ವಿಜಯಪುರ: ‘ಇಲ್ನೋಡ್ರೀ... ನಾ ಖರೆ ಹೇಳ್ತೀನಿ. ಪತ್ರಕರ್ತರಲ್ಲಿ ಯಾರೂ ಕೆಟ್ಟವರಿಲ್ವಾ... ಎಲ್ರೂ ಒಳ್ಳೆಯವರೇ ಇದ್ದಾರಾ..! ನಿಮ್ಮಲ್ಲೂ ಕೆಟ್ಟವರು ಇದ್ದಾರೆ... ನಿಮ್ಗೊತ್ತಿಲ್ವಾ..!?’

ವಿಜಯಪುರದಲ್ಲಿ ಈಚೆಗೆ ರೌಡಿಗಳ ಪರೇಡ್ ನಡೆಸಿದ ಬಳಿಕ ಪತ್ರಕರ್ತರು, ‘ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಬಂದ ದೂರುದಾರನಿಂದ ಕಾನ್‌ಸ್ಟೆಬಲ್ ಒಬ್ಬರು ಲಂಚ ಪಡೆದಿದ್ದು ಸರಿಯೇ?’ ಎಂದು ಪ್ರಶ್ನಿಸಿದ್ದಕ್ಕೆ ಉತ್ತರ ವಲಯ ಐಜಿಪಿ ಅಲೋಕ್‌ಕುಮಾರ್ ನೀಡಿದ ಉತ್ತರವಿದು.

‘ಪೊಲೀಸರೂ ಮನುಷ್ಯರೇ. ಮಾನವ ಸಹಜ ದೌರ್ಬಲ್ಯಗಳು ಅವರಲ್ಲೂ ಇರ್ತಾವೆ. ಒಳ್ಳೆ ಕೆಲಸ ಮಾಡುವ ಪೊಲೀಸರನ್ನು ಗುರುತಿಸಿ ಪ್ರೋತ್ಸಾಹಿಸುತ್ತೇವೆ. ದೂರುಗಳು ಬಂದಾಗ ಯಾವುದೇ ಮುಲಾಜಿಲ್ಲದೆ ಇಲಾಖಾ ನಿಯಮಾ
ವಳಿಗಳ ಚೌಕಟ್ಟಿನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡ್ತೀವಿ.

‘ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಒಳ್ಳೆಯವರು– ಕೆಟ್ಟವರು ಇದ್ದೇ ಇರುತ್ತಾರೆ. ಇದರಲ್ಲಿ ಎರಡು ಮಾತಿಲ್ಲ. ಯಾರೋ ಒಬ್ಬ ತಪ್ಪು ಮಾಡಿದ ಎಂದು ಇಡೀ ಪೊಲೀಸ್ ಇಲಾಖೆಯನ್ನೇ ದೂರಕ್ಕಾಗುತ್ತಾ. ನಿಮ್ಮಲ್ಲೂ ಕೆಟ್ಟವರಿದ್ದಾರೆ ಎಂದು ಇಡೀ ಪತ್ರಕರ್ತರನ್ನು ದೂರುವುದು ಒಳ್ಳೆಯದೇನ್ರೀ. ಕ್ರಮ ತೆಗೆದುಕೊಳ್ಳದಿದ್ರೆ ಕೇಳಿ, ಸುಮ್ನೇ ಎಲ್ಲದಕ್ಕೂ ಆರೋಪಗಳನ್ನು ಮಾಡಬಾರದು’ ಎಂದು ಅಲೋಕ್‌ಕುಮಾರ್ ಹೇಳುತ್ತಿದ್ದಂತೆ, ಪತ್ರಕರ್ತರ ಸಮೂಹ ಪ್ರಶ್ನಾವಳಿಯ ಸ್ವರೂಪವನ್ನೇ ಬದಲಿಸಿಕೊಂಡಿತು. ಸುತ್ತಲೂ ನಿಂತಿದ್ದ ಪೊಲೀಸರು ಮುಗುಳ್ನಕ್ಕರು.

ಡಿ.ಬಿ.ನಾಗರಾಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.