ಅಹಮದಾಬಾದ್: ಭಾರತ ಮತ್ತು ನ್ಯೂಜಿಲೆಂಡ್ ಮಹಿಳಾ ತಂಡಗಳ ನಡುವಣ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯ ಮಂಗಳವಾರ ನಡೆಯಲಿದ್ದು, ಭಾರತ ತಂಡವು ಬ್ಯಾಟಿಂಗ್ ವಿಭಾಗದಲ್ಲಿನ ತೊಡಕುಗಳನ್ನು ಸರಿಪಡಿಸುವ ವಿಶ್ವಾಸದಲ್ಲಿದೆ.

ಸರಣಿಯ ಮೊದಲ ಪಂದ್ಯದಲ್ಲಿ ಭಾರತ 59 ರನ್ಗಳಿಂದ ಜಯಗಳಿಸಿತ್ತು, ನಿಜ. ಆದರೆ ಬ್ಯಾಟರ್ಗಳು ಉತ್ತಮ ಆರಂಭ ಪಡೆದರೂ, ಅದನ್ನು ದೊಡ್ಡ ಮೊತ್ತವಾಗಿ ಬೆಳೆಸುವಲ್ಲಿ ವಿಫಲರಾಗಿದ್ದು ಎದ್ದುಕಂಡಿತ್ತು. ಎರಡನೇ ಪಂದ್ಯದಲ್ಲೂ ಅದು ಮುಂದುವರಿದಿತ್ತು. ತಂಡ 260 ರನ್ ಬೆನ್ನಟ್ಟುವ ಹಾದಿಯಲ್ಲಿ 183 ರನ್ನಿಗೆ ಉರುಳಿತ್ತು.

ರಾಧಾ ಯಾದವ್ ಮತ್ತು ಸೈಮಾ ಠಾಕೂರ್ ನಡುವಣ ಒಂಬತ್ತನೇ ವಿಕೆಟ್ಗೆ ದಾಖಲೆಯ 70 ರನ್ ಜೊತೆಯಾಟದಿಂದ ಭಾರತದ ಮೊತ್ತಕ್ಕೆ ಗೌರವದ ಲೇಪ ಒದಗಿತ್ತು.

ಎರಡನೇ ಪಂದ್ಯವನ್ನು ಸೋಫಿ ಡಿವೈನ್ ಪಡೆ ಗೆದ್ದ ನಂತರ ಮೂರು ಪಂದ್ಯಗಳ ಸರಣಿ ಈಗ 1–1ರಲ್ಲಿ ಸಮನಾಗಿದೆ.

ಭಾರತದ ಆಟಗಾರ್ತಿಯರಲ್ಲಿ ಯಾರೂ ಮೊದಲೆರಡು ಪಂದ್ಯಗಳಲ್ಲಿ ಅರ್ಧ ಶತಕ ಗಳಿಸಿಲ್ಲ. ಎರಡನೇ ಪಂದ್ಯದಲ್ಲಿ ರಾಧಾ ಗಳಿಸಿದ 48 ರನ್ಗಳು ಗರಿಷ್ಠ ವೈಯಕ್ತಿಕ ಮೊತ್ತವೆನಿಸಿದೆ. ಹೀಗಾಗಿ ತಂಡದ ಪ್ರಮುಖ ಬ್ಯಾಟರ್ಗಳಾದ ಸ್ಮೃತಿ ಮಂದಾನ, ಶಫಾಲಿ ವರ್ಮಾ ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ ಉತ್ತಮ ಮೊತ್ತ ಗಳಿಸಬೇಕಾಗಿದೆ. ಇವರು ವಿಫಲರಾಗುವುದರಿಂದ ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ ಮತ್ತು ತೇಜಲ್ ಹಸಬ್ನಿಸ್ ಮೇಲೆ ಒತ್ತಡ ಹೆಚ್ಚುತ್ತಿದೆ.

ಮಂದಾನ ಅವರಂತೂ ಲಯದಲ್ಲಿಲ್ಲ. ನ್ಯೂಜಿಲೆಂಡ್ ವಿರುದ್ಧ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ.

ಬ್ಯಾಟರ್ಗಳ ಕಥೆ ಹೀಗಾದರೆ, ಬೌಲರ್ಗಳು ಪ್ರದರ್ಶನ ಉತ್ತಮವಾಗಿದೆ. ಎರಡನೇ ಪಂದ್ಯದಲ್ಲಿ ಪ್ರವಾಸಿ ತಂಡ ಒಂದು ಹಂತದಲ್ಲಿ 14 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ 87 ರನ್ ಗಳಿಸಿದರೂ, ನಂತರ ಆತಿಥೇಯ ಬೌಲರ್ಗಳು ಕಡಿವಾಣ ಹಾಕಿದ್ದರು. ಹೀಗಾಗಿ ಪ್ರವಾಸಿ ತಂಡ 289–300 ರನ್ ಪೇರಿಸುವ ಸಾಧ್ಯತೆ ದೂರವಾಯಿತು.

ಎಡಗೈ ಸ್ಪಿನ್ನರ್ ರಾಧಾ ಯಾದವ್ ಸ್ಪೂರ್ತಿಯತ ಪ್ರದರ್ಶನ ನೀಡಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕು ವಿಕೆಟ್ಗಳನ್ನು ಪಡೆದಿದ್ದಾರೆ. ಅವರಿಂದ ಮತ್ತೆ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.

ನ್ಯೂಜಿಲೆಂಡ್ ತಂಡ ಅನುಭವಿ ವೇಗಿ ಲಿಯಾ ತಹುಹು ಅವರ/ ಸೇರ್ಪಡೆಯಿಂದ ಇನ್ನಷ್ಟು ಬಲಗೊಂಡಿದೆ. ಅವರು ಎರಡನೇ ಪಂದ್ಯದಲ್ಲಿ ಗಾಯಾಳು ಮೊಲಿ ಪೆನ್ಫೋಲ್ಡ್ ಸ್ಥಾನದಲ್ಲಿ ಆಡಿದ್ದು, ಮೂರು ವಿಕೆಟ್ಗಳೊಡನೆ ತಮ್ಮ ಅಸ್ತಿತ್ವ ಸಾರಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 1.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.