ಒಂದು ಕತೆ ಕೇಳಿ...

ಒಳ್ಳೆ ಪುಣ್ಯಾತ್ಮರ ಮನೆ ಅದು. ಸದ್ಭಾವನೆ, ಸದಾಚಾರ, ಸತ್ಕಾರ್ಯಗಳನ್ನು ನಡೆಸುತ್ತಾ ಬಾಳಿ ಬದುಕಿದ ಮನೆ. ದಾನ ಕೊಡುವುದು ಎಂದರೆ ಅದರಲ್ಲೊಂದು ಅಹಂಭಾವವಿರುತ್ತದೆ. ದಾಸೋಹ ಎಂದರೆ ಅದು ವಿನಯ. ಅದು ಆ ಮನೆಯವರಿಗೆ ಗೊತ್ತಿತ್ತು. ಆದ್ದರಿಂದ ಆ ಮನೆಗೆ ದೇಹಿ ಎಂದು ಬಂದವರನ್ನು ಗೌರವದಿಂದ ಸತ್ಕರಿಸಿ ಜೋಳಿಗೆ ತುಂಬಿ ಕಳುಹಿಸುತ್ತಿದ್ದರು- ದಾನ ಪ್ರತಿಷ್ಠೆಯಿಂದಲ್ಲ, ದಾಸೋಹ ಭಾವದಿಂದ.

ಹೀಗಿರುತ್ತಿರಲಾಗಿ ಅದೊಂದು ದಿನ ಅವರ ಮನೆಗೊಬ್ಬ ಭಿಕ್ಷುಕ ಬಂದ. ಈ ಮನೆಯ ಮುಂದೆ ನಿಂತು ‘ಅಮ್ಮಾ ತಾಯಿ ಭಿಕ್ಷೆ...’ ಅಂತ ಕೂಗಿದ. ಕೂಡಲೇ ಆ ಮನೆಯ ಗೃಹಸ್ಥ ಗೃಹಿಣಿಯರಿಬ್ಬರೂ ಹೊರಬಂದು ಆ ಭಿಕ್ಷುಕನನ್ನು ಕಾರುಣ್ಯದಿಂದ ಕೈಹಿಡಿದು ಮನೆಯೊಳಗೆ ಕರೆದೊಯ್ದರು. ಕೈಕಾಲು ತೊಳೆಯಲು ನೀರು ಕೊಟ್ಟು ಮಣೆ ಹಾಕಿ ಕುಳ್ಳಿರಿಸಿದರು. ಹಸಿರು ಬಾಳೆಯೆಲೆಯ ಮೇಲೆ ಬಗೆಬಗೆ ಭಕ್ಷ್ಯಾನ್ನಗಳನ್ನು ಬಡಿಸಿದರು. ಭಿಕ್ಷುಕನಿಗೆ ಹೊಟ್ಟೆ ಬಿರಿಯುವಷ್ಟು ಊಟ ಮಾಡಿಸಿದರು. ಅವನಿಗೆಷ್ಟು ಸಂತೋಷವಾಯಿತೋ ಅದರ ಇಮ್ಮಡಿ ಸಂತೋಷವಾಯಿತು ಆ ಮನೆಯ ಗೃಹಸ್ಥ ಗೃಹಿಣಿಯರಿಗೆ. ಭೋಜನವಾದ ನಂತರ ಭಿಕ್ಷುಕನ ಜೋಳಿಗೆಗೂ ತುಂಬಿ ಗೌರವದಿಂದ ಬೀಳ್ಕೊಟ್ಟರು.

ಮನೆಯಿಂದ ಹೊರಬಂದ ಮೇಲೆ ಆ ಭಿಕ್ಷುಕ ಅಂದುಕೊಂಡ- ‘ಎಲ್ಲ ಎಲಾ, ಈ ಮನೆಯವರು ಈ ಪರಿ ನನ್ನನ್ನು ಉಪಚರಿಸಿ ಗೌರವಿಸಿ ಕಳುಹಿಸಿಕೊಟ್ಟರಲ್ಲಾ... ಹೌದು, ನಾನು ದೇವರೇ ಇರಬೇಕು. ಅಷ್ಟಲ್ಲವಾದರೆ ಇಷ್ಟನ್ನೆಲ್ಲಾ ಸುಮ್ಮನೆ ಮಾಡುತ್ತಾರಾ?’

ಇದಾದ ಮೇಲೆ ಅದೇ ಮನೆಗೆ ಮತ್ತೊಬ್ಬ ಭಿಕ್ಷುಕ ಬಂದ. ‘ಅಮ್ಮಾ ಭಿಕ್ಷೆ...’ ಅಂದ. ಆ ಗೃಹಸ್ಥ ಗೃಹಿಣಿಯರು ಯಥಾ ಪ್ರಕಾರ ಮನೆಯಿಂದ ಹೊರಗೆ ಬಂದು ಕೈಹಿಡಿದು ಕರೆದೊಯ್ದು ಬಗೆಬಗೆ ಭಕ್ಷ್ಯಾನ್ನಗಳನ್ನು ಬಡಿಸಿ ಉಪಚರಿಸಿ, ಜೊತೆಗೆ ಅವನ ಜೋಳಿಗೆಯನ್ನೂ ತುಂಬಿಸಿ ಗೌರವ ಮರ್ಯಾದೆಗಳಿಂದ ಕಳುಹಿಸಿಕೊಟ್ಟರು.

ಆ ಭಿಕ್ಷುಕ ಹೊರಗೆ ಬಂದ ಮೇಲೆ ತನ್ನಲ್ಲಿಯೇ ಅಂದುಕೊಂಡ- ಆಹಾ, ನನ್ನಂಥ ಯಃಕಶ್ಚಿತ್ ಭಿಕ್ಷುಕನನ್ನು ಈ ಪರಿ ಗೌರವ ಮರ್ಯಾದೆಗಳಿಂದ ಸತ್ಕರಿಸಿ ಕಳುಹಿಸಿದರಲ್ಲಾ, ಇವರು ದೇವರೇ ಇರಬೇಕು. ಅಷ್ಟಲ್ಲವಾದರೆ ಇಷ್ಟೆಲ್ಲಾ ಮಾಡುತ್ತಿದ್ದರಾ?

ಕತೆಯ ಒಳಧ್ವನಿ ನಿಮಗೆ ಕೇಳಿಸಿದೆ ಅಂದುಕೊಳ್ಳುತ್ತೇನೆ. ಇದಕ್ಕೆ ದೀರ್ಘ ವ್ಯಾಖ್ಯಾನವೇನೂ ಬೇಕಿಲ್ಲ. ಜಗತ್ತಿನಲ್ಲಿ ನಾವು ಯಾರಿಂದಲೋ, ಎಲ್ಲಿಯೋ, ಏನೆಲ್ಲಾ ಪಡೆಯುತ್ತೇವೆ. ಅದಕ್ಕೆಲ್ಲಾ ನಾವು ಬಾಧ್ಯರು, ಅರ್ಹರು, ಅಂದುಕೊಳ್ಳುವುದು ಅಹಂಕಾರ. ಅದು ಕೊಟ್ಟವರ ಔದಾರ್ಯ, ಪ್ರೀತಿ ಅಂದುಕೊಳ್ಳುವುದು ವಿನಯ.

ಆ ಎರಡನೆಯ ಭಿಕ್ಷುಕ ಅಂದುಕೊಂಡದ್ದು ಸರಿ ಅನ್ನಿಸಬೇಕು ನಮಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.