ಯಕ್ಷಗಾನ ಕಲಾವಿದರು ಎಂದ ತಕ್ಷಣ ನಮಗೆ ಪ್ರಧಾನ ಪಾತ್ರ ಮಾಡುವವರೇ ನೆನಪಾಗುತ್ತಾರೆ. ಕೆರೆಮನೆ ಶಿವರಾಮ ಹೆಗಡೆ, ಕುಮಟಾ ಗೋವಿಂದ ನಾಯ್ಕ, ಜಲವಳ್ಳಿ ವೆಂಕಟೇಶ, ಕೆರೆಮನೆ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಹೀಗೆ ಯಾರನ್ನೇ ನೆನೆದರೂ ನಮ್ಮ ಕಣ್ಣಿಗೆ ಬರುವುದು ನಾಯಕ ಅಥವಾ ಪ್ರತಿನಾಯಕನ ಪಾತ್ರಗಳು. ಕೌರವ, ಅರ್ಜುನ, ಮಾಗಧ, ಕಾರ್ತವೀರ್ಯಾರ್ಜುನ ಮುಂತಾದ ಪಾತ್ರಗಳೇ ಬರುತ್ತವೆ. ಆದರೆ ಕೃಷ್ಣ ಹಾಸ್ಯಗಾರರನ್ನು ನೆನೆದರೆ ಕಣ್ಣ ಮುಂದೆ ಬರುವುದು ಸಿಂಹ ಮತ್ತು ಪ್ರೇತ. ಯಕ್ಷಗಾನದಲ್ಲಿ ಗಣನೆಗೇ ಇಲ್ಲದ ಪಾತ್ರಗಳಿಗೆ ಜೀವ ತುಂಬಿದವರು ಅವರು. ಸಣ್ಣ ಸಣ್ಣ ಪಾತ್ರಗಳ ದೊಡ್ಡ ಕಲಾವಿದ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.