ಬಸ್ ಖಾಸಗೀಕರಣಕ್ಕೆ ಕಾರ್ಯಸೂಚಿ: ಆದೇಶ

ಬೆಂಗಳೂರು, ನ. 21– ರಾಜ್ಯದ ಎಲ್ಲಾ ಕಡೆಗಳಿಗೂ ಸರ್ಕಾರದಿಂದ ಬಸ್ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲದಿರುವುದರಿಂದ ಸಾರಿಗೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಲು ಪರಿಶೀಲಿಸಲಾಗುತ್ತಿದ್ದು, ಖಾಸಗೀಕರಣ ಜಾರಿಗೆ ಕಾರ್ಯಸೂಚಿ ರೂಪಿಸುವಂತೆ ಸಾರಿಗೆ ಸಚಿವ ಸಗೀರ್ ಅಹಮದ್ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಆದೇಶಿಸಿದರು.

ಇಂದು ಇಲ್ಲಿ ಕರ್ನಾಟಕ ಮೋಟಾರು ವಾಹನ ತನಿಖಾಧಿಕಾರಿಗಳ ಸಂಘವು ಪ್ರಕಟಿಸಿದ ‘ಚಾಲಕರ ಮಾರ್ಗದರ್ಶಿ’ ಕೈಪಿಡಿಯನ್ನು ಬಿಡುಗಡೆಗೊಳಿಸಿ
ಮಾತನಾಡುತ್ತಿದ್ದ ಅವರು, ಸಾರಿಗೆ ವ್ಯವಸ್ಥೆ
ಯನ್ನು ಖಾಸಗೀಕರಣಗೊಳಿಸಿ ಸಾರ್ವಜನಿಕ
ರಿಗೆ ಹೇಗೆ ಅನುಕೂಲ ಕಲ್ಪಿಸಿಕೊಡಬಹುದು
ಎಂಬ ಬಗ್ಗೆ ಮಾಹಿತಿಯನ್ನು ತಮಗೆ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.

ವಾಜಪೇಯಿ ಸಂಪುಟ ಇಂದು ಪುನರ್ರಚನೆ

ನವದೆಹಲಿ, ನ. 21 (ಪಿಟಿಐ)– ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ 70 ಸದಸ್ಯರ ಸಚಿವ ಸಂಪುಟವನ್ನು ನಾಳೆ ಪ್ರಥಮ ಬಾರಿಗೆ ಪುನರ್ ರಚಿಸಲಿದ್ದು, ಕೆಲ ಖಾತೆಗಳ ಬದಲಾವಣೆಯನ್ನೂ ಮಾಡಲಿದ್ದಾರೆ. ಸಂಪುಟದಲ್ಲಿ ಆರು ಹೊಸ ಮುಖಗಳು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.