ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೌನಕ್ಕೆ ಜಾರಿದ ದಳವಾಯಿಗಳ ಏಕತಾರಿ

Published : 8 ಅಕ್ಟೋಬರ್ 2023, 2:31 IST
Last Updated : 8 ಅಕ್ಟೋಬರ್ 2023, 2:31 IST
ಫಾಲೋ ಮಾಡಿ
Comments
ಒಂದೇ ತಂತಿಯಿಂದ ಹೊಮ್ಮುವ ನಾದ ‘ಏಕತಾರಿ’
‘ಏಕ್ ತಾರ್’ ಅಂದರೆ ಒಂದೇ ತಂತಿಯಿಂದ ನಾದ ಹೊಮ್ಮಿಸುವ ವಾದ್ಯ. ಕುಂಬಳಕಾಯಿಗೆ ಒಂದೇ ತಂತಿಯನ್ನು ಕಟ್ಟಿ ಅದರ ಮೂಲಕ ನಾದ ಹೊಮ್ಮಿಸುವ ಸಂಗೀತ ಉಪಕರಣ ಇದಾಗಿದೆ. ಇದೇ ಶಬ್ದ ವಿನ್ಯಾಸದಲ್ಲಿ ದೋತಾರ್ ತೀನ್ ತಾರ್ ಸೀತಾರ್ (ಅಂದರೆ ಆರು ತಂತಿ) ಕೂಡ ಇವೆ. ಏಕಾಗ್ರತೆಗಾಗಿ ಹಾಗೂ ರಾಗಸಿದ್ಧಿಗಾಗಿ ಏಕತಾರಿ ಹಲವು ಅಧ್ಯಾತ್ಮ ಜೀವಿಗಳಿಗೆ ಸಾಥಿಯಂತೆ. ಒಂದೇ ತಂತಿಯಿಂದ ನಾದ ಹೊಮ್ಮಿಸಿ ನಮ್ಮ ರಾಗಕ್ಕೆ ತಂತಿಯ ನಾದವನ್ನು ಹೊಂದಿಸಿ ಹಾಡುವ ವಾದ್ಯವಿದು. ಸೂಫಿ ಸಂತರು ನಾಥಪಂಥದ ಹಲವು ಅಧ್ಯಾತ್ಮಜೀವಿಗಳು ಸಂತರು ಮೊದಲಾದವರ ತಂಬೂರಿ ಏಕತಾರಿಯದ್ದಾಗಿತ್ತು. ಮಾನವ ದೇಹವು ತಂತಿವಾದ್ಯವಾಗಿ ರೂಪಾಂತರಗೊಳ್ಳುವ ಈ ಕ್ರಿಯೆ ಯಲ್ಲಮ್ಮ ಸಂಪ್ರದಾಯದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಇನ್ನೂ ಜೀವಂತವಿದೆ. ಆದರೆ ಅವರು ನುಡಿಸುವುದು ಚೌಡಿಕೆ. ಏಕತಾರಿಯಾಗಿದ್ದರೂ ಅದು ತಂಬೂರಿಯಲ್ಲ. ಉತ್ತರ ಕರ್ನಾಟಕದ ಬಹುತೇಕ ದೇವಸ್ಥಾನಗಳಲ್ಲಿ ಏಕತಾರಿಗಳನ್ನು ತೂಗಿಬಿಟ್ಟಿರುವುದು ಕಾಣುತ್ತೇವೆ. ಈಗ ಅದನ್ನು ನುಡಿಸುವ ಕಲಾವಿದರು ಮಾತ್ರ ಕಡಿಮೆಯಾಗಿದ್ದಾರೆ. ಪ್ರತಿ ಭಜನಾ ಪದ ತತ್ವಪದಗಳಲ್ಲಿ ಏಕತಾರಿ ಮೊದಲೆಲ್ಲ ಇರುತ್ತಿತ್ತು. ಈಗ ಆ ಜಾಗವನ್ನು ಹಾರ್ಮೋನಿಯಂ ಹಾಗೂ ತಬಲಾ ಆವರಿಸಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT