ಪಂಜಾಬ್: ರೈಲಿನಲ್ಲಿ ಸ್ಫೋಟ 34 ಮಂದಿ ಸಾವು

ಚಂಡೀಗಡ, ಜುಲೈ 8 (ಯುಎನ್ಐ, ಪಿಟಿಐ)– ಚಲಿಸುತ್ತಿದ್ದ ಪ್ರಯಾಣಿಕರ ರೈಲೊಂದರಲ್ಲಿ ಬಾಂಬ್ ಸ್ಫೋಟಗೊಂಡು 34 ಜನರು ಸತ್ತು, 66 ಮಂದಿ ಗಾಯಗೊಂಡ ಘಟನೆ ಪಂಜಾಬಿನ ಭಟಿಂಡ ಜಿಲ್ಲೆಯ ಲೆಹರ್ ಖಾನ್ ರೈಲು ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಗಾಯಗೊಂಡವರಲ್ಲಿ 30 ಜನರ ಸ್ಥಿತಿ ಚಿಂತಾಜನಕವಾಗಿದೆ. ಉಗ್ರಗಾಮಿಗಳ ಕೃತ್ಯವೆಂದು ಶಂಕಿಸಲಾಗಿದೆ.

ಸತ್ತವರಲ್ಲಿ 9 ಮಹಿಳೆಯರು ಹಾಗೂ 6 ಮಕ್ಕಳು ಸೇರಿದ್ದಾರೆ.

ಅಂಬಾಲಕ್ಕೆ ಮಧ್ಯಾಹ್ನ 1.20 ಗಂಟೆಗೆ ಭಟಿಂಡದಿಂದ ಪ್ರಯಾಣ ಬೆಳೆಸಿದ ಈ ರೈಲು ಲೆಹರ್ಖಾನ್ ರೈಲು ನಿಲ್ದಾಣವನ್ನು ಎರಡು ಗಂಟೆಗೆ ತಲುಪಿದಾಗ ಈ ದುರಂತ ಸಂಭವಿಸಿದೆ.

ಭಟಿಂಡದಿಂದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಭಟಿಂಡದಿಂದ ಬಂದ ವರದಿಗಳು ತಿಳಿಸಿವೆ. ಸ್ಫೋಟ ಸಂಭವಿಸಿದ ಸ್ಥಳ ಭಟಿಂಡದಿಂದ 18 ಕಿ.ಮೀ. ದೂರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.