ರಷ್ಯಾ– ಜೆಕ್ ರಾಜಿ ಪರಿಹಾರ ಸೂತ್ರಕ್ಕೆ ಉಭಯತ್ರರ ಸಮ್ಮತಿ

ಮಾಸ್ಕೊ, ಆ. 25– ಜೆಕೊಸ್ಲೊವಾಕಿಯಾ ಬಿಕ್ಕಟ್ಟಿನ ನಿವಾರಣೆಗೆ ಉಭಯ ಪಕ್ಷಗಳೂ ಸಂಧಾನ ಸೂತ್ರವೊಂದನ್ನು ರೂಪಿಸಿವೆಯೆಂದು ಇಂದು ಇಲ್ಲಿ ಬಲ್ಲ ವಲಯಗಳು ತಿಳಿಸಿವೆ.

ಡುಬ್‌ಚೆಕ್ ನಾಯಕತ್ವದಲ್ಲಿ ಪಕ್ಷ ಮತ್ತು ಸರ್ಕಾರವನ್ನು ಪುನರ್ ಸ್ಥಾಪಿಸಿ ಮಾನ್ಯತೆ ನೀಡಲು ಹಾಗೂ ಸೈನ್ಯವನ್ನು ವಾಪಸ್ ಕರೆಯಿಸಿಕೊಳ್ಳಲು ಕ್ರಮ್ಮಿನ್ ಒಪ್ಪಿದೆಯೆಂದು ವಕ್ತಾರರು ತಿಳಿಸಿದ್ದಾರೆ.

ಸುಧಾರಣಾ ಕ್ರಮವನ್ನು ರದ್ದುಪಡಿಸಲು ಮತ್ತು ಪ್ರತಿಪಕ್ಷಗಳ ಮೇಲೆ ಪುನಃ ಸೆನ್ಸಾರ್ ವಿಧಿಸಲು ಜೆಕೊಸ್ಲೊವಾಕಿಯ ಒಪ್ಪಿಕೊಂಡಿರುವುದು ಇದರಿಂದ ಸ್ಪಷ್ಟವಾದಂತಿದೆ.

ಜೆಕ್ ಪಕ್ಷದ ಕಾರ್ಯದರ್ಶಿ ಪುತ್ರಿ ಕಣ್ಮರೆ

ಲಂಡನ್, ಆ. 25– ಜೆಕೊಸ್ಲೊವಾಕ್ ಕಮ್ಯುನಿಸ್ಟ್ ಪಕ್ಷದ ಪ್ರಥಮ ಕಾರ್ಯದರ್ಶಿ ವಾಸಿಲ್ ಬಿಲಕ್ ಅವರ 17ವರ್ಷದ ಪುತ್ರಿ ನಾಡಾಬಿಲಕ್ ಅವರನ್ನು ರಷ್ಯನ್ನರು ಅಪಹರಿಸಿರಬಹುದೆಂಬ ಪತ್ರಿಕಾ ವರದಿಗಳು ಬಂದನಂತರ ಬ್ರಿಟನ್ನಿನ ವಿಮಾನನಿಲ್ದಾಣ, ಬಂದರುಗಳಲ್ಲಿ ಪೊಲೀಸರು ಎಚ್ಚರಿಕೆಯ ಕಾವಲು ನಡೆಸಿದ್ದಾರೆ.

ರಾಜಧನ ರದ್ದಿಗೆ 4 ಅಂಶಗಳ ಯೋಜನೆ

ನವದೆಹಲಿ, ಆ. 25– ಮಾಜಿ ರಾಜರಿಗೆ ನೀಡಲಾಗುತ್ತಿರುವ ವಿಶೇಷ ಹಕ್ಕುಬಾಧ್ಯತೆಗಳು ಹಾಗೂ ರಾಜಧನವನ್ನು ರದ್ದುಪಡಿಸುವ ಬಗ್ಗೆ ಕೇಂದ್ರ ಕಾನೂನು ಶಾಖೆ ನಾಲ್ಕು ಅಂಶಗಳ ಯೋಜನೆಯೊಂದನ್ನು ಸೂಚಿಸಿದೆ.

ರಾಜ್ಯಾಂಗದ 291 ಮತ್ತು 362ನೇ ವಿಧಿಗಳನ್ನು ತೆಗೆದುಹಾಕಬೇಕೆಂದೂ ಪ್ರಭುತ್ವದ ವ್ಯವಸ್ಥೆಯನ್ನು ರದ್ದುಪಡಿಸಬೇಕೆಂದೂ ಕೇಂದ್ರ ಕಾನೂನು ಖಾತೆಯು ಕೇಂದ್ರ ಗೃಹ ಖಾತೆಗೆ ಕಳುಹಿಸಿದ ಪತ್ರದಲ್ಲಿ ತಿಳಿಸಿದೆ.

‘ಅಹಿಂಸಾವಾದಿ ಡುಬ್‌ಚೆಕ್ ಗಾಂಧಿಗಿಂತ ಶ್ರೇಷ್ಠ’

ಮದ್ರಾಸ್, ಆ. 25– ಅಹಿಂಸಾವಾದಿ ಡುಬ್‌ಚೆಕ್ ಮತ್ತೆ ಜೆಕೊಸ್ಲೊವಾಕಿಯಾ ವ್ಯವಹಾರಗಳನ್ನು ನಿರ್ವಹಿಸುವಂತಾದರೆ ಬಿಕ್ಕಟ್ಟುಗಳು ಮತ್ತು ಸಮರಭೀತಿಗಳಿಲ್ಲದ ಸಂತೋಷದಿಂದ ಕೂಡಿದ ಯುರೋಪನ್ನು ನೋಡುತ್ತೇವೆ.

ಈಗ ಅಸಹ್ಯವಾಗಿ ಕಾಣುತ್ತಿರುವುದು ಚರಿತ್ರೆಯ ಸುಂದರ ಅಧ್ಯಾಯಗಳಾಗುತ್ತವೆ. ಥೋರೊ ಮತ್ತು ಮಹಾತ್ಮ ಗಾಂಧಿಯವರಿಗಿಂತ ಪ್ರಜ್ವಲವಾಗಿ ಡುಬ್‌ಚೆಕ್ ಬೆಳಗುತ್ತಾರೆ ಎಂದು ಸಿ. ರಾಜಗೋಪಾಲಾಚಾರಿ ಅವರು ಇಂದು ಇಲ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.