ಚುನಾವಣಾ ಹಿಂಸೆಗೆ 47 ಜನರ ಬಲಿ

ನವದೆಹಲಿ, ಸೆ.18(ಪಿಟಿಐ, ಯುಎನ್‌ಐ)– ಐದು ರಾಜ್ಯಗಳಲ್ಲಿ ಇಂದು ನಡೆದ ಮೂರನೇ ಹಂತದ ಮತದಾನದಲ್ಲಿ ಶೇಕಡಾ 53 ರಷ್ಟು ಮತದಾನ ನಡೆದಿದ್ದು, ವ್ಯಾಪಕ ಹಿಂಸಾಚಾರದಲ್ಲಿ ಇಬ್ಬರು ಮ್ಯಾಜಿಸ್ಟ್ರೇಟರು ಮತ್ತು 31 ಮಂದಿ ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 47 ಮಂದಿ ಸತ್ತಿದ್ದಾರೆ. 38 ಮಂದಿ ಗಾಯಾಳುಗಳ ಪೈಕಿ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಅಭ್ಯರ್ಥಿಯೂ ಸೇರಿದ್ದಾರೆ.

ಎಸ್ಸೆನ್‌ಗೆ ‘ಕರ್ನಾಟಕ ರತ್ನ’

ಮೈಸೂರು, ಸೆ. 18– ಹಿರಿಯ ಮುತ್ಸದ್ಧಿ ಎಸ್. ನಿಜಲಿಂಗಪ್ಪ ಅವರನ್ನು 1999ನೇ ಸಾಲಿನ ‘ಕರ್ನಾಟಕ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕದ ಈ ಅತ್ಯುನ್ನತ ಪ್ರಶಸ್ತಿಯನ್ನು ಸರ್ಕಾರ ಸುಮಾರು ಏಳು ವರ್ಷಗಳ ನಂತರ ನೀಡುತ್ತಿದೆ.

ಹಿರಿಯ ಸಾಹಿತಿ ಕುವೆಂಪು ಮತ್ತು ವರನಾಟ ಡಾ. ರಾಜ್‌ಕುಮಾರ್ ಅವರಿಗೆ 1992 ರಲ್ಲಿ ಈ ಪ್ರಶಸ್ತಿ ನೀಡಲಾಗಿತ್ತು.

ದರೋಡೆ ಪ್ರಕರಣಗಳಿಂದ ವರ್ತಕರು ತಲ್ಲಣ

ಬೆಂಗಳೂರು, ಸೆ.18– ವ್ಯವಹಾರ ಮುಗಿಸಿ ನಗದು ಹಣದೊಂದಿಗೆ ರಾತ್ರಿ ಮನೆಗೆ ಹಿಂತಿರುಗುವ ನಗರದ ವ್ಯಾಪಾರಿಗಳು ಮತ್ತು ಶ್ರಿಮಂತರು. ಯಾವ ಕ್ಷಣದಲ್ಲಿ ಎಲ್ಲಿ ದರೋಡೆಕೋರರು ದಾಳಿ ನಡೆಸುತ್ತಾರೊ ಎಂಬ ಭೀತಿಯಿಂದ ನಡುಗುವಂತಾಗಿದೆ.

ಕಳೆದ ಸುಮಾರು ಒಂದು ವರ್ಷಗಳಿಂದ ವ್ಯಾಪಾರಿಗಳನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಹಣ ದೋಚಿಕೊಂಡು ಓಡಿದ ಹಲವು ಪ್ರಕರಣಗಳು ನಡೆದಿದ್ದು. ಗುರುವಾರ ರಾತ್ರಿ ರಾಜಾಜಿನಗರ ನಾಲ್ಕನೇ ಬ್ಲಾಕ್‌ನಲ್ಲಿ ಪಾನ್‌ಪರಾಗ್ ಸಗಟು ಅಂಗಡಿ ನೌಕರನ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿ ಮೂರು ಲಕ್ಷ ರೂಪಾಯಿ ದೋಚಿದ ಘಟನೆ ನಂತರ ಈ ಭಯ ಇನ್ನಷ್ಟು ಜಾಸ್ತಿಯಾಗಿದೆ. ಬಹುತೇಕ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ವಿಫಲರಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.