತ್ಪಾದನೆ ನಡೆಸುವ ಸಂಘಟನೆಗಳು ಹಾಗೂ ವೈಯಕ್ತಿಕ ಖಾತೆಗಳ ಮೇಲೆ ಈ ಸಾಮಾಜಿಕ ಜಾಲತಾಣ ಯಾವುದೇ ಕ್ರಮಕೈಗೊಂಡಿಲ್ಲ.

‘ಭಯೋತ್ಪಾದನಾ ಬೆದರಿಕೆಯ ಸ್ವರೂಪ ಬದಲಾಗಿದ್ದು, ಅಂತೆಯೇ ಈ ಸಂಬಂಧ ನಮ್ಮ ಕೆಲಸವೂ ಬದಲಾಗಿದೆ. 2015ರ ಮಧ್ಯಭಾಗದಿಂದ ಬೆದರಿಕೆ ಒಡ್ಡುವ ಹಾಗೂ ಭಯೋತ್ಪಾದನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ 1.25 ಲಕ್ಷ ಖಾತೆಗಳನ್ನು ಅಮಾನತ್ತು ಮಾಡಿದ್ದೇವೆ. ಇದರಲ್ಲಿ ಬಹುತೇಕ ಐಎಸ್ ಸಂಘಟನೆಗೆ ಸೇರಿದವು’ ಎಂದು ಅಮೆರಿಕ ಮೂಲಕ ಈ ಸಾಮಾಜಿಕ ಜಾಲತಾಣ ಬ್ಲಾಗ್‌ವೊಂದರಲ್ಲಿ ಹೇಳಿಕೊಂಡಿದೆ.

ಆದರೆ, ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದಿಂದ ಕಾರ್ಯಾಚರಣೆ ನಡೆಸುವಂಥ ಉಗ್ರ ಸಂಘಟನೆಗಳ ಖಾತೆಗಳ ಕುರಿತ ಪ್ರಶ್ನೆಗಳಿಗೆ ಟ್ವಿಟ್ಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಭಾರತದ ಮೇಲೆ ಮತ್ತಷ್ಟು ಭೀಕರ ದಾಳಿಗಳನ್ನು ನಡೆಸುವುದಾಗಿ 2008ರ ಮುಂಬೈ ಉಗ್ರರ ದಾಳಿ ಘಟನೆಯ ಪ್ರಮುಖ ಸಂಚುಕೋರ ಹಫೀಜ್ ಸಯೀದ್ ಫೆಬ್ರುವರಿ 3ರಂದಷ್ಟೇ ಟ್ವೀಟ್ ಮಾಡಿದ್ದು ಈ ನಿಟ್ಟಿನಲ್ಲಿ ಉಲ್ಲೇಖಾರ್ಹ.

ಭಯೋತ್ಪಾದನೆ ಉತ್ತೇಜಿಸಲು ತನ್ನನ್ನು ವೇದಿಕೆಯಾಗಿ ಬಳಸುವುದನ್ನು ಖಂಡಿಸಿರುವ ಟ್ವಿಟ್ಟರ್, ‘ಈ ಬಗೆಯ ನಡವಳಿಕೆ, ಇಲ್ಲವೇ ಹಿಂಸಾತ್ಮಕ ಬೆದರಿಕೆಗೆ ತನ್ನ ಸೇವೆಯಲ್ಲಿ ಅವಕಾಶ ನೀಡುವುದಿಲ್ಲ ಎಂದು ‘ಟ್ವಿಟ್ಟರ್ ನಿಯಮಗಳು’ ಸ್ಪಷ್ಟಪಡಿಸುತ್ತವೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.