ಆಡಳಿತದಲ್ಲಿ ಅಮೂಲಾಗ್ರ ಬದಲಾವಣೆ

ಬೆಂಗಳೂರು, ನ.13– ಪಾರದರ್ಶಕತೆಯಿಂದ ಕೂಡಿದ ದಕ್ಷ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ಕೊಡುವುದಾಗಿ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ಅವರು ವಿಧಾನಸಭೆಯಲ್ಲಿಂದು ರಾಜ್ಯದ ಜನತೆಗೆ ಭರವಸೆ ನೀಡಿ, ಭ್ರಷ್ಟ ಆಡಳಿತ ವ್ಯವಸ್ಥೆ ವಿರುದ್ಧ ಧರ್ಮ ಯುದ್ಧ ಘೋಷಿಸಿದರು.

ಈ ಧರ್ಮ ಯುದ್ಧದಲ್ಲಿ ಸರ್ಕಾರಿ ನೌಕರರು, ಶಾಸಕರು, ರಾಜಕಾರಣಿಗಳು ತಮಗೆ ಸಹಕಾರ ನೀಡಬೇಕು ಎಂದು ಕಳಕಳಿಯಿಂದ ಮನವಿ ಮಾಡಿಕೊಂಡ ಮುಖ್ಯ ಮಂತ್ರಿಗಳು, ಇದಕ್ಕಾಗಿ ಆಡಳಿತ ಯಂತ್ರವನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಕಚೇರಿಗಳಿಗೆ ಆದರ್ಶಪ್ರಾಯವಾಗಿರಬೇಕಾಗಿರುವ ವಿಧಾನಸೌಧದಲ್ಲಿ ಮೊದಲ ಹೆಜ್ಜೆಯಾಗಿ ಜವಾನನಿಂದ ಹಿಡಿದು ಮುಖ್ಯಮಂತ್ರಿ ವರೆಗೆ ಎಲ್ಲರೂ ಸಮಯ ಹಾಗೂ ಶಿಸ್ತು ಪಾಲಿಸುವುದಕ್ಕೆ ‘ಪಂಚಿಂಗ್’ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆತರಲಾಗುವುದು ಎಂದು ಪ್ರಕಟಿಸಿದರು.

ಒರಿಸ್ಸಾ ಸಂತ್ರಸ್ತರಿಗೆ ಹಣ ಸಂಗ್ರಹಿಸಲು ತಾರೆಯರ ಪಾದಯಾತ್ರೆ

ಬೆಂಗಳೂರು. ನ.13– ಒರಿಸ್ಸಾ ಚಂಡಮಾರುತ ಸಂತ್ರಸ್ತರಿಗೆ ನೆರವು ನೀಡಲು ಕನ್ನಡದ ಮೇರುನಟ ಡಾ. ರಾಜ್ಕುಮಾರ್ ಅವರ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ನಟ– ನಟಿಯರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ನಗರದ ಪ್ರಮುಖ ರಸ್ತೆಗಳಲ್ಲಿ ಇಂದು ಪಾದಯಾತ್ರೆ ನಡೆಸಿ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿದರು.

ನಗರದ ಶಿವಾನಂದ ವೃತ್ತದ ಬಳಿ ಇರುವ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಲಿ ಕಚೇರಿಯಿಂದ ಅವೆನ್ಯೂ ರಸ್ತೆಯ ಸ್ವಲ್ಪ ದೂರದವರೆಗೂ ವಾಹನದಲ್ಲಿ ಕ್ರಮಿಸಿ ಕಾಣಿಕೆಗಳನ್ನು ಸ್ವೀಕರಿಸಿದ ಚಿತ್ರರಂಗದ ಗಣ್ಯರು, ಅನಂತರ ಪಾದಯಾತ್ರೆಯಲ್ಲಿ ಮುಂದುವರೆದರು.

ಮಂಡ್ಯ ವೈದ್ಯರ ಮನೆಯಿಂದ 3 ಲಕ್ಷದ ನಗನಾಣ್ಯ ದರೋಡೆ

ಮಂಡ್ಯ, ನ.13– ಇಲ್ಲಿನ ಅಶೋಕನಗರದ ವಾಸಿ ಡಾ. ಶಿವರಾಂ ಅವರ ಮನೆಗೆ ಇಂದು ರಾತ್ರಿ 2 ಗಂಟೆ ಸಮಯದಲ್ಲಿ ನುಗ್ಗಿದ ಎಂಟು ಮಂದಿ ದರೋಡೆಕೋರರು ಮನೆಯವರನ್ನೆಲ್ಲ ಕಟ್ಟಿಹಾಕಿ, ಚಾಕು ತೋರಿ ಬೆದರಿಸಿ ರೂ.3 ಲಕ್ಷ ಮೌಲ್ಯದ ಹಣ, ಚಿನ್ನಾಭರಣ, ಕೈಗಡಿಯಾರ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.

ಕನ್ನಡ, ಇಂಗ್ಲಿಷ್, ತೆಲುಗು ಭಾಷೆಗಳನ್ನು ಮಾತನಾಡುತ್ತಿದ್ದ ಈ ತಂಡ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದ್ದರು. ಉಗ್ರಾಣ ಮನೆಯ ಕಿಟಕಿ ಸರಳುಗಳನ್ನು ಮುರಿದು ಒಳನುಗ್ಗಿ ಮಲಗಿದ್ದ ಡಾ. ಶಿವರಾಂ ಮಗ ಡಾ. ಭರತೇಶ್, ಸೊಸೆ ರಾಜಶ್ರೀ ಹಾಗೂ ಮೊಮ್ಮಕ್ಕಳಿಬ್ಬರನ್ನು ಹಗ್ಗದಿಂದ ಕಟ್ಟಿಹಾಕಿ, ದೂರವಾಣಿ ಸಂಪರ್ಕ ಕಡಿದು, ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಛಿದ್ರಗೊಳಿಸಿ, ದರೋಡೆ ಮಾಡಿದ್ದಾರೆ.

ಸುಮಾರು ಎರಡುತಾಸು ಕಾರ್ಯಾಚರಣೆ ನಡೆಸಿ, 60 ಸಾವಿರ ಬೆಲೆಯ ವಜ್ರದ ಓಲೆ, 40 ಸಾವಿರದ ಚಿನ್ನದ ಸರ, 26 ಸಾವಿರ ನಗದು, 4 ಕೈಗಡಿಯಾರ, ಸಣ್ಣಪುಟ್ಟ ಚಿನ್ನಾಭರಣ ಸೇರಿದಂತೆ ರೂ.3 ಲಕ್ಷ ಬೆಲೆಯ ದರೋಡೆ ಮಾಡಿದ್ದಾರೆಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.