ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ | ಕಾರ್ಗಿಲ್ ವಿವಾದ ಬಳಕೆಗೆ ಇಷ್ಟವಿಲ್ಲ: ಪ್ರಧಾನಿ ಸ್ಪಷ್ಟನೆ

Published : 25 ಆಗಸ್ಟ್ 2024, 23:30 IST
Last Updated : 25 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ನೀಮಕ್, ಆ. 25 (ಪಿಟಿಐ)– ಕಾರ್ಗಿಲ್ ವಿಜಯವನ್ನು ಚುನಾವಣಾ ವಿಷಯವನ್ನಾಗಿ ಮಾಡುವುದು ತಮಗೆ ಇಷ್ಟವಿಲ್ಲ ಎಂದು ಪ್ರಧಾನಿ ವಾಜಪೇಯಿ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ಮಧ್ಯಪ್ರದೇಶದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಾರ್ಗಿಲ್‌ನಲ್ಲಿನ ಜಯ ಬಿಜೆಪಿ ಜಯ ಅಲ್ಲ. ಅದೊಂದು ವೀರ ಸೈನಿಕರ ವಿಜಯೋತ್ಸವ’ ಎಂದು ಬಣ್ಣಿಸಿದರು.

‘ಪಾಕಿಸ್ತಾನದ ಜತೆಗೆ 1971ರಲ್ಲಿ ನಡೆದ ಯುದ್ಧದಲ್ಲಿ ಕಾಶ್ಮೀರದ ಕುರಿತು ದೇಶದ ನಿಲುವು ಒಪ್ಪಲು ಒತ್ತಾಯಿಸದೇ ವಿಸ್ತಾರವಾದ ಭೂಪ್ರದೇಶವನ್ನು ಕಳೆದುಕೊಂಡಿರುವುದನ್ನು ದೇಶಬಾಂಧವರು ಮರೆಯಬಾರದು’ ಎಂದು ಪ್ರಧಾನಿ ನೆನಪಿಸಿದರು.

ಕಾಂಗ್ರೆಸ್‌ನಿಂದ ಸ್ಥಿರ ಸರ್ಕಾರ– ಸೋನಿಯಾ

ಅಲ್ವಾರ್, ಆ. 25 (ಯುಎನ್ಐ)– ‘ದೇಶಕ್ಕೆ ಸ್ಥಿರ ಸರ್ಕಾರ ನೀಡಲು ತಮ್ಮ ಪಕ್ಷ ಬದ್ಧವಾಗಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಇಲ್ಲಿ ಪುನರುಚ್ಚರಿಸಿದರು.

ರಾಜಸ್ಥಾನದಲ್ಲಿ ಮೊದಲ ಬಾರಿಗೆ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಒಂದು ‘ವೈಫಲ್ಯ’ ಎಂದು ಸೋನಿಯಾ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT