ಒಳ್ಳೆಯ ಶಾಲೆಗೆ ಮಕ್ಕಳನ್ನು ಕಳಿಸುವುದು ಶ್ರೀಮಂತಿಕೆಯ ಲಕ್ಷಣವೇ? ಸರ್ಕಾರಿ ಶಾಲೆಗೆ ಸೇರಿಸುವುದು ಬಡತನಕ್ಕೆ ಸರ್ಟಿಫಿಕೇಟೇ? ಸರ್ಕಾರಿ ಶಾಲೆಯಲ್ಲಿ ಓದುವವರೆಲ್ಲ ಬಡವರೇ? ಬಸ್ ಪಾಸ್ ನಿಲ್ಲಿಸಿರುವುದರಿಂದ ಶಾಲೆಗಳಲ್ಲಿಶೇ 12ರಷ್ಟು ಹಾಜರಾತಿ ಕಡಿಮೆಯಾಗಿದೆ ಎಂಬುದು ಸಾಕ್ಷರತಾ ಅಭಿಯಾನಕ್ಕೆ ಆದ ಹಿನ್ನಡೆ ಅಲ್ಲವೇ?

ಜಾತಿ, ಧರ್ಮ, ಅಂತಸ್ತುಗಳ ಭೇದವನ್ನು ಅಳಿಸಿ, ಸದೃಢ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ಹೊತ್ತಿರುವ ಸರ್ಕಾರ, ಮಕ್ಕಳಲ್ಲಿ ಪಂಕ್ತಿಭೇದ ಮಾಡಿ ಜಾತಿ, ಬಡವ– ಬಲ್ಲಿದ ಪ್ರಜ್ಞೆ ಜಾಗೃತಗೊಳಿಸುವುದು ಎಷ್ಟು ಸಾಧು?

ಉಚಿತವಾಗಿ ಬಸ್ ಪಾಸ್ ಕೊಡುವ ವಿಚಾರಜೆಡಿಎಸ್ ಪ್ರಣಾಳಿಕೆಯಲ್ಲಿ ಇಲ್ಲದಿರಬಹುದು. ಆದರೆಅದರ ಮಿತ್ರ ಪಕ್ಷ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವುದರಿಂದ ಕಾಂಗ್ರೆಸ್ ನೀಡಿದ ಭರವಸೆಯನ್ನೂ ಉಳಿಸಿ ಅದರ ಗೌರವ ಕಾಯುವುದು ಕರ್ತವ್ಯ ಅಲ್ಲವೇ? ಶಿಕ್ಷಣ ಕ್ಷೇತ್ರವನ್ನಾದರೂ ರಾಜಕೀಯದಿಂದ ದೂರವಿಡುವ ಪ್ರೌಢಿಮೆಯನ್ನು ಸರ್ಕಾರ ತೋರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.