ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಬೆಂಬಲಿಗರು, ಅಭಿಮಾನಿಗಳ ಬಳಗ ಹಾಗೂ ಜನಸಾಹಿತ್ಯ ಸಮ್ಮೇಳನದ ಬೆಂಬಲಿಗರು, ಅಭಿಮಾನಿಗಳ ನಡುವೆ, ಪತ್ರಿಕೆಗಳ ಮೂಲಕ ನಡೆಯುತ್ತಿರುವ ಪರಸ್ಪರ ಕೆಸರೆರಚಾಟವು ಸಾರ್ವಜನಿಕ ನಲ್ಲಿ ಬಳಿಯ ಜಗಳ, ಕಚ್ಚಾಟದ ಮಟ್ಟವನ್ನು ತಲುಪಿದೆ. ಇದು ಜನರಿಗೆ ಪುಕ್ಕಟೆ ಮನರಂಜನೆ ಒದಗಿಸುತ್ತಿದೆಯೇ ವಿನಾ ಕನ್ನಡ ನಾಡು-ನುಡಿಯ ಹಿತಸಾಧನೆಯ ದೃಷ್ಟಿಯಿಂದ ಹೆಚ್ಚಿನದ್ದೇನನ್ನೂ ಸಾಧಿಸುತ್ತಿಲ್ಲ. ಈ ಬೆಳವಣಿಗೆ ಇವರೆಲ್ಲರ ಅಮೂಲ್ಯವಾದ ಸಮಯ ಮತ್ತು ಸಂಪನ್ಮೂಲಗಳ ಅಪವ್ಯಯಕ್ಕೆ ಕಾರಣವಾಗಿರುವುದು ಅತ್ಯಂತ ಆತಂಕಕಾರಿ ವಿಚಾರ. ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರು ಹಾಗೂ ಜನಸಾಹಿತ್ಯ ಸಮ್ಮೇಳನದ ಆಯೋಜಕರು ಒಂದೆಡೆ ಕಲೆತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬಾರದೇ? ಕನ್ನಡದ ನುಡಿ ತೇರನ್ನು ಎಳೆಯಲಾಗದೇ? ಎಳೆಯಬಾರದೇ?

-ಡಾ. ಎಂ.ರವೀಂದ್ರ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.