ಬೆಂಗಳೂರು, ಆ. 25– ಇನ್ನು ಮೂರು ವರ್ಷಗಳಲ್ಲಿ ಭಾರತ ಉದ್ದದೆಳೆಯ ಹತ್ತಿಗಾಗಿ ಪರರಾಷ್ಟ್ರಗಳನ್ನು ಅವಲಂಬಿಸುವುದು ತಪ್ಪಿ, ಸುಮಾರು ಒಂದು ನೂರು ಕೋಟಿ ರೂ.ಗಳಷ್ಟು ವಿದೇಶಿ ವಿನಿಮಯ ಉಳಿತಾಯ ಆಗುವ ಸಂಭವವಿದೆ.

ರೈತರಿಗೆ ಮಾತ್ರವಲ್ಲದೆ ದೇಶಕ್ಕೇ ವರದಾನ ವಾಗಿ ಪರಿಣಮಿಸಿರುವ ಕರ್ನಾಟಕದ ಹೆಮ್ಮೆಯ ಕೊಡುಗೆ ವರಲಕ್ಷ್ಮಿ ಹತ್ತಿಯ ಬೆಳೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರೈತರನ್ನು ಆಕರ್ಷಿಸಿರುವುದರಿಂದ, ಉದ್ದದೆಳೆಯ ಹತ್ತಿಯಲ್ಲಿ ಸ್ವಾವಲಂಬನೆ ಸಾಧನೆಯ ಕಾಲ ದೂರವಿಲ್ಲ ಎಂದು ಸರ್ಕಾರಿ ಕೃಷಿ ಕ್ಷೇತ್ರಗಳ ಕಾರ‍್ಪೊರೇಷನ್ ಅಧ್ಯಕ್ಷ ಎಂ.ಆರ್. ಕೃಷ್ಣ ಅವರು ಇಂದು ವರದಿಗಾರರಿಗೆ ತಿಳಿಸಿದರು.

ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ಸರ್ಕಾರ ರಚನೆಗೆ ಷೇಖ್ ಷರತ್ತು

ಶ್ರೀನಗರ, ಆ. 25– ಕಾಶ್ಮೀರಕ್ಕೆ 1953ಕ್ಕೆ ಮುನ್ನ ಇದ್ದ ವಿಶೇಷ ಸ್ಥಾನಮಾನವನ್ನು ಮತ್ತೆ ನೀಡಲು ದೆಹಲಿ ಸರ್ಕಾರ ಅಂಗೀಕರಿಸಿದರೆ, ತಾವು ಆ ರಾಜ್ಯದಲ್ಲಿ ಹಂಗಾಮಿ ಸರ್ಕಾರವೊಂದನ್ನು ರಚಿಸಲು ಸಿದ್ಧ ಎಂದು ಷೇಖ್ ಅಬ್ದುಲ್ಲಾ ಸೂಚಿಸಿದ್ದಾರೆ.

ಈ ಹೊಸ ರಾಜ್ಯದಲ್ಲಿ ಬೇರೊಂದು ಶಾಸನ ಸಭೆಯನ್ನು ಅಸ್ತಿತ್ವಕ್ಕೆ ತರಲು ನ್ಯಾಯಸಮ್ಮತವಾದ, ಮುಕ್ತ ಚುನಾವಣೆ ನಡೆಸುವುದೇ ತಮ್ಮ ಹೊಸ ಸರ್ಕಾರದ ಪ್ರಪ್ರಥಮ ಕರ್ತವ್ಯವಾಗಿ
ರುತ್ತದೆಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.