ನೊಬೆಲ್ ಪ್ರಶಸ್ತಿ ಸ್ಥಾಪಿಸಿದವನ ಹೆಸರು ಅಲ್ಫ್ರೆಡ್ ನೊಬೆಲ್ ಅಂತ. ಸ್ವೀಡನ್ ದೇಶದ ಕೆಮಿಸ್ಟ್. ಅವ ಡೈನಾಮೈಟ್ ಕಂಡು ಹಿಡಿದ. ಅವ ಅದನ್ನು ಒಳ್ಳೆಯ ಉದ್ದೇಶಕ್ಕೇ ಕಂಡುಹಿಡಿದಿದ್ದ. ಆದರೆ ಅದನ್ನು ಯುದ್ಧಗಳಲ್ಲಿ ಬಳಸಲಾಗುತ್ತಿತ್ತು. ನಾಗರಿಕ ಯುದ್ಧಗಳಿಗೂ ಬಳಸಲಾಯಿತು. ಅದರಿಂದ ಸಾಕಷ್ಟು ಜನರು ಸತ್ತರು. ಆದರೆ ಪೇಟೆಂಟ್ ಇವನ ಬಳಿಯೇ ಇದ್ದಿದ್ದರಿಂದ ದುಡ್ಡು ಬಹಳ ಬರುತ್ತಿತ್ತು. ಇವನ ಅಣ್ಣ ಲುಡ್ವಿಕ್ ನೊಬೆಲ್ ಅಂತ ಇದ್ದ. ಅವ ಒಂದಿನ ಸತ್ತು ಹೋದ. ಆದರೆ ಪೇಪರ್ನವರಿಗೆ ಅಲ್ಫ್ರೆಡ್ ನೊಬೆಲ್ ತೀರಿಕೊಂಡ ಎಂಬ ಸುದ್ದಿ ಮುಟ್ಟಿತು. ಮಾರನೆ ದಿನ ಎಲ್ಲ ಪತ್ರಿಕೆಗಳಲ್ಲಿ ಅಲ್ಫ್ರೆಡ್ ನೊಬೆಲ್ ತೀರಿಕೊಂಡ ಎಂದೇ ಸುದ್ದಿ ಬಂತು.

ಪೇಪರ್ನವರು ‘ಸಾವಿನ ವ್ಯಾಪಾರಿ ಅಲ್ಫ್ರೆಡ್ ನೊಬೆಲ್ ನಿಧನ’ ಅಂತ ಸುದ್ದಿ ಹಾಕಿದ್ದರು. ಅದನ್ನು ನೋಡಿ ನೊಬೆಲ್ಗೆ ಆಘಾತವಾಯಿತು. ತಾನು ಜೀವಂತ ಇರುವಾಗಲೇ ಜಗತ್ತು ತನ್ನನ್ನು ಸಾವಿನ ವ್ಯಾಪಾರಿ ಅಂತ ಗುರುತಿಸಿತಲ್ಲ ಎಂದು ದುಃಖವಾಯಿತು. ತಾನು ಒಳ್ಳೆಯ ಉದ್ದೇಶಕ್ಕೇ ಡೈನಾಮೈಟ್ ಕಂಡು ಹಿಡಿದಿರಬಹುದು. ಆದರೆ ಅದು ತುಂಬಾ ಜನರ ಸಾವಿಗೆ ಕಾರಣವಾಯಿತಲ್ಲ ಎಂಬ ವಿವೇಕ ಅವನಲ್ಲಿ ಮೂಡಿತು. ಇನ್ನು ಮುಂದೆ ತಾನು ತಪ್ಪು ಮಾಡಬಾರದು ಎಂದು ತೀರ್ಮಾನಿಸಿದ. ಆತನ ವಿವೇಕ ಜಾಗೃತವಾಯಿತು. ಅದಕ್ಕಾಗಿಯೇ ತನಗೆ ಬಂದಿದ್ದ ಹಣದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಸ್ಥಾಪಿಸಿದ. ಅದರ ಮೂಲಕವೇ ದಲೈಲಾಮಾ, ಮದರ್ ತೆರೆಸಾ ಅಂಥವರಿಗೆ ನೊಬೆಲ್ ಪ್ರಶಸ್ತಿ ಬಂತು.

ಯಾರನ್ನು ಈ ಜಗತ್ತು ಸಾವಿನ ದೂತ ಅಂತ ಕರೆದಿತ್ತೋ ಅದೇ ವ್ಯಕ್ತಿ ಒಂದು ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಅದೇ ಜಗತ್ತು ಅವನನ್ನು ಶಾಂತಿ ದೂತ ಎಂದು ಕರೆಯಿತು. ಜೀವನದಲ್ಲಿ ವಿವೇಕ ಇರಬೇಕು. ದೇವರು ಈ ಆಯುಷ್ಯ ಏನು ಕೊಟ್ಟಾನ, ಅದನ್ನು ಒಳ್ಳೆಯ ಕೆಲಸ ಮಾಡಲು ಬಳಸಿಕೊಳ್ಳಬೇಕು. ಅದಕ್ಕೆ ನಿಜಗುಣ ಶಿವಯೋಗಿಗಳು ‘ದುರಿತ ಕರ್ಮವನಲ್ಲದಿರು ಪುಣ್ಯವನೆ ಮಾಡು’ ಅಂತ ಹೇಳಿದರು. ಕೆಟ್ಟ ಕೆಲಸ ಮಾಡೋರು, ಲಂಚ ತಗಳೋರು ಒಳ್ಳೆ ಮನೆ ಕಟ್ಟಿಸಿಕೊಂಡು, ಕಾರ್ ತಗಂಡು ಚೆನ್ನಾಗಿದ್ದಾರೆ. ನಮ್ಮದು ನೋಡಿ ಹಿಂದೆ ಹಿತ್ತಲಾಗಿಲ್ಲ, ಮುಂದಕ್ಕೆ ಬೇಲಿಯಾಗಿಲ್ಲ ಅಂತೀರಿ ನೀವು. ಆದರೆ ದೇವರು ಅದ್ಭುತ ಜೀವನ ಕೊಟ್ಟಾನ ಇದಕ್ಕೆ ಕಿಮ್ಮತ್ತು ಕಟ್ಟೋಕೆ ಆಗೋಲ್ಲ.

ಯಾಕೆ ತಪ್ಪು ಕೆಲಸ ಮಾಡಬಾರದು ಮನುಷ್ಯ? ಈಗ ನೀವು ಎಲೆಕ್ಟ್ರಾನಿಕ್ಸ್ ಗೂಡ್ಸ್ ಅಂಗಡಿಗೆ ಹೋಗಿ ಒಂದು ಮೊಬೈಲ್ ಫೋನ್ ತಗೋತೀರಿ. ಅದರೊಳಗೆ ಒಂದು ಮ್ಯಾನ್ಯುವಲ್ ಇರುತ್ತದೆ. ಮೊಬೈಲ್ ಬಳಸುವುದು ಹೇಗೆ ಎಂಬ ಮಾಹಿತಿ ಅದರಲ್ಲಿ ಇರುತ್ತದೆ. ನೀವು ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತು ತೆಗೆದುಕೊಂಡರೂ ಅದನ್ನು ಬಳಸುವುದು ಹೇಗೆ ಅಂತ ಸೂಚನೆ ಇರುತ್ತದೆ. ಒಂದು ಚಿಕ್ಕ ಯಂತ್ರಕ್ಕೇ ಬಳಸುವುದು ಹೇಗೆ ಎಂಬ ಮಾಹಿತಿ ಇರುವುದಾದರೆ, ದೇವರು ಕೊಟ್ಟ ಈ ದೇಹ, ಜೀವನವನ್ನು ಬಳಸುವುದು ಹೇಗೆ ಎನ್ನುವುದು ಗೊತ್ತಾಗದಿದ್ದರೆ ಮನುಷ್ಯ ಯಂತ್ರಕ್ಕಿಂತ ಕಡೆ ಆದನಲ್ಲ. ದೇಹ, ಮನಸ್ಸು, ಆತ್ಮವನ್ನು ಹೇಗೆ ಬಳಸಬೇಕು ಎನ್ನುವುದು ಮನುಷ್ಯನಿಗೆ ಗೊತ್ತಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.