ಕೇಂದ್ರದಲ್ಲಿ ಮತ್ತೆ ರೈತರ ಸರ್ಕಾರ: ಗೌಡರ ಪಣ

ಕೃಷ್ಣರಾಜ ಸಾಗರ (ಮಂಡ್ಯ ಜಿಲ್ಲೆ) ಜೂನ್ 25 – ‘ಕೇಂದ್ರದಲ್ಲಿ ರೈತರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲು ಪಣ ತೊಟ್ಟು ಕೆಲಸ ಮಾಡುವೆ. ಇದಕ್ಕಾಗಿ ಇದೇ ಜುಲೈನಿಂದ ದೇಶದಾದ್ಯಂತ ಪ್ರವಾಸ ಮಾಡುವೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬುಧವಾರ ಇಲ್ಲಿ ತಿಳಿಸಿದರು.

ನವೀಕರಣಗೊಂಡಿರುವ ವಿಶ್ವೇಶ್ವೆರಯ್ಯ ನಾಲೆಗೆ ಕೃಷ್ಣರಾಜಸಾಗರದಿಂದ ನೀರು ಹರಿಸಿದ ಬಳಿಕ ಸಾರ್ವಜನಿಕ ಸಭೆಯುನ್ನುದ್ದೇಶಿಸಿ ಅವರು ಮಾತನಾಡಿದರು.

‘ಅಧಿಕಾರ ಹೋಯಿತು ಎಂದು ಸುಮ್ಮನೆ ಕೂರುವವ ನಾನಲ್ಲ. ಮತ್ತೆ ಧೂಳಿನಿಂದೆದ್ದು ಬರುವೆ ಎಂದು ಸಂಸತ್ತಿನಲ್ಲಿ ಹೇಳಿದ್ದೆ. ಯಾವ ಪ್ರೇರಣೆಯಿಂದ ಎಂಬುದು ಗೊತ್ತಿಲ್ಲ. ಅಂದು ಈ ಮಾತು ತಾನಾಗಿ ಬಂದಿತ್ತು. ಇದೆಲ್ಲ ಏನೇ ಇರಲಿ. ಕೇಂದ್ರದಲ್ಲಿ ಮತ್ತೆ ರೈತರ ಸರ್ಕಾರ ತರುವುದು ಅಗತ್ಯವಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.