ಭಾರತೀಯ ನಾರಿಯರಿಗೆ ತಮ್ಮ ತಲೆಕೂದಲಿನ ಬಗ್ಗೆ ವಿಶೇಷ ಕಾಳಜಿ ಇರುತ್ತದೆ. ಮಹಿಳೆಯರಿಗೆ ಇರುವ ಉದ್ದ ಕೂದಲನ್ನು ಸೌಂದರ್ಯವರ್ಧಕ ಎಂದು ಭಾವಿಸಲಾಗುತ್ತದೆ. ಹೀಗಾಗಿ, ಮಹಿಳೆಯರು ಕೂದಲು ಉದುರುವುದನ್ನು ತಡೆಗಟ್ಟಲು ಮತ್ತು ಅದು ಉದ್ದವಾಗಿ ಬೆಳೆಯುವಂತೆ ಮಾಡಲು, ಮಾರುಕಟ್ಟೆಯಲ್ಲಿ ದೊರೆಯುವ ಬಗೆ ಬಗೆಯ ಶ್ಯಾಂಪೂ, ತೈಲಗಳನ್ನು ಉಪಯೋಗಿಸುವುದನ್ನು ನೋಡುತ್ತೇವೆ.

ಒಂದು ವರ್ಗದ ಜನರಲ್ಲಿವಿಧವೆಯ ಕೇಶಮುಂಡನ ಮಾಡಿಸುವ ಪದ್ಧತಿ ಇತ್ತು. ಇದರ ಉದ್ದೇಶ ಹೆಣ್ಣನ್ನು ವಿರೂಪಗೊಳಿಸುವುದೇ ಆಗಿತ್ತು. ಸಂಪ್ರದಾಯಸ್ಥ ಹೆಂಗಸರು ದೇವರಿಗೆ ಮುಡಿ ಕೊಡಲು ಹರಕೆ ಹೊರುತ್ತಾರೆ. ಇವರಲ್ಲಿ ಬಹಳ ಮಂದಿ ಕೇಶಮುಂಡನ ಮಾಡಿಸಿಕೊಳ್ಳುವುದಿಲ್ಲ, ಬದಲಿಗೆ ನಾಲ್ಕೈದು ಕೂದಲು ಕತ್ತರಿಸುವ ‘ಹೂ ಮುಡಿ’ ಕೊಡುತ್ತಾರೆ. ಅಂದರೆ ಮಹಿಳೆಯರಿಗೆ ತಮ್ಮ ಕೂದಲಿನ ಮೇಲೆ ಅಷ್ಟೊಂದು, ಪ್ರೀತಿ, ಕಾಳಜಿ. ಆದರೆ, ಉದ್ದನೆಯ ಕೂದಲಿಗೆ ಹೆಸರಾಗಿದ್ದ, ಕೇರಳದ ಪೊಲೀಸ್ ಅಧಿಕಾರಿ ಅಪರ್ಣಾ ಲವಕುಮಾರ್ ಅವರು ತಮ್ಮ ಕೂದಲನ್ನು, ಬಡ ಕುಟುಂಬಕ್ಕೆ ಸೇರಿದ, ಕ್ಯಾನ್ಸರ್ಪೀಡಿತ ಮಕ್ಕಳ ‘ವಿಗ್’ಗಾಗಿ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ (ಪ್ರ.ವಾ., ಸೆ. 26). ‘ಹಿಗ್ಗುವೆ ಏತಕೆ ಚೆಲುವಿನ ಹೆಣ್ಣೇ, ಕಡೆಗೀರೂಪಿಗೆ ಗತಿ ಮಣ್ಣೇ’ ಎಂಬ ಕವಿ ವಾಣಿಯಂತೆ, ‘ನನಗೆ ಸೌಂದರ್ಯ ಮುಖ್ಯವಲ್ಲ, ಅದು ಬದುಕಿನಲ್ಲಿ ಶಾಶ್ವತವೂ ಅಲ್ಲ’ ಎಂದು ಹೇಳಿರುವ ಅಪರ್ಣಾ, ಸಮಾಜಕ್ಕೆ ಮಾದರಿಯಾಗಿದ್ದಾರೆ.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.