ಗ್ರೀಕ್ ಧರ್ಮದ ಇತಿಹಾಸವನ್ನು ಕುರಿತು ಜಿ. ಹನುಮಂತರಾವ್ ಅವರು ಅರ್ಥಪೂರ್ಣವಾದ ಪ್ರಬಂಧವೊಂದನ್ನು ಬರೆದಿದ್ದಾರೆ. ಅದರ ಸಂಗ್ರಹವನ್ನು ಇಲ್ಲಿ ನೋಡಬಹುದು:

‘ಪ್ರಾಚೀನ ಧರ್ಮಗಳಲ್ಲಿ ಗ್ರೀಕ್ ಧರ್ಮ ತುಂಬ ಮುಖ್ಯವಾದುದು. ಅದರ ಬೆಳವಣಿಗೆ ಕ್ರಿ.ಪೂ. ಎರಡು ಸಾವಿರದಿಂದ ಕ್ರಿ.ಶ. ಒಂದನೆಯ ಶತಮಾನದವರೆಗೆ ದೀರ್ಘವಾದದ್ದು. ಅದರ ಬೆಳವಣಿಗೆಯ ಅವಧಿಯನ್ನು ಸ್ಥೂಲವಾಗಿ ನಾಲ್ಕು ಘಟಕಗಳಾಗಿ ವಿಭಾಗಿಸಬಹುದು. ಮೊದಲನೆಯದು ಕ್ರಿ.ಪೂ. 2000ದಿಂದ ಹೋಮರನವರೆಗೆ, ಎರಡನೆಯದು ಕ್ರಿ.ಪೂ. 900ರಿಂದ ಕ್ರಿ. ಪೂ. 500ರ ವರೆಗಿನದು; ಅಂದರೆ ಗ್ರೀಕ್ ವಸಾಹತುಗಳ ವಿಸ್ತರಣಕಾಲದಿಂದ ಪಾರಸಿಕರ ದಂಡಯಾತ್ರೆಯವರೆಗೆ.

ಮೂರನೆಯದು ಕ್ರಿ. ಪೂ. 500ರಿಂದ ಕ್ರಿ.ಪೂ. 338ರ ವರೆಗಿನದು. ಈ ಕಾಲದಲ್ಲಿ ಗ್ರೀಸ್ ಮ್ಯಾಸಿಡೋನಿಯದ ಆಳ್ವಿಕೆಗೆ ಒಳಪಟ್ಟಿತು. ನಾಲ್ಕನೆಯದು ಕ್ರಿ. ಪೂ. 228ರಿಂದ ಕ್ರಿ.ಶ. ಒಂದನೆಯ ಶತಮಾನದ ಕೊನೆಯವರೆಗಿನದು. ಈ ಕಾಲದಲ್ಲಿ ಗ್ರೀಸ್ ರೋಮನ್ನರ ಆಳ್ವಿಕೆಗೆ ಒಳಪಟ್ಟು ಗ್ರೀಕ್ ಸಂಸ್ಕೃತಿ ರೋಮನ್ ರಾಜ್ಯದಲ್ಲಿ ಹರಡಿತು. ಗ್ರೀಕ್ಮತ ಕ್ರೈಸ್ತಮತದ ಪ್ರಭಾವಕ್ಕೆ ಒಳಗಾಗಿ ಅಲ್ಲಿಂದ ಮುಂದೆ ನಾಮಾವಶೇಷವಾಯಿತು.

ಎರಡು ಸಾವಿರ ವರ್ಷಗಳ ಹಿಂದೆಯೇ ಇದು ಕ್ಷಯಿಸಿದುದರಿಂದ ಇದರ ವಿಚಾರವಾಗಿ ಯಥಾವತ್ತಾದ ವಿವರಣೆ ಇತ್ತೀಚಿನವರೆಗೂ ದೊರೆತಿರಲಿಲ್ಲ. ಇತ್ತೀಚಿಗೆ ಗ್ರೀಕ್ ಸಂಸ್ಕೃತಿಯ ವಿಚಾರವಾಗಿ ನಡೆಸಿದ ಸಂಶೋಧನೆಗಳಿಂದ ಅದರ ನಿಜಸ್ವರೂಪವನ್ನು ಸ್ವಲ್ಪಮಟ್ಟಿಗೆ ತಿಳಿದುಕೊಳ್ಳಲು ಸಾಧ್ಯವಾಗಿದೆ.

ಗ್ರೀಕ್ ಮತಚರಿತ್ರೆಯ ಸಂಶೋಧನೆಗೆ ಆಧಾರ ಸಾಮಗ್ರಿ ಬಹುಮುಖ್ಯವಾಗಿದೆ. ಪ್ರಾಚೀನ ಗ್ರೀಕ್ ಸಾಹಿತ್ಯದಲ್ಲಿ ಮತವಿಚಾರ ಬಹುಮುಖ್ಯವಾದದ್ದು. ಕಾವ್ಯಗಳಲ್ಲಿ ಹೋಮರನ ಒಡೆಸ್ಸಿ ಮತ್ತು ಇಲಿಯೆಡ್, ಹೆಸಿಯಡ್ಡನ ಕವನಗಳು, ಥೀಯೋಗ್ನಿಸ್ಸನ ಮತ್ತು ಸೋಲನ್ನ ಶ್ಲೋಕ ದ್ವಿಪದಿಗಳು, ಸಾಫೋಕ್ಲೀಸಿನ ರುದ್ರನಾಟಕಗಳು, ಲೈಕೋಪ್ರಾನಿನ ಕ್ಯಾಸಾಂಡ್ರ, ಕ್ಯಾಲಿಮಾಕಸ್ಸಿನ ಸ್ತೋತ್ರಗೀತೆಗಳು, ಅಪೋಲೋನಿಯಸ್ಸನ ಮಹಾಕಾವ್ಯ ರೋಡಿಯಸ್ ಮೊದಲಾದವೂ, ಗದ್ಯಸಾಹಿತ್ಯದಲ್ಲಿ ಪ್ಲೇಟೋವಿನ ಸಂವಾದಗಳು, ಹೀರಡಟಸ್ಸಿನ ಚರಿತ್ರೆ, ಡೆಮಾಸ್ತೆನೀಸನ ಮಹಾಭಾಷಣಗಳು, ಇವುಗಳಲ್ಲದೆ ಮತವಿಚಾರಕ್ಕೆ ಮೀಸಲಾದ ಗ್ರಂಥಗಳು ಬಹುಮುಖ್ಯವಾದವುಗಳು... ಪ್ರಾಚೀನ ಕ್ರೈಸ್ತರು ಗ್ರೀಕರ ಮತವಿಚಾರವಾಗಿ ಬರೆದಿರುವ ಗ್ರಂಥಗಳಲ್ಲಿ ಕ್ಲೆಮೆಂಟಿನ ಪ್ರೊಟ್ರಿಪ್ಟಿಕಾ, ಅರ್ನೋಬಿಯಸ್ಸಿನ ಅಡ್ವರ್ಸಸರ್ ಜೆಂಡೀಸ್, ಯುಸೇಬಿಯಸ್ನ ಪ್ರಿಪರೇಸಿಯೋ ಇವ್ಯಾಂಜೆಲಿಕಾ, ಅಗಸ್ಟೈನಿನ ಡಿ ಸಿವಿಟೇಟ್ಡಿಯಿ – ಇವು ಮುಖ್ಯ.

ಆಧಾರ: ‘ಜಿ. ಹನುಮಂತರಾವ್ ಅವರ ಆಯ್ದ ಲೇಖನಗಳು’ (ಸಂ: ದೇಜಗೌ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.