‘ಅಯೋಧ್ಯಾ ಪ್ರಕರಣ ಕಲಿಸಿದ ಪಾಠ’ ಎಂಬ ಎ.ಸೂರ್ಯಪ್ರಕಾಶ್ ಅವರ ಲೇಖನ (ಪ್ರ.ವಾ., ಫೆ. 19) ಓದಿದೆ. ಅಯೋಧ್ಯಾ ವಿಷಯ ಈಗ ಬಗೆಹರಿದ ಅಧ್ಯಾಯ. ಅದನ್ನು ಮತ್ತೆ ಕೆದಕುತ್ತಾ ಕೂರುವ ಅಗತ್ಯ ಇಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ರಾಜಕೀಯ ಪಕ್ಷವನ್ನು ಲೇಖಕರು ಹೊಗಳಿದ್ದಾರೆ. ಹೊಗಳಲಿ, ಅದು ಅವರ ಹಕ್ಕು. ಆದರೆ ಗೆದ್ದ ರಾಜಕೀಯ ಪಕ್ಷವನ್ನು ಹೊಗಳುವ ಭರದಲ್ಲಿ, ಸೋತ ಪಕ್ಷಗಳ ಮಾತನ್ನು ಹೀನಾಯವಾಗಿ ಕಾಣುವುದು ತರವಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು-ಗೆಲುವು ಇದ್ದದ್ದೇ. ಲೇಖನದ ಕೊನೆಯಲ್ಲಿ ‘2019ರ ಲೋಕಸಭಾ ಚುನಾವಣೆಯಲ್ಲಿ ಜನರಿಂದ ತಿರಸ್ಕೃತರಾದ ಹಾಗೂ ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಹಾಳು ಮಾಡುವ ಬಯಕೆ ಹೊಂದಿರುವ ಕೆಲವು ಸಣ್ಣ ಮನಸ್ಸಿನವರ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗಿರುವುದು ಬೇಸರದ ಸಂಗತಿ’ ಎಂದು ಹೇಳಿರುವುದು ಸರಿಯಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಈ ಮಾತು ಶೋಭಿಸುವುದಿಲ್ಲ.

–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.