ಹನೋಯಿ: ರಕ್ಷಣೆ ಮತ್ತು ಭದ್ರತೆ, ಶಾಂತಿ ಉದ್ದೇಶಕ್ಕೆ ಪರಮಾಣು ಶಕ್ತಿ ಬಳಕೆ, ಬಾಹ್ಯಾಕಾಶ ಹಾಗೂ ತೈಲ ಮತ್ತು ಅನಿಲ, ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸಹಕಾರ ಬಲಪಡಿಸಲು ಭಾರತ ಮತ್ತು ವಿಯೆಟ್ನಾಂ ಮುಂದಾಗಿವೆ.

ಆಗ್ನೇಯ ಏಷ್ಯಾ ದೇಶಗಳ ನಾಲ್ಕು ದಿನಗಳ ಪ್ರವಾಸದಲ್ಲಿದ್ದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ವಿಯೆಟ್ನಾಂ ಉಪರಾಷ್ಟ್ರಪತಿ ಡಾಂಗ್ ಥಿ ಗಾಕ್ ಥಿನ್, ಪ್ರಧಾನಿ ಗುಯೆನ್ ಕ್ಸಿಯಾನ್ ಫುಕ್ ಮತ್ತು ನ್ಯಾಷನಲ್ ಅಸೆಂಬ್ಲಿಯ ಅಧ್ಯಕ್ಷ ಗುಯೆನ್ ಥಿ ಕಿಮ್ ಅವರೊಂದಿಗೆ ಮಾತುಕತೆ ನಡೆಸಿದರು.

ವಿಯೆಟ್ನಾಂನ ಮುಖಂಡರ ಜತೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರ ವೃದ್ಧಿಗೆ ನೆರವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.