ಜೆ.ಪಿ. ಅವರ ಕರ್ಮಕ್ಷೇತ್ರ ಬಿಹಾರದಲ್ಲಿ ರಾಜಕೀಯ ಇನ್ನೊಮ್ಮೆ ಮಗ್ಗುಲು ಬದಲಿಸಿದೆ. ಒಡಿಶಾದ ಬಿಜೆಡಿಯು ಬಿಜೆಪಿ ಬಗೆಗೆ ಸ್ಥಿರ ನಿಲುವನ್ನು ತೋರುತ್ತ ಬಂದಿದೆ. ಆದರೆ ಜೆಡಿಯು ಒಮ್ಮೆ ಅದರ ಜತೆ ಇರುವುದು, ಇನ್ನೊಮ್ಮೆ ಹೊರನಡೆಯುವುದು ಮಾಡುತ್ತ ಬಂದಿದೆ. ಸಿದ್ಧಾಂತ, ವೈಚಾರಿಕ ಮತಭೇದ ಕಾರಣ ಎಂದೇನೂ ಹೇಳಲಾಗಿಲ್ಲ. ನಿತೀಶ್ ಕುಮಾರ್ ಅವರಿಗೆ ಭವಿಷ್ಯದ ಬಗೆಗೆ ಆತ್ಮವಿಶ್ವಾಸ ಇಲ್ಲದಿರುವುದು ಸ್ಪಷ್ಟ.

ಮಹಾಘಟಬಂಧನ್ 2024ರವರೆಗೆ ನಿತೀಶ್ ಅವರನ್ನೇ ಮುಖ್ಯಮಂತ್ರಿಯಾಗಿ ಉಳಿಸಬಹುದು. ಆದರೆ ಆರ್‌ಜೆಡಿಯು ಅಧಿಕಾರದಲ್ಲಿ ತನ್ನ ಪಾಲನ್ನು ಪಡೆದು, ಅದನ್ನು ಪ್ರದರ್ಶಿಸಲೂಬಹುದು. ಪೂರ್ವ ಭಾರತದಲ್ಲಿ ಮಹತ್ವದ ರಾಜ್ಯವೊಂದರಲ್ಲಿ ಏಕಾಂಗಿಯಾದುದು ಬಿಜೆಪಿಗೆ ಒಂದು ಹಿನ್ನಡೆ. ‘ಸಬ್ ಕಾ ಸಾಥ್’ ಘೋಷಣೆಯನ್ನು ತನ್ನ ಮಿತ್ರಪಕ್ಷಗಳ ಜತೆಗೇ ಸರಿಯಾಗಿ ಅನುಷ್ಠಾನ ಮಾಡಿಲ್ಲದಿರುವುದು ಅದರ ದೋಷ. ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳ ಏಕತೆಗೆ ಇದು ಪ್ರೇರಕ ಆದೀತೇ? ಸದ್ಯಕ್ಕೆ ಅದು ಅತಿಯಾದ ನಿರೀಕ್ಷೆ. ಬಿಹಾರದ ಸಮಸ್ಯೆಗಳು ಎರಡು- ಮೂರು ವರ್ಷಗಳಲ್ಲಿ ಬಗೆಹರಿಯುವಂತಹವಲ್ಲ. ವಿಶೇಷ ಪ್ಯಾಕೇಜ್, ಸ್ಥಾನಮಾನ ನೀಡುವುದು ಯಾವ ರಾಷ್ಟ್ರೀಯ ಪಕ್ಷ ನೇತೃತ್ವದ ಸರ್ಕಾರಕ್ಕೂ ಸಾಧ್ಯವಿಲ್ಲ. ಕೆಲವು ಯೋಜನೆಗಳನ್ನು ತ್ವರಿತಗೊಳಿಸಬಹುದಷ್ಟೆ. ಹಾಗಾಗಿ ಈಗಿನ ಬೆಳವಣಿಗೆಗೆ ರಾಜಕೀಯ ಮಹತ್ವ ಮಾತ್ರ ಇದೆ.

ಎಚ್.ಎಸ್.ಮಂಜುನಾಥ,ಗೌರಿಬಿದನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.