ಲೇಖಕ ಚಂದ್ರಕಾಂತ ಪೋಕಳೆ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿರುವ ‘ಗಾಂಧೀಜಿ ಮತ್ತು ಅವರ ಟೀಕಾಕಾರರು’ ಕೃತಿ ಓದಿ, ಮೂಲ ಲೇಖಕ ಸುರೇಶ ದ್ವಾದಶೀವಾರ ಅವರಿಗೆ ಫೋನ್ ಮಾಡಿ ಮೆಚ್ಚುಗೆ ಮಾತುಗಳನ್ನು ಹೇಳಿದೆ. ಅವರು ತುಸು ಚಕಿತಗೊಂಡು, ‘ಈ ಪುಸ್ತಕ ಕನ್ನಡದಲ್ಲಿ ಪ್ರಕಟವಾಗಿ 8 ವರ್ಷಗಳಾದವು. ಕರ್ನಾಟಕದಿಂದ ಈ ಕೃತಿಯ ಬಗ್ಗೆ ನನ್ನೊಂದಿಗೆ ಮಾತನಾಡಿದವರು ನೀವು ಒಬ್ಬರೇ’ ಎಂದರು. ಮಹತ್ವದ ಈ ಪುಸ್ತಕದ ಬಗ್ಗೆ ಪ್ರತಿಕ್ರಿಯೆಗಳು ಬಂದಿಲ್ಲ ಎಂಬ ನೋವು ಆ ಮಾತಿನಲ್ಲಿತ್ತು.

ವಿದೇಶದಲ್ಲಿ ನೆಲಸಿರುವ ಭಾರತೀಯ ಲೇಖಕಿಯೊಬ್ಬರ ಇಂಗ್ಲಿಷ್ ಕಾದಂಬರಿಯನ್ನು ಲೇಖಕರೊಬ್ಬರು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. ಅವರನ್ನು ಈಚೆಗೆ ಭೇಟಿಯಾಗುವಂತಹ ಸಂದರ್ಭ ಒದಗಿಬಂತು. ಮೂಲ ಲೇಖಕಿ ಕರ್ನಾಟಕದಲ್ಲೇ ಇದ್ದರೂ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಬರಲಿಲ್ಲ, ಸೌಜನ್ಯಕ್ಕೆ ಒಂದು ಮಾತನ್ನು ಕೂಡ ಆಡಲಿಲ್ಲ ಎಂದು ಬಹಳ ನೊಂದುಕೊಂಡು ಹೇಳಿದರು.

ಗ್ರಂಥಾಲಯಗಳಿಗಾಗಿ ಪುಸ್ತಕ ಖರೀದಿಸುವ ಕ್ರಿಯೆಯಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸು
ತ್ತಿದೆ, ಸಕಾಲದಲ್ಲಿ ಹಣ ಪಾವತಿ ಮಾಡುವುದಿಲ್ಲ, ಕೆಲವು ಪ್ರಕಾಶಕರು ಶೋಷಣೆ ಮಾಡುತ್ತಾರೆ ಎಂಬೆಲ್ಲ ಆರೋಪಗಳು ಕೇಳಿಬರುತ್ತಿವೆ. ಈ ಎಲ್ಲ ಸಮಸ್ಯೆಗಳ ನಡುವೆಯೂ ಹಲವರು ಸ್ವಂತ ದುಡ್ಡು ಹಾಕಿ ತಮ್ಮ ಕೃತಿಗಳನ್ನು ಉತ್ಸಾಹದಿಂದ ಪ್ರಕಟಿಸುತ್ತಿದ್ದಾರೆ. ಆದರೆ ಕೃತಿಗಳ ಬಗ್ಗೆ ಓದುಗರಿಂದ ಪ್ರತಿಕ್ರಿಯೆಯೇ ಬರುವುದಿಲ್ಲ, ಕೊಂಡು ಓದುವ ಮನೋಭಾವ ಕಡಿಮೆಯಾಗಿದೆ ಎನ್ನುವ ನೋವು ಲೇಖಕರನ್ನು ಕಾಡು ತ್ತಿದೆ. ಇದು, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪ್ರೀತಿಸುವವರೆಲ್ಲ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ.

ನನ್ನ ಪರಿಚಿತ ಯುವ ಕವಿಯೊಬ್ಬರು ಸ್ವಂತ ದುಡ್ಡು ಹಾಕಿ ಕವನ ಸಂಕಲನ ಪ್ರಕಟಿಸಿದ್ದಾರೆ. ಇದು ಅವರ ಮೊದಲ ಪುಸ್ತಕವಾದ್ದರಿಂದ ಹಿರಿಯ ಸಾಹಿತಿಗಳನ್ನು ಕರೆದು ಅದ್ದೂರಿಯಾಗಿ ಬಿಡುಗಡೆ ಸಮಾರಂಭ ಏರ್ಪ ಡಿಸಿದ್ದರು. ಆಗ ರಿಯಾಯಿತಿ ದರದಲ್ಲಿ ತಮ್ಮ ಪುಸ್ತಕ ಮಾರಾಟದ ವ್ಯವಸ್ಥೆ ಮಾಡಿದ್ದರು. ಅಂದು ಎರಡು ಪ್ರತಿಗಳು ಮಾತ್ರ ಮಾರಾಟವಾದವು. 100ಕ್ಕೂ ಹೆಚ್ಚು ಸಾಹಿತ್ಯಾಸಕ್ತರಿಗೆ ಗೌರವ ಪ್ರತಿಗಳನ್ನು ಕಳಿಸಿಕೊಟ್ಟರು. ವರ್ಷ ಕಳೆದರೂ ಯಾರಿಂದಲೂ ಪ್ರತಿಕ್ರಿಯೆ ಬರಲಿಲ್ಲ. ಈಚೆಗೆ ಭೇಟಿಯಾದಾಗ ಅವರು ಇದನ್ನೆಲ್ಲ ಒಂದೇ ಉಸಿರಿನಲ್ಲಿ ಹೇಳಿ, ‘ಬರೆಯುವ ಉತ್ಸಾಹವೇ ಉಡುಗಿಹೋಗಿದೆ’ ಎಂದಾಗ ಬಹಳ ನೋವಾಯಿತು.

ನಾನು 1981ರಲ್ಲಿ ಬರೆದು, ಪ್ರಕಟಿಸಿದ ‘ಬೀದಿಯಲ್ಲಿ ಬಿದ್ದ ಭಗವಂತ’ ಕಾದಂಬರಿಯನ್ನು ಹಾ.ಮಾ.ನಾಯಕ, ಬಸವರಾಜ ಕಟ್ಟೀಮನಿ, ರಾವಬಹಾದ್ದೂರ, ಕೃಷ್ಣಮೂರ್ತಿ ಪುರಾಣಿಕ, ದು.ನಿಂ. ಬೆಳಗಲಿ, ಗೀತಾ ಕುಲಕರ್ಣಿ, ಸಿದ್ಧಲಿಂಗ ಪಟ್ಟಣಶೆಟ್ಟಿ... ಇವರಿಗೆಲ್ಲ ಕಳಿಸಿಕೊಟ್ಟಿದ್ದೆ. ಎಲ್ಲರೂ ಉತ್ತರ ಬರೆದಿದ್ದರು. ಅವುಗಳನ್ನು ಗೆಳೆಯರಿಗೆ ತೋರಿಸಿ ಬಹಳ ಸಂಭ್ರಮಿಸಿದ್ದೆ. ಈ ಪತ್ರಗಳೇ ಈಗಲೂ ಕೈ ಹಿಡಿದು ಬರೆಸುತ್ತಿವೆ. ಪ್ರೋತ್ಸಾಹಕ್ಕೆ ಜಡತ್ವವನ್ನು ಕಳೆಯುವ ಅಗಾಧವಾದ ಶಕ್ತಿ ಇದೆ. ‘ನಿಮ್ಮ ಕಥೆಗಳನ್ನು ಓದಿದ್ದೇನೆ. ಬಹಳ ಸೊಗಸಾಗಿವೆ’ ಎನ್ನುವಂತಹ ಮಾತುಗಳು ನೆನೆಸಿಕೊಂಡಾಗಲೆಲ್ಲಾ ಲೇಖಕನನ್ನು ಖುಷಿಯಾಗಿ ಇರಿಸುತ್ತವೆ. ಬರೆಯುತ್ತಲೇ ಇರಬೇಕು ಎನ್ನುವ ತುಡಿತವನ್ನು ಹೆಚ್ಚಿಸುತ್ತವೆ.

ಕೃತಿಗಳ ಕುರಿತು ಶೈಕ್ಷಣಿಕ ಸಂಸ್ಥೆ, ಅಕಾಡೆಮಿ, ಸಾಂಸ್ಕೃತಿಕ ವೇದಿಕೆಗಳಲ್ಲಿ ಚರ್ಚೆ, ಸಂವಾದಗಳು ಬಹಳಷ್ಟು ಕಡಿಮೆಯಾಗಿವೆ. ಹೊಸ ಪುಸ್ತಕದ ಬರುವಿಕೆಯ ದಾರಿಯನ್ನು ಸಾಹಿತ್ಯಪ್ರಿಯರೆಲ್ಲ ಕುತೂಹಲದಿಂದ ಕಾಯುವ ದಿನಗಳು ಮಾಯವಾಗಿವೆ. ಜನ ತನ್ನನ್ನು ಗುರುತಿಸಬೇಕು, ಗೌರವಿಸಬೇಕು ಎಂಬ ಬಯಕೆ ಹೊಟ್ಟೆಯ ಹಸಿವಿಗಿಂತ ದೊಡ್ಡದಾಗಿರುತ್ತದೆ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ.

ತಾವು ರಚಿಸಿದ ಪುಸ್ತಕಗಳ ಬಗ್ಗೆ ಅಭಿಪ್ರಾಯ, ವಿಮರ್ಶೆ ಬರಲಿ ಎಂಬುದು ಎಲ್ಲ ಲೇಖಕರ ಸಹಜ ಹಂಬಲವಾಗಿರುತ್ತದೆ. ಪ್ರತಿಕ್ರಿಯೆ ಇಲ್ಲದಿದ್ದರೆ ಲೇಖಕರಲ್ಲಿ ಬರೆಯುವ ತುಡಿತ ಕಡಿಮೆಯಾಗುತ್ತದೆ.
ಬಜೆಟ್ ಮಂಡಿಸುವಾಗ ಕವಿಗಳ ಕಾವ್ಯವನ್ನು ಉಲ್ಲೇಖಿಸುವುದು ಒಳ್ಳೆಯ ಪರಿಪಾಟ. ಕಾವ್ಯವು ಬಜೆಟ್ಗಿಂತ ಹೆಚ್ಚು ತೂಗುತ್ತದೆ ಎಂದು, ಉಪಮುಖ್ಯಮಂತ್ರಿಯಾಗಿದ್ದ ಎಂ.ಪಿ.ಪ್ರಕಾಶ್ ಹೇಳುತ್ತಿದ್ದರು. ಇದೇ ಮಾದರಿಯಲ್ಲಿ ಸ್ಥಳೀಯ ಸಭೆ, ಸಮಾರಂಭಗಳಲ್ಲಿ, ಸ್ಥಳೀಯ ಸಂಸ್ಥೆಗಳ ಬಜೆಟ್ ಮಂಡನೆಯಲ್ಲಿ ಆಯಾ ಭಾಗದ ಕವಿಗಳ ಸಾಲುಗಳು ಉಲ್ಲೇಖವಾಗಬೇಕು.

‘ನಾಲಿಗೆಯಲ್ಲಿ ಉಳಿಯಬಹುದಾದ ಕೆಲವಾದರೂ ಸಶಕ್ತ ಸಾಲುಗಳು ನಿಮ್ಮ ಪುಸ್ತಕದಲ್ಲಿ ಇರಲಿ’ ಎಂದು ಸಾಹಿತಿ ಸತ್ಯಕಾಮ ಅವರು ಹೇಳಿರುವ ಮಾತನ್ನು ಲೇಖಕರು ಕೂಡ ಗಮನದಲ್ಲಿ ಇಟ್ಟುಕೊಂಡು ಕೃತಿ ರಚಿಸಬೇಕು. ಬರಹವು ಓದುಗರನ್ನು ಚಕಿತಗೊಳಿಸ ಬೇಕು, ರಂಜಿಸಬೇಕು, ಚಿಂತನೆಗೆ ತೊಡಗಿಸಬೇಕು.

ಅಮೆರಿಕದಲ್ಲಿ ಪುಸ್ತಕ ಮಾರಾಟ ಕುಸಿತ ಕಂಡ ಸಂದರ್ಭದಲ್ಲಿ, ಅಲ್ಲಿ ಉದ್ಯಮಿಯಾಗಿದ್ದ ಆ್ಯಂಡ್ರ್ಯೂ ಕಾನಗಿ ಗ್ರಂಥಾಲಯಗಳ ನಿರ್ಮಾಣ ಹಾಗೂ ಪುಸ್ತಕ ಖರೀದಿಗೆ ಬಹಳಷ್ಟು ಹಣವನ್ನು ಕೊಡುಗೆಯಾಗಿ ನೀಡಿದ್ದರು. ಸಂಸ್ಕೃತಿ ಮತ್ತು ಆಯಾ ಕಾಲಘಟ್ಟದ ಚಿಂತನೆಗಳನ್ನು ತಿಳಿಯುವ ವಿಧಾನವೆಂದರೆ, ಪುಸ್ತಕಗಳ ಕುರಿತು ಸಂವಾದ ನಡೆಸುವುದು ಎಂದು ಅವರು ನಂಬಿದ್ದರು.

ಪುಸ್ತಕವನ್ನು ಪ್ರೀತಿಸುವವರು ಮನುಷ್ಯರನ್ನೂ ಪ್ರೀತಿಸುತ್ತಾರೆ ಎನ್ನುವ ಮಾತೊಂದಿದೆ. ವಿಚಾರಗೋಷ್ಠಿ, ಚರ್ಚೆ, ವಿಮರ್ಶೆಯ ಮೂಲಕ ಪುಸ್ತಕ ಪ್ರೀತಿ ಬೆಳೆಸುವ ಕೆಲಸ ನಡೆಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.