ಅಮೆರಿಕದ ಅರ್ಥ ವ್ಯವಸ್ಥೆಯನ್ನು ಬಲಪಡಿಸುವುದಾಗಿ ನೀಡಿದ್ದ ಭರವಸೆಯನ್ನು ಡೊನಾಲ್ಡ್ ಟ್ರಂಪ್ ಈಡೇರಿಸಿಬಿಟ್ಟರೇನೋ ಎಂದು ಕಳೆದ ವರ್ಷ ಅನಿಸಿತ್ತು. ಅವರು ಮಾಡಿದ ತೆರಿಗೆ ಕಡಿತದಿಂದಾಗಿ ಬೆಳವಣಿಗೆ ದರ ಶೇಕಡ 3ಕ್ಕಿಂತ ಹೆಚ್ಚಾಗುವಂತೆ ಕಂಡುಬಂತು. ಆದರೆ, 2018ರ ಬೆಳವಣಿಗೆ ದರ ಶೇಕಡ 3ಕ್ಕಿಂತ ಕಡಿಮೆ ಇತ್ತು ಎಂದು ಅಮೆರಿಕದ ವಾಣಿಜ್ಯ ಇಲಾಖೆ ಹೇಳಿದೆ. ಹಾಗೆಯೇ, 2019ರಲ್ಲಿ ಬೆಳವಣಿಗೆ ದರ ಶೇಕಡ 2ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಇದು, ಅಮೆರಿಕದ ಬೆಳವಣಿಗೆ ದರ ಕಡಿಮೆ ಇರಲಿದೆ ಎಂಬ ನಿರಾಶಾದಾಯಕ ಚರ್ಚೆಗಳಿಗೆ ನಾಂದಿ ಹಾಡಿದೆ.

ಇದು, ಅಮೆರಿಕಕ್ಕೆ ಮಾತ್ರ ಸೀಮಿತವಾಗಿದ್ದಲ್ಲ. ಭರವಸೆ ನೀಡಿದ ಮಟ್ಟದಲ್ಲಿ ಬೆಳವಣಿಗೆ ಸಾಧಿಸಲು ಆಗದಿರುವುದು ಟ್ರಂಪ್ ಅವರಿಗೆ ಮಾತ್ರವೇ ಅಲ್ಲ. 2008ರ ಆರ್ಥಿಕ ಹಿಂಜರಿತದ ನಂತರ ಬಹುತೇಕ ವರ್ಷಗಳಲ್ಲಿ ಅರ್ಥಶಾಸ್ತ್ರಜ್ಞರು ಬೆಳವಣಿಗೆ ದರದ ಅಂದಾಜನ್ನು ತಗ್ಗಿಸಬೇಕಾಯಿತು.

ಬೆಳವಣಿಗೆ ದರದ ಅಂದಾಜು ಆಶಾದಾಯಕವಾಗಿದ್ದ ಹೊತ್ತಿನಲ್ಲೂ ಜಪಾನ್ ದೇಶ ಶೇಕಡ 1ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸಿದ್ದು ಅಪರೂಪ. ಶೇಕಡ 1.5ಕ್ಕಿಂತ ಹೆಚ್ಚಿನ ಬೆಳವಣಿಗೆ ದರ ಕಾಯ್ದುಕೊಳ್ಳಲು ಯುರೋಪ್ ಹರಸಾಹಸಪಡುತ್ತಿದೆ. ಚೀನಾದ ಬೆಳವಣಿಗೆ ದರ ಎಷ್ಟಿದೆ ಎಂಬುದು ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಆದರೆ, ಅಲ್ಲಿನ ಅರ್ಥವ್ಯವಸ್ಥೆ ಮಂದಗತಿಗೆ ತಿರುಗಿದೆ ಎಂಬುದು ಖಚಿತ. ಹಾಗಾದರೆ, ಅರ್ಥಶಾಸ್ತ್ರವು ತೀರಾ ಆಶಾದಾಯಕ ಎಂಬಂತಹ ಚಿತ್ರಣವನ್ನು ಇದುವರೆಗೆ ಕಟ್ಟಿಕೊಟ್ಟಿದ್ದಕ್ಕೆ ಕಾರಣವೇನು?

ಎರಡನೆಯ ವಿಶ್ವಯುದ್ಧದ ನಂತರ ವಿಶ್ವದ ಜನಸಂಖ್ಯೆ ಹೆಚ್ಚಾಯಿತು, ಉತ್ಪಾದಕತೆ ಹೆಚ್ಚಿತು, ಸಾಲ ನೀಡುವಿಕೆ ಹೆಚ್ಚಿತು. ಇವೆಲ್ಲ ಬೆಳವಣಿಗೆ ದರ ಹೆಚ್ಚಿಸಿದವು. ಅಂತಹ ಪರಿಸ್ಥಿತಿಯನ್ನು ಆಧಾರವಾಗಿ ಇರಿಸಿಕೊಂಡು ಅರ್ಥಶಾಸ್ತ್ರಜ್ಞರು ಮುಂದಿನ ಬೆಳವಣಿಗೆ ಅಂದಾಜಿಸುತ್ತಾರೆ. ಆದರೆ, 2008ರ ಸುಮಾರಿಗೆ ಜನಸಂಖ್ಯೆ ಹಾಗೂ ಉತ್ಪಾದಕತೆಯ ಹೆಚ್ಚಳ ಬಹುತೇಕ ಸ್ಥಗಿತಗೊಂಡಿತ್ತು. ಇದು ಸಾಲ ಕೊಡುವ-ಪಡೆಯುವ ವ್ಯಸನಕ್ಕೆ ಅಂತ್ಯ ಹಾಡಿತು.

ಸುವರ್ಣ ಯುಗವನ್ನು ಪುನಃ ಸೃಷ್ಟಿಸುವುದಾಗಿ ರಾಜಕಾರಣಿಗಳು ಹೇಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಗಂಭೀರ ಚಿಂತನೆಯ ಅರ್ಥಶಾಸ್ತ್ರಜ್ಞರು ಕೂಡ ಅಂತಹ ಭ್ರಮೆಗಳನ್ನು ಪೋಷಿಸುತ್ತಾರೆ. ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ಕೂಡ ವಿಶ್ವದ ಅರ್ಥ ವ್ಯವಸ್ಥೆ ಶೇಕಡ 2.5ರಷ್ಟಕ್ಕಿಂತ ಹೆಚ್ಚಿನ ಬೆಳವಣಿಗೆ ದಾಖಲಿಸಿದ್ದು ಅಪರೂಪ. ಆದರೆ, 1950ರ ನಂತರ ಹೆಚ್ಚು ಕಾರ್ಮಿಕರು ಮತ್ತು ಹೆಚ್ಚು ಉತ್ಪಾದನೆ ಎನ್ನುವ ಸಮೀಕರಣವು ವಿಶ್ವದ ಬೆಳವಣಿಗೆ ದರ ಶೇಕಡ 4ಕ್ಕಿಂತ ಹೆಚ್ಚುವಂತೆ ಮಾಡಿತು. ‘ಶೇಕಡ 4ರಷ್ಟು’ ಎಂಬುದು ಸಹಜ ಎಂದು ಅರ್ಥಶಾಸ್ತ್ರಜ್ಞರು ನಂಬಿದರು. ಆದರೆ, ಕಳೆದ ದಶಕದ ಹೊತ್ತಿಗೆ ಜನನ ಪ್ರಮಾಣದ ಹೆಚ್ಚಳ ಜಪಾನ್, ಚೀನಾ, ಯುರೋಪ್ಗಳಲ್ಲಿ ಇಲ್ಲವಾಗಿತ್ತು. ಅಮೆರಿಕದಲ್ಲಿ ಕೂಡ ಕೆಲಸ ಮಾಡುವ ವಯಸ್ಸಿನವರ ಜನಸಂಖ್ಯೆಯ ಹೆಚ್ಚಳವು ಕಳೆದ ವರ್ಷ ಶೇಕಡ 0.2ರಷ್ಟಕ್ಕೆ ಕುಸಿಯಿತು. ಇದು 2000ನೇ ದಶಕದ ಆರಂಭದಲ್ಲಿ ಶೇಕಡ 1.2ರಷ್ಟಿತ್ತು. ಕಾರ್ಮಿಕರು ಕಡಿಮೆ ಇರುವುದಕ್ಕೂ ಆರ್ಥಿಕ ಬೆಳವಣಿಗೆ ದರಕ್ಕೂ ನೇರ ಸಂಬಂಧ ಇರುವ ಕಾರಣ, ಕಾರ್ಮಿಕರ ಸಂಖ್ಯೆಯ ಕುಸಿತವು ಆರ್ಥಿಕ ಬೆಳವಣಿಗೆ ದರದಲ್ಲಿ ಶೇಕಡ 1ರಷ್ಟು ಕುಸಿತ ತಂದಿತು.

ಅಮೆರಿಕದ ಆರ್ಥಿಕ ಬೆಳವಣಿಗೆ ದರ ಶೇಕಡ 3ರಷ್ಟಿದ್ದಿದ್ದು, ಶೇಕಡ 2ಕ್ಕೆ ಇಳಿಯುತ್ತದೆ ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಬೇಕಿತ್ತು. ಟ್ರಂಪ್ ಅವರ ತೆರಿಗೆ ಕಡಿತದ ಉತ್ತೇಜಕ ಕ್ರಮಗಳು ತಾತ್ಕಾಲಿಕವಾಗಿ ಬೆಳವಣಿಗೆ ದರ ಹೆಚ್ಚಿಸಬಲ್ಲವು. ಮಂದಗತಿಯ ಆರ್ಥಿಕ ಬೆಳವಣಿಗೆ ಎಂಬುದು ರಾಜಕಾರಣಿಗಳ ಪಾಲಿಗೆ ಸವಾಲು ಅಲ್ಲ. ಇದು ಅವರು ಒಪ್ಪಿಕೊಂಡು, ಜನರಿಗೆ ಅರಿವು ಮಾಡಿಕೊಡಬೇಕಾದ ವಾಸ್ತವ. ಏಕೆಂದರೆ, ಇದು ಅಷ್ಟೊಂದು ಕೆಟ್ಟದ್ದೇನೂ ಅಲ್ಲ.

ಕೆಲಸ ಮಾಡುವ ವಯಸ್ಸಿನವರ ಸಂಖ್ಯೆಯ ಬೆಳವಣಿಗೆ ಮಂದವಾಗಿದೆ ಎಂದರೆ, ಉದ್ಯೋಗಾವಕಾಶಗಳಿಗೆ ಕಡಿಮೆ ಸ್ಪರ್ಧೆ ಇದೆ ಎಂದೂ ಅರ್ಥ. ನಿರುದ್ಯೋಗ ಪ್ರಮಾಣವು ಇಂದು ಅಮೆರಿಕ ಮಾತ್ರವಲ್ಲದೆ ಜಪಾನ್, ಜರ್ಮನಿಯಲ್ಲಿ ಕೂಡ ದಾಖಲೆಯ ಕಡಿಮೆ ಪ್ರಮಾಣದಲ್ಲಿ ಏಕಿದೆ ಎಂಬುದನ್ನು ಇದು ವಿವರಿಸುತ್ತದೆ. ಅರ್ಥವ್ಯವಸ್ಥೆಯ ಬೆಳವಣಿಗೆಯನ್ನು ತರುವುದು ಕಾರ್ಮಿಕರ ಸಂಖ್ಯೆಯಲ್ಲಿನ ಹೆಚ್ಚಳ ಮತ್ತು ತಲಾವಾರು ಉತ್ಪಾದಕತೆ. ಆದರೆ, 1950 ಹಾಗೂ 60ರ ದಶಕದ ಅವಧಿಯ ನಂತರ, ಉತ್ಪಾದಕತೆಯ ಬೆಳವಣಿಗೆ ಕಡಿಮೆಯಾಗಿದೆ. 1980ರ ದಶಕದಲ್ಲಿ ಕೇಂದ್ರೀಯ ಬ್ಯಾಂಕ್ಗಳು ಹಣದುಬ್ಬರ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಲು ಆರಂಭಿಸಿದವು. ಇದು ಬಡ್ಡಿ ದರ ಕುಸಿಯಲು ಕಾರಣವಾಯಿತು. ಸಾಲದ ಬಡ್ಡಿ ದರ ಕಡಿಮೆಯಾದ ಕಾರಣ, ಪ್ರಪಂಚದಾದ್ಯಂತ ಸಾಲ ನೀಡಿಕೆ ಹೆಚ್ಚಾಯಿತು. 1980ರ ದಶಕದ ಕೊನೆಯಲ್ಲಿ ವಿಶ್ವದ ಜಿಡಿಪಿಯ (ಒಟ್ಟು ಆಂತರಿಕ ಉತ್ಪಾದನೆ) ಶೇಕಡ 100ರಷ್ಟು ಇದ್ದ ಸಾಲದ ಪ್ರಮಾಣ 2008ರೊಳಗೆ ಶೇಕಡ 300ರಷ್ಟಕ್ಕೆ ಏರಿತು.

ಆಗ ವಿಶ್ವ ಆರ್ಥಿಕ ಹಿಂಜರಿತ ಎದುರಾಯಿತು. ಸಾಲ ಪಡೆದ ಹಾಗೂ ಸಾಲ ಕೊಟ್ಟ ಖಾಸಗಿ ಕ್ಷೇತ್ರದ ಹಲವರು ತೊಂದರೆಗೆ ಸಿಲುಕಿದರು. ಅವರಲ್ಲಿ ಬಹುತೇಕರು ಇಂದಿಗೂ ಹೊಸ ಸಾಲ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅರ್ಥವ್ಯವಸ್ಥೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆದ ಸಾಲ ನೀಡಿಕೆ ಪ್ರಮಾಣ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಅರ್ಥವ್ಯವಸ್ಥೆಯ ಬೆಳವಣಿಗೆ ದರದ ಸಮಕ್ಕೆ ಬಂದು ನಿಂತಿದೆ. 2008ರ ನಂತರವೂ ಹೆಚ್ಚಿನ ಸಾಲ ನೀಡಿಕೆಗೆ ಸಾಕ್ಷಿಯಾಗಿದ್ದ ಚೀನಾಕ್ಕೆ ಕೂಡ ಈಗ ಸಾಲದ ಬೆಟ್ಟ ಎತ್ತರವಾಗಲು ಬಿಡುವ ಮನಸ್ಸಿಲ್ಲ. ಹಾಗಾಗಿ, ವಿಶ್ವಯುದ್ಧದ ನಂತರದ ಪವಾಡದ ಸ್ಥಿತಿ ಈಗ ಮುಗಿದು ಹೋಗಿದೆ. ಆದರೆ, ಅರ್ಥಶಾಸ್ತ್ರಜ್ಞರು ತಮ್ಮ ಅಂದಾಜುಗಳನ್ನು ಆ ಅವಧಿಯ ಬೆಳವಣಿಗೆ ಆಧರಿಸಿ ಮಾಡುತ್ತಿರುವ ಕಾರಣ, ಆ ಗುರಿ ತಲುಪಲು ನೀತಿ ನಿರೂಪಕರು ಒದ್ದಾಡುತ್ತಿದ್ದಾರೆ. ಬೆಳವಣಿಗೆಗೆ ಇಂಬು ಕೊಡಲು ಬಡ್ಡಿ ದರ ಇಳಿಸಬೇಕು ಅಥವಾ ಸರ್ಕಾರಿ ಹೂಡಿಕೆ ಹೆಚ್ಚಿಸಬೇಕು ಎಂದು ಬಲ–ಎಡ ಪಂಥಗಳ ಅರ್ಥಶಾಸ್ತ್ರಜ್ಞರು ಆಗ್ರಹಿಸುತ್ತಿದ್ದಾರೆ. ಅದರಿಂದ ಹಣದುಬ್ಬರ ಹೆಚ್ಚಿದರೂ ಚಿಂತೆಯಿಲ್ಲ ಎನ್ನುತ್ತಿದ್ದಾರೆ.

ಹಣದುಬ್ಬರ ದರವನ್ನು ಶೇಕಡ 2ಕ್ಕಿಂತ ಹೆಚ್ಚಲು ಬಿಡುವುದು ಅವಿವೇಕದ ನಡೆಯೇನೂ ಅಲ್ಲ ಎಂಬ ದೃಷ್ಟಿಕೋನ ಅಮೆರಿಕದ ಕೇಂದ್ರೀಯ ಬ್ಯಾಂಕ್ನಲ್ಲಿ ಕೂಡ ಜೀವ ತಳೆದಿದೆ. ವಾರ್ಷಿಕ ಶೇಕಡ 2ರಷ್ಟು ಜಿಡಿಪಿ ಬೆಳವಣಿಗೆ ದರ ತೀರಾ ಕಡಿಮೆ ಎಂಬ ನಂಬಿಕೆ ಇಂತಹ ವಾದದ ಹಿಂದಿದೆ. ಹಾಗಾದರೆ, ಇದು ಸರಿಯೇ. ದಾಖಲೆಯ ಕಡಿಮೆ ಮಟ್ಟದ ನಿರುದ್ಯೋಗ ಪ್ರಮಾಣ, ಸಹನೀಯ ಹಣದುಬ್ಬರ, ತಲಾವಾರು ಜಿಡಿಪಿಯಲ್ಲಿ ಶೇಕಡ 1.4ರಷ್ಟು ಹೆಚ್ಚಳ ತೃಪ್ತಿ ತಂದಿದೆ ಎಂದು ಅಮೆರಿಕನ್ನರು ಹೇಳುತ್ತಿರುವುದನ್ನು ಸಮೀಕ್ಷೆಗಳು ಕಂಡುಕೊಂಡಿವೆ. ಹೀಗಿರುವಾಗ, ಸಾಲದ ಸಮಸ್ಯೆ ಹಾಗೂ ಹಣದುಬ್ಬರ ಹೆಚ್ಚಿಸುವ ರೀತಿಯಲ್ಲಿ ಅರ್ಥವ್ಯವಸ್ಥೆಗೆ ಇನ್ನಷ್ಟು ಹಣ ಹರಿಸುವುದು ಏಕೆ?

ಜನಸಂಖ್ಯೆ ಹೆಚ್ಚಳ ಪ್ರಮಾಣ ಕಡಿಮೆ ಆಗುತ್ತಿರುವ ಹಾಗೂ ಸಾಲದ ಪ್ರಮಾಣ ಹೆಚ್ಚಿರುವುದನ್ನು ಎದುರಿಸಲು ಬೇಕಿರುವುದು ಇನ್ನಷ್ಟು ಸಾಲ ಹಾಗೂ ಇನ್ನೂ ಹೆಚ್ಚಿನ ಹಣದುಬ್ಬರ ಅಲ್ಲ. ಬದಲಿಗೆ, ಅರ್ಥಶಾಸ್ತ್ರಜ್ಞರು ತಮ್ಮ ಅಂದಾಜನ್ನು ಪುನಃ ಲೆಕ್ಕಹಾಕಬೇಕು, ವಾಸ್ತವಕ್ಕೆ ಹೊಂದಿಕೆ ಆಗುವಂತೆ ರಾಜಕಾರಣಿಗಳು ತಮ್ಮ ನೀತಿಗಳ ಬಗ್ಗೆ ಪುನರ್ ಅವಲೋಕನ ನಡೆಸಬೇಕು.

- ದಿ ನ್ಯೂಯಾರ್ಕ್ ಟೈಮ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.