ಈ ವರ್ಷವೂ ಮಾರ್ಚ್ ಎಂಟರಂದು ವಾಡಿಕೆಯಂತೆ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಲಿಂಗ ಸಮಾನತೆಯನ್ನು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ್ದು ಎಂದು ಅನೇಕರು ಭಾವಿಸಿದ್ದಾರೆ. ಇದು ಪೂರ್ಣ ಸತ್ಯವಲ್ಲ. ವಿಶ್ವಬ್ಯಾಂಕ್ 2012ರಲ್ಲಿಯೇ ತನ್ನ ವಿಶ್ವ ಅಭಿವೃದ್ಧಿ ವರದಿಯಲ್ಲಿ ‘ಲಿಂಗ ಸಮಾನತೆ’ಯನ್ನು ‘ಸ್ಮಾರ್ಟ್ ಎಕನಾಮಿಕ್ಸ್’ ಎಂದು ಕರೆದಿದೆ. ಆ ಮೂಲಕ ಅದಕ್ಕೆ ಆರ್ಥಿಕ ಆಯಾಮವಿದೆ ಎನ್ನುವುದನ್ನು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಅನುಲಕ್ಷಿಸಿ ಲಿಂಗ ಸಮಾನತೆ ಮತ್ತು ಅಭಿವೃದ್ಧಿ ನಡುವಿನ ಸಂಬಂಧ ಕುರಿತಂತೆ ಕೆಲವು ಸಂಗತಿಗಳನ್ನು ಇಲ್ಲಿ ಚರ್ಚೆ ಮಾಡಲಾಗಿದೆ.

ಜನಸಂಖ್ಯೆ ಬೆಳವಣಿಗೆಗೆ ಸಂಬಂಧಿಸಿದಂತೆ ಕರ್ನಾಟಕವು ಉತ್ತಮ ಸ್ಥಾನದಲ್ಲಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ– 5 (ಎನ್‍ಎಫ್‌ಎಚ್‍ಎಸ್) ವರದಿ ಪ್ರಕಾರ, ಒಟ್ಟು ಜನಸಂಖ್ಯೆಯ ಲಿಂಗ ಅನುಪಾತವು 2015- 16ರಲ್ಲಿ 979ರಷ್ಟಿದ್ದುದು 2019- 2020ರಲ್ಲಿ 1034ಕ್ಕೇರಿದೆ. ಮಹಿಳೆಯರ ದೃಷ್ಟಿಯಿಂದ ಇದೊಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದೇ ರೀತಿಯಲ್ಲಿ ಪ್ರತೀ ಮಹಿಳೆಯು ಪಡೆಯುವ ಸರಾಸರಿ ಮಕ್ಕಳ ಸಂಖ್ಯೆಯು (ಒಟ್ಟು ಸಂತಾನೋತ್ಪತ್ತಿ ಪ್ರಮಾಣ) ಇದೇ ಅವಧಿಯಲ್ಲಿ 1.8ರಿಂದ 1.7ಕ್ಕಿಳಿದಿದೆ. ಅಂದರೆ ಪ್ರತೀ ಮೂವರು ಮಹಿಳೆಯರಿಗೆ ಐವರು ಮಕ್ಕಳು. ಒಟ್ಟು ಸಂತಾನೋತ್ಪತ್ತಿ ಪ್ರಮಾಣ ಕಡಿಮೆಯಾಗಿರುವುದರಿಂದ ಮಹಿಳೆಯರಿಗೆ ಮತ್ತೆ ಮತ್ತೆ ಗರ್ಭಿಣಿಯರಾಗುವ ಪ್ರಮೇಯ ಬರುವುದಿಲ್ಲ. ಜನಗಣತಿ ಪ್ರಕಾರ, 2011ರಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ರಾಜ್ಯದಲ್ಲಿ ಪುರುಷರ ಸಾಕ್ಷರತೆಗಿಂತ ಶೇ 14.39ರಷ್ಟು ಕಡಿಮೆಯಿತ್ತು. ಈ ಅಂತರ 2019-2020ರಲ್ಲಿ ಶೇ 11.8ಕ್ಕಿಳಿದಿದೆ (ಎನ್‍ಎಫ್‍ಎಚ್‍ಎಸ್– 5 ವರದಿ). ಒಟ್ಟು ಅಕ್ಷರಸ್ಥರಲ್ಲಿ ಮಹಿಳೆಯರ ಸಂಖ್ಯೆಯು ಪುರುಷರ ಸಂಖ್ಯೆಗಿಂತ ಕಡಿಮೆ ಇದೆ.

ಅನೇಕ ಅಧ್ಯಯನಗಳು ಮತ್ತು ವರದಿಗಳು ದೃಢಪಡಿಸಿರುವಂತೆ ಲಿಂಗ ಸಮಾನತೆಯು ಅಭಿವೃದ್ಧಿಯ ಚಾಲಕಶಕ್ತಿ. ಇದನ್ನು ನಿರ್ಧರಿಸುವ ಬಹುಮುಖ್ಯ ಸೂಚಿಯೆಂದರೆ ಮಹಿಳೆಯರ ಶ್ರಮಶಕ್ತಿ ಸಹಭಾಗಿತ್ವ ಪ್ರಮಾಣ (ಲೇಬರ್ ಫೋರ್ಸ್ ಪಾರ್ಟಿಸಿಪೇಶನ್ ರೇಟ್). ವಿಶ್ವ ಲಿಂಗ ಅಸಮಾನತೆ ಸೂಚ್ಯಂಕ– 2021ರ ಪ್ರಕಾರ, 156 ದೇಶಗಳ ಪೈಕಿ ಲಿಂಗ ಅಸಮಾನತೆ ಸೂಚ್ಯಂಕದಲ್ಲಿ ಭಾರತದ ಸ್ಥಾನ 140. ಇದರ ನಾಲ್ಕು ಸೂಚಿಗಳಲ್ಲಿ ಒಂದಾದ ‘ಆರ್ಥಿಕ ಸಹಭಾಗಿತ್ವ ಮತ್ತು ಅವಕಾಶ’ದಲ್ಲಿ ಭಾರತದ ಸಾಧನೆ ಅತ್ಯಂತ ಕನಿಷ್ಠವಾಗಿದೆ (0.326). ಈ ಸೂಚಿಯಲ್ಲಿ ಭಾರತದ ಸ್ಥಾನ 151/156. ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಆರೋಗ್ಯ ಮತ್ತು ಬದುಕುಳಿಯುವ ಸೂಚಿಯಲ್ಲಿ ಜಗತ್ತಿನ 156 ದೇಶಗಳಲ್ಲಿ ಭಾರತದ ಸ್ಥಾನ 155. ಅಂದರೆ ಭಾರತದ ಸಂದರ್ಭದಲ್ಲಿ ಲಿಂಗ ಸಮಾನತೆಯು ಅಭಿವೃದ್ಧಿಯ ಚಾಲಕಶಕ್ತಿಯಾಗಿ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿಲ್ಲ.

ಮಹಿಳೆಯರ ಆರ್ಥಿಕ ಸಹಭಾಗಿತ್ವದ ಅಳತೆಯ ಸಾಧನವೆಂದರೆ ಮಹಿಳಾ ದುಡಿಮೆ ಸಹಭಾಗಿತ್ವ ಪ್ರಮಾಣ. ಕರ್ನಾಟಕದಲ್ಲಿ ಮಹಿಳೆಯರ ಶ್ರಮಶಕ್ತಿ ಸಹಭಾಗಿತ್ವ ಪ್ರಮಾಣ (ಒಟ್ಟು ಮಹಿಳಾ ಜನಸಂಖ್ಯೆಯಲ್ಲಿಮಹಿಳಾ ಉದ್ಯೋಗಿಗಳು ಮತ್ತು ಉದ್ಯೋಗಗಳನ್ನು
ಹುಡುಕುತ್ತಿರುವವರ ಪ್ರಮಾಣ) 2018-19ರಲ್ಲಿ ಶೇ 29.9. ಅಖಿಲ ಭಾರತ ಮಟ್ಟದಲ್ಲಿ ಇದು ಶೇ 17.5ರಷ್ಟಿದೆ. ಮಹಿಳೆಯರ ದುಡಿಮೆ ಸಹಭಾಗಿತ್ವವನ್ನು ಅಳತೆ ಮಾಡುವ ಮತ್ತೊಂದು ಸಾಧನವೆಂದರೆ ಪುರುಷರ ಕೂಲಿ ಅಥವಾ ಸಂಬಳದಲ್ಲಿ ಮಹಿಳೆಯರ ಕೂಲಿ ಅಥವಾ ಸಂಬಳದ ಶೇಕಡ ಪ್ರಮಾಣ. ಕರ್ನಾಟಕದಲ್ಲಿ ಇದರ ಪ್ರಮಾಣ 0.75. ಲಿಂಗ ಸಮಾನತೆಗೆ ಕೊರತೆ 0.25.

ವರಮಾನದಲ್ಲಿ ಲಿಂಗ ಅಸಮಾನತೆಯಿದೆ. ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣವು ಪುರುಷರ ದುಡಿಮೆ ಸಹಭಾಗಿತ್ವದ ಶೇ 34ರಷ್ಟಿದೆ. ಈ ಎಲ್ಲ ಸೂಚಿಗಳು ಕರ್ನಾಟಕದಲ್ಲಿನ ಮಹಿಳೆಯರ ಆರ್ಥಿಕ ಸಹಭಾಗಿತ್ವ ಕೆಳಮಟ್ಟದಲ್ಲಿದೆ ಮತ್ತು ಆರ್ಥಿಕ ಅವಕಾಶಗಳು ತುಂಬ ಸೀಮಿತವಾಗಿವೆ ಎಂಬುದನ್ನು ತೋರಿಸುತ್ತವೆ. ಮಹಿಳೆಯರ ದುಡಿಮೆ ಸಹಭಾಗಿತ್ವ ಮತ್ತು ಜಿಡಿಪಿ ಬೆಳವಣಿಗೆಯ ನಡುವೆ ಅನುಲೋಮ ಸಂಬಂಧವಿದೆ. ಅಭಿವೃದ್ಧಿಗೆ ಬಂಡವಾಳವೇ ಮೂಲದ್ರವ್ಯ ಎನ್ನುವುದನ್ನು ಒಪ್ಪಿದರೂ ಉಳಿಯುವ ಪ್ರಶ್ನೆ ಇದು: ಬಂಡವಾಳವಿಲ್ಲದೆಯೂ ಆರ್ಥಿಕತೆಯಲ್ಲಿ ಮಹಿಳೆಯರ ಸ್ಥಾನಮಾನವನ್ನು ಉತ್ತಮಪಡಿಸುವುದರ ಮೂಲಕ ಅಭಿವೃದ್ಧಿಯ ನಡೆಯನ್ನು ತೀವ್ರಗೊಳಿಸಬಹುದು. ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣವು ಪುರುಷರ ದುಡಿಮೆ ಸಹಭಾಗಿತ್ವ ಪ್ರಮಾಣದ ಮಟ್ಟಕ್ಕೆ ಏರಿದರೆ ಅದು ಆರ್ಥಿಕತೆಯ ಜಿಡಿಪಿ ಬೆಳವಣಿಗೆಯನ್ನು ಉತ್ತಮಪಡಿಸಬಹುದು.

ಕರ್ನಾಟಕದಲ್ಲಿ ಮಹಿಳೆಯರ ಉದ್ಯೋಗ ಸ್ಥಿತಿ ಉತ್ತಮವಾಗೇನಿಲ್ಲ. ರಾಜ್ಯದಲ್ಲಿನ ಒಟ್ಟು ಐಎಎಸ್ ಅಧಿಕಾರಿಗಳಲ್ಲಿ ಮಹಿಳೆಯರ ಪ್ರಮಾಣ ಶೇ 28ರಷ್ಟಿದ್ದರೆ ಹೈಕೋರ್ಟ್ ನ್ಯಾಯಮೂರ್ತಿಗಳಲ್ಲಿ ಮಹಿಳೆಯರ ಪ್ರಮಾಣ ಶೇ 28.46. ರಾಜ್ಯ ವಿಧಾನಸಭೆಯಲ್ಲಿ
ಮಹಿಳೆಯರ ಪ್ರಮಾಣ ಶೇ 3.51. ಮಹಿಳೆಯರ ರಾಜಕೀಯ ಸಬಲೀಕರಣ ಎಷ್ಟು ದುರ್ಬಲವಾಗಿದೆ ಎಂಬುದು ಇದರಿಂದ ತಿಳಿದುಬರುತ್ತದೆ. ರಾಜಕೀಯ ಪಕ್ಷಗಳು ಮಹಿಳೆಯರಿಗೆ ಚುನಾವಣೆಯಲ್ಲಿ ‘ಅವರು ಗೆಲ್ಲಲಾರರು’ ಎಂಬ ಸಬೂಬು ಹೇಳಿ ಅವರಿಗೆ ಅವಕಾಶ ನೀಡುತ್ತಿಲ್ಲ. ಇದನ್ನು ಒಂದುಪಕ್ಷ ಒಪ್ಪಿದರೂ ಸರ್ಕಾರವು ನೇಮಕ ಮಾಡುವ ವಿಶ್ವವಿದ್ಯಾಲಯಗಳ ಸಿಂಡಿಕೇಟು
ಗಳಲ್ಲಿ ಮತ್ತು ಅಕಾಡೆಮಿಗಳಲ್ಲಿ ಮಹಿಳೆಯರಿಗೆ ಅವಕಾಶ ದೊರೆಯದಿರುವುದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಉದಾ: ಕರ್ನಾಟಕದಲ್ಲಿನ ಕಲೆ, ಸಂಗೀತ, ಸಾಹಿತ್ಯ, ಭಾಷೆ ಮುಂತಾದ ಅಕಾಡೆಮಿಗಳ ಅಧ್ಯಕ್ಷರಲ್ಲಿ ಮಹಿಳೆ ಮತ್ತು ಪುರುಷರ ಅನುಪಾತ 2:16 ಮತ್ತು ಅವುಗಳ ಸದಸ್ಯರಲ್ಲಿ ಈ ಅನುಪಾತ 30:151.

ಕರ್ನಾಟಕದಲ್ಲಿ ರಾಜಕಾರಣಿಗಳು ಮತ್ತೆ ಮತ್ತೆ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ, ಸಂವೇದನಾರಹಿತವಾಗಿ ಮಾತನಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ‘ಗಂಡಸ್ಥನ’, ‘ಬಳೆ ತೊಟ್ಟುಕೊಂಡಿಲ್ಲ’ ಎಂಬ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡ ಬೈಗುಳಗಳನ್ನು ರಾಜಕೀಯವಾಗಿ ಉನ್ನತ ಸ್ಥಾನದಲ್ಲಿರುವ ಪುರುಷರು ಯಾವ ಬಿಡೆಯಿಲ್ಲದೆ ಬಳಸುತ್ತಿದ್ದಾರೆ.

ಒಕ್ಕೂಟ ಸರ್ಕಾರದ 2022- 23ರ ಬಜೆಟ್ಟಿನಲ್ಲಿ ಆರೋಗ್ಯಕ್ಕೆ ನೀಡಿರುವ ಅನುದಾನವು (₹ 1.24 ಲಕ್ಷ ಕೋಟಿ) ಒಟ್ಟು ಬಜೆಟ್ಟಿನ ಶೇ 3.14ರಷ್ಟಾಗುತ್ತದೆ ಮತ್ತು 2022- 23ರ ಅಂದಾಜು ಜಿಡಿಪಿಯ ಶೇ 0.48ರಷ್ಟಾಗುತ್ತದೆ. ಕರ್ನಾಟಕದ 2021- 22ರ ಬಜೆಟ್ಟಿನ ಒಟ್ಟು ವೆಚ್ಚದಲ್ಲಿ ಶೇ 3.99 ಆರೋಗ್ಯಕ್ಕೆ ನೀಡಲಾಗಿದೆ. ಸಾರ್ವಜನಿಕ ಆರೋಗ್ಯ ಸೇವೆಯ ಭಾಗವಾಗಿಯೇ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಸಂತಾನೋತ್ಪತ್ತಿ ಆರೋಗ್ಯವನ್ನೂ ನಿರ್ವಹಿಸಲಾಗುತ್ತಿದೆ.

ಇದರ ಪರಿಣಾಮವಾಗಿ ಮತ್ತು ಸಮಾಜದಲ್ಲಿನ ಲಿಂಗ ತಾರತಮ್ಯದ ಕಾರಣವಾಗಿ ಮಹಿಳೆಯರು ಮತ್ತು ಮಕ್ಕಳು (ಅನೀಮಿಯ) ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದಾರೆ. ಕರ್ನಾಟಕದಲ್ಲಿ 15ರಿಂದ 49 ವರ್ಷಗಳ ವಯೋಮಾನದ ಒಟ್ಟು ಮಹಿಳೆಯರಲ್ಲಿ ಅನೀಮಿಯಾ ಎದುರಿಸುತ್ತಿರುವವರ ಪ್ರಮಾಣ 2015- 16ರಲ್ಲಿ ಶೇ 60.9ರಷ್ಟಿದ್ದುದು 2019-2020ರಲ್ಲಿ ಶೇ 65.5ಕ್ಕೇರಿದೆ. ಅನೀಮಿಯ ಎದುರಿಸುತ್ತಿರುವ ಒಟ್ಟು ಗರ್ಭಿಣಿಯರಲ್ಲಿ ಇದರ ಪ್ರಮಾಣ ಶೇ 45.4ರಿಂದ ಶೇ 45.7ಕ್ಕೇರಿದೆ.

ಈಗಿರುವ ಅಸಮಾನತೆಗಳ ಜೊತೆಗೆ ‘ಡಿಜಿಟಲ್ ಅಸಮಾನತೆ’ ಎಂಬುದು ಹೊಸದಾಗಿ ಸೇರಿಕೊಂಡು ಲಿಂಗ ಅಸಮಾನತೆಯನ್ನು ಉಲ್ಬಣಗೊಳಿಸುತ್ತಿದೆ. ಎನ್‍ಎಫ್‍ಎಚ್‍ಎಸ್– 5 ವರದಿ ಪ್ರಕಾರ, 2019- 2020ರಲ್ಲಿ ರಾಜ್ಯದಲ್ಲಿ ಒಟ್ಟು ಮಹಿಳೆಯರಲ್ಲಿ ಇಂಟರ್‌ನೆಟ್ ಬಳಸುವವರ ಪ್ರಮಾಣ ಶೇ 35ರಷ್ಟಿದ್ದರೆ ಪುರುಷರಲ್ಲಿ ಇದರ ಪ್ರಮಾಣ ಶೇ 62.4ರಷ್ಟಿದೆ. ಮೊಬೈಲ್ ಬಳಸುವ ಮಹಿಳೆಯರ ಪ್ರಮಾಣ ಶೇ 61.8. ಒಕ್ಕೂಟ ಸರ್ಕಾರವು ಆರ್ಥಿಕತೆಯನ್ನು ಡಿಜಿಟಲೈಸ್ ಮಾಡುವ ದಿಸೆಯಲ್ಲಿ ದಾಪುಗಾಲಿಡುತ್ತಿದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಔಪಚಾರಿಕತೆಯನ್ನು ಬಿಟ್ಟು ಪ್ರಜ್ಞಾಪೂರ್ವಕವಾಗಿ ಮತ್ತು ಬದ್ಧತೆಯಿಂದ ರಾಜ್ಯದ ಅಭಿವೃದ್ಧಿಗಾಗಿ ಹಾಗೂ ಮಹಿಳೆಯರ ಉತ್ತಮ ಬದುಕಿಗಾಗಿ ಲಿಂಗ ಸಮಾನತೆಯನ್ನು ಸಾಧಿಸಿಕೊಳ್ಳಲು ಪ್ರಯತ್ನಿಸುವುದು ಅಪೇಕ್ಷಣೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.