ಭಾರತದಲ್ಲಿ ಮಧುಮೇಹದ ಹರಡುವಿಕೆಯು 2009ರಲ್ಲಿ ಶೇಕಡ 7.1ರಷ್ಟಿತ್ತು. 2019ರ ವೇಳೆಗೆ ಅದು ಶೇ 8.9ಕ್ಕೆ ಏರಿತ್ತು. ಅಂತರರಾಷ್ಟ್ರೀಯ ಮಧುಮೇಹ ಒಕ್ಕೂಟದ (ಐಡಿಎಫ್) ವರದಿಯ ಪ್ರಕಾರ, ಭಾರತದಲ್ಲಿ ಪ್ರಸ್ತುತ 20ರಿಂದ 77 ವರ್ಷ ವಯಸ್ಸಿನ 7.7 ಕೋಟಿ ಜನ ಮಧುಮೇಹದ ಸಮಸ್ಯೆ ಹೊಂದಿದ್ದಾರೆ. 2045ರ ವೇಳೆಗೆ ಇದು 13.42 ಕೋಟಿಗೆ ಏರಿಕೆಯಾಗಲಿದೆ.

ಜಗತ್ತಿನಲ್ಲಿ ಮಧುಮೇಹದ ಸಮಾಜೋ-ಆರ್ಥಿಕ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತವು ಮುಂಚೂಣಿಯಲ್ಲಿದೆ. ಮಧುಮೇಹ ಮತ್ತು ಅದರಿಂದ ಸಂಭವಿಸುವ ಇತರ ಸಮಸ್ಯೆಗಳ ಅಸಮರ್ಪಕ ನಿರ್ವಹಣೆ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಎಡವುತ್ತಿರುವುದರಿಂದಲೇ ದೇಶದಲ್ಲಿ ಹೆಚ್ಚಿನ ಜನರ ಆರೋಗ್ಯ ಅಪಾಯಕ್ಕೆ ಸಿಲುಕುತ್ತಿದೆ ಎಂದು ಅಧ್ಯಯನ ವರದಿಗಳು ಹೇಳುತ್ತಿವೆ. ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿನ ಅತಿಯಾದ ಏರಿಕೆಯಿಂದ ಮಧುಮೇಹ ಬರುತ್ತದೆ. ಇದು ಮನುಷ್ಯರನ್ನು ದೀರ್ಘಕಾಲ, ನಿರಂತರವಾಗಿ ತೀವ್ರತರವಾಗಿ ಕಾಡುವ ಸಮಸ್ಯೆಯಾಗಿದ್ದು, ಬಹು ಅಂಗಾಂಗಗಳಿಗೆ ಹಾನಿ ಮಾಡುವ ಅಪಾಯವನ್ನು ಹೊಂದಿದೆ. ದೇಶದ ಜನರಲ್ಲಿ ಈ ಕುರಿತು ಅರಿವಿನ ಕೊರತೆ ಇದೆ. ಜಾಗೃತಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕಾಗಿರುವುದು ಈ ಹೊತ್ತಿನ ತುರ್ತು.

ಮಧುಮೇಹವು ಸೂಕ್ಷ್ಮ ರಕ್ತನಾಳಗಳು (ಮೈಕ್ರೊ ವಾಸ್ಕ್ಯುಲರ್) ಮತ್ತು ದೊಡ್ಡ ರಕ್ತನಾಳಗಳ (ಮ್ಯಾಕ್ರೊ ವಾಸ್ಕ್ಯುಲರ್) ಮೇಲೆ ಹಾನಿ ಉಂಟು ಮಾಡುತ್ತದೆ. ಸೂಕ್ಷ್ಮ ರಕ್ತನಾಳಗಳ ಮೇಲೆ ಅದು ಉಂಟುಮಾಡುವ ಹಾನಿಯು ನರರೋಗ, ಮೂತ್ರಕೋಶ ಸಂಬಂಧಿ ರೋಗ ಮತ್ತು ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ. ದೊಡ್ಡ ರಕ್ತನಾಳಗಳ ಮೇಲೆ ಮಧುಮೇಹವು ಉಂಟುಮಾಡುವ ಪರಿಣಾಮಗಳು ಹೃದಯಾಘಾತವೂ ಸೇರಿದಂತೆ ಹೃದಯ ಸಂಬಂಧಿ ಸಮಸ್ಯೆಗಳು ಹಾಗೂ ಪಾರ್ಶ್ವವಾಯುವಿಗೆ ಕಾರಣವಾಗುತ್ತವೆ. ಮಧುಮೇಹದ ಪರಿಣಾಮಗಳ ಸ್ಪಷ್ಟವಾದ ಅರಿವು ಇಲ್ಲದೇ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುವ ಕಾರಣದಿಂದಾಗಿಯೇ ಹೆಚ್ಚು ಜನರ ಜೀವ ಅಪಾಯಕ್ಕೆ ಸಿಲುಕುತ್ತಿದೆ.

ಮಧುಮೇಹವು ನಿಯಂತ್ರಣದಲ್ಲಿ ಇರುವವರೆಗೂ ಒಂದು ಸಾಮಾನ್ಯ ಸಮಸ್ಯೆ. ಆದರೆ, ಅರಿವಿನ ಕೊರತೆಯಿಂದ ನಿರ್ಲಕ್ಷ್ಯ ವಹಿಸಿ ನಿಯಂತ್ರಣ ಮೀರಿದರೆ ವ್ಯಕ್ತಿಯೊಬ್ಬನ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿಬಿಡುವ ಸಾಧ್ಯತೆಗಳಿವೆ. ಅದು ಸೃಷ್ಟಿಸುವ ಪರಿಣಾಮಗಳು ದೈಹಿಕವಾಗಿ ಜರ್ಝರಿತರನ್ನಾಗಿ ಮಾಡುವುದರ ಜೊತೆಯಲ್ಲೇ ಕುಟುಂಬವೊಂದನ್ನು ಆರ್ಥಿಕ ಸಂಕಷ್ಟದ ಸುಳಿಗೂ ತಳ್ಳಬಹುದು. ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತದಂತಹ ರಾಷ್ಟ್ರಗಳಲ್ಲಿ ಇದು ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುವ ಅಪಾಯ ಹೆಚ್ಚಾಗಿದೆ.

ಒತ್ತಡದ ಜೀವನದಲ್ಲಿ ಮಧುಮೇಹದಂತಹ ಸಮಸ್ಯೆಗಳ ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ ಸಮಯ ಮೀಸಲಿಡುವುದನ್ನು ಮರೆಯುವಂತಿಲ್ಲ. ನಿರಂತರವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣದ ತಪಾಸಣೆ, ನಿಯಮಿತವಾಗಿ ಔಷಧಿ ಸೇವನೆ, ಆಹಾರ ಕ್ರಮ ಮತ್ತು ಜೀವನ ಶೈಲಿಯಲ್ಲಿನ ಬದಲಾವಣೆಯ ಮೂಲಕ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು. ನಿಯಮಿತವಾಗಿ ಎಚ್ಬಿಎ1ಸಿ (ಹಿಮೊಗ್ಲೋಬಿನ್ ಸಂಬಂಧಿ) ರಕ್ತಪರೀಕ್ಷೆ ಮಾಡಿಸಿಕೊಂಡರೆ ದೀರ್ಘಾವಧಿಯ ದತ್ತಾಂಶಗಳೊಂದಿಗೆ ನಿರ್ವಹಣೆ ಇನ್ನಷ್ಟು ಸುಲಭವಾಗುತ್ತದೆ.

ಮಧುಮೇಹಿಗಳಲ್ಲಿ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಹೆಚ್ಚಳದ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಇವು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತವೆ. ಮಧುಮೇಹದಿಂದ ಕಣ್ಣು, ಮೂತ್ರಕೋಶ ಮತ್ತು ನರಮಂಡಲಕ್ಕೂ ಹಾನಿಯಾಗುವ ಅಪಾಯ ಇರುತ್ತದೆ. ಆದ್ದರಿಂದ ಈ ಎಲ್ಲವುಗಳಿಗೆ ಸಂಬಂಧಿಸಿದಂತೆಯೂ ತಪಾಸಣೆ, ನಿಗಾ ಅಗತ್ಯ.

ಮಧುಮೇಹದ ನಿರ್ವಹಣೆ ಮತ್ತು ನಿಯಂತ್ರಣದಲ್ಲಿ ಆಹಾರ ಕ್ರಮ ಹಾಗೂ ದೈಹಿಕ ಚಟುವಟಿಕೆಗಳ ಪಾತ್ರವೂ ದೊಡ್ಡದು. ಹೆಚ್ಚಿನ ಪ್ರಮಾಣದಲ್ಲಿ ನಾರಿನ ಅಂಶಗಳುಳ್ಳ ಪದಾರ್ಥಗಳು, ಕಡಿಮೆ ಪ್ರಮಾಣದ ಕೊಬ್ಬಿನಂಶ ಇರುವ ಪ್ರೋಟೀನ್ ಮತ್ತು ಆರೋಗ್ಯಕಾರಿ ಕೊಬ್ಬು ಒಳಗೊಂಡ ಸಮತೂಕದ ಆಹಾರ ಸೇವನೆಯಿಂದ ಹೆಚ್ಚು ಅನುಕೂಲವಿದೆ. ನಡಿಗೆ, ಮಾಂಸಖಂಡಗಳನ್ನು ಬಲಪಡಿಸುವ ಕಸರತ್ತುಗಳೂ ಸೇರಿದಂತೆ ಏರೋಬಿಕ್ ಚಟುವಟಿಕೆಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತರಲು ಪೂರಕ. ಮಧುಮೇಹ ಸಮಸ್ಯೆ ಇರುವವರು ಮಾತ್ರೆ ಅಥವಾ ಇನ್ಸುಲಿನ್ ಪಡೆಯಬೇಕೆಂದು ವೈದ್ಯರು ಸೂಚಿಸಿದಲ್ಲಿ, ಅವುಗಳನ್ನು ಸರಿಯಾಗಿ ಪಾಲಿಸುವುದು ಕಡ್ಡಾಯ.

ವೈದ್ಯಕೀಯ ಸಲಹೆಗಳನ್ನು ಯಥಾವತ್ತಾಗಿ ಪಾಲಿಸಿ, ನಿಗದಿತ ಪ್ರಮಾಣದ ಔಷಧಿಗಳನ್ನು ತೆಗೆದುಕೊಳ್ಳಲೇಬೇಕು. ಔಷಧಿ ತೆಗೆದುಕೊಳ್ಳದಿರುವುದು ಅಥವಾ ವೈದ್ಯರ ಸೂಚನೆಗೆ ವ್ಯತಿರಿಕ್ತ ಪ್ರಮಾಣದಲ್ಲಿ (ಡೋಸ್) ಔಷಧಿ ತೆಗೆದುಕೊಳ್ಳುವುದರಿಂದಲೂ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಏರಲು ಅಥವಾ ಕುಸಿಯಲು ಕಾರಣವಾಗಬಹುದು. ಇದು ಜೀವವನ್ನೇ ಅಪಾಯಕ್ಕೆ ಸಿಲುಕಿಸುವ ಸಾಧ್ಯತೆ ಇರುತ್ತದೆ.

ಮಧುಮೇಹ ನಿರ್ವಹಣೆಯು ಒತ್ತಡದಿಂದ ಕೂಡಿದ್ದು, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಪ್ರಾಣಾಯಾಮವೂ ಸೇರಿದಂತೆ ವಿವಿಧ ಚಟುವಟಿಕೆಗಳ ಮೂಲಕ ಮನಸ್ಸನ್ನು ಕ್ರಿಯಾಶೀಲವಾಗಿ ಇರಿಸಿಕೊಳ್ಳುವುದು ಹಾಗೂ ಮನೋಲ್ಲಾಸದ ಥೆರಪಿಗಳ ನೆರವಿನಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಮಧುಮೇಹವು ಈಗ ಹೆಚ್ಚಿನ ಕುಟುಂಬಗಳನ್ನು ಆವರಿಸಿಕೊಂಡಿದೆ. ಆದರೆ, ಜಾಗೃತಿಯ ಕೊರತೆಯಿಂದಲೇ ಹೆಚ್ಚು ಮಂದಿ ಅದರ ಪರಿಣಾಮಗಳ ಬಗ್ಗೆ ಗಂಭೀರವಾಗಿ ಯೋಚಿಸುತ್ತಿಲ್ಲ. ಇಂದು (ನ. 14) ವಿಶ್ವ ಮಧುಮೇಹ ದಿನ. ಈ ಹೊತ್ತಿನಲ್ಲಿ ಮಧುಮೇಹದ ಪರಿಣಾಮಗಳು, ಅದರ ನಿಯಂತ್ರಣ, ನಿರ್ವಹಣೆ ಕುರಿತು ಜನಸಾಮಾನ್ಯರಲ್ಲಿ ವೈಜ್ಞಾನಿಕವಾಗಿ ಅರಿವು ಮೂಡಿಸುವ ದಿಕ್ಕಿನಲ್ಲಿ ಹೆಜ್ಜೆ ಇಡಬೇಕಿದೆ.

ಲೇಖಕ: ರಾಜಾಜಿನಗರ ಇಎಸ್ಐ ವೈದ್ಯಕೀಯ ಕಾಲೇಜಿನ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.