ಕಾಂಗ್ರೆಸ್ ಬೆಂಬಲ ವಾಪಸ್ ಬಿಕ್ಕಟ್ಟಿನಲ್ಲಿ ರಾಬ್ಡಿ ಸರ್ಕಾರ

ನವದೆಹಲಿ, ನ. 12 (ಯುಎನ್ಐ)– ಬಿಹಾರದಲ್ಲಿ ರಾಬ್ಡಿದೇವಿ ನೇತೃತ್ವದ ರಾಷ್ಟ್ರೀಯ ಜನತಾದಳ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್ ಪಕ್ಷ ವಾಪಸು ಪಡೆಯುವುದರೊಂದಿಗೆ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ.

ರಾಜ್ಯ ವಿಧಾನಸಭೆಯಲ್ಲಿ 29 ಸದಸ್ಯಬಲ ಹೊಂದಿರುವ ಕಾಂಗ್ರೆಸ್ ಪಕ್ಷ ಬೆಂಬಲ ವಾಪಸು ಪಡೆದಿದ್ದರೂ ಸರ್ಕಾರಕ್ಕೆ ಅಪಾಯ ಎದುರಾಗುವ ಸಾಧ್ಯತೆಗಳು ಕಡಿಮೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಕಾಂಗ್ರೆಸ್ ಬೆಂಬಲವೂ ಸೇರಿ ರಾಬ್ಡಿ ನೇತೃತ್ವದ ಸರ್ಕಾರ 324 ಸದಸ್ಯ ಬಲದ ವಿಧಾನಸಭೆಯಲ್ಲಿ 180 ಮಂದಿಯ ಬೆಂಬಲ ಹೊಂದಿತ್ತು. ಇದೀಗ ಕಾಂಗ್ರೆಸ್ ಬೆಂಬಲ ವಾಪಸು ಪಡೆದಿದ್ದು, ಸರ್ಕಾರವನ್ನು ಬೆಂಬಲಿಸುವ ಸದಸ್ಯರ ಸಂಖ್ಯೆ 151ಕ್ಕೆ ಇಳಿದಿದೆ. ಸರಳ ಬಹುಮತಕ್ಕೆ ಇನ್ನೂ 11 ಶಾಸಕರ ಕೊರತೆ ಇದೆ.

‘ಈರುಳ್ಳಿ ಬೆಲೆ ಸುಧಾರಿಸದಿದ್ದರೆ ಸರ್ಕಾರದಿಂದ ಖರೀದಿ’

ಬೆಂಗಳೂರು, ನ. 12– ಈರುಳ್ಳಿ ಬೆಲೆಯಲ್ಲಿ ಚೇತರಿಕೆಯಾಗದಿದ್ದರೆ ರೈತರ ಅನುಕೂಲಕ್ಕಾಗಿ ಸರ್ಕಾರವೇ ಈರುಳ್ಳಿ ಖರೀದಿಗೆ ವ್ಯವಸ್ಥೆ ಮಾಡಲು ಸಿದ್ಧ ಎಂದು ಕೃಷಿ ಸಚಿವ ಟಿ.ಬಿ. ಜಯಚಂದ್ರ ಅವರು ಇಂದು ವಿಧಾನಸಭೆ
ಯಲ್ಲಿ ಭರವಸೆ ನೀಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಮತ್ತು ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ಈರುಳ್ಳಿ ಬೆಲೆ ಕುಸಿದು ರೈತರಿಗೆ ತೀವ್ರ ಸಮಸ್ಯೆ ಎದುರಾಗಿದೆ ಎಂದು ಜನತಾದಳ (ಯು) ಗುಂಪಿನ ನಾಯಕ ಪಿ.ಜಿ.ಆರ್. ಸಿಂಧ್ಯಾ ಅವರು ಸರ್ಕಾರದ ಗಮನ ಸೆಳೆದಾಗ ಕೃಷಿ ಸಚಿವರು ಈ ಆಶ್ವಾಸನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.