ವೇದನೆ ತಂದ ಹನಕೆರೆ ಪ್ರಕರಣ

ಮಂಡ್ಯದ ಹನಕೆರೆ ಗ್ರಾಮದಲ್ಲಿ ದಲಿತರು ದೇವಾಲಯ ಪ್ರವೇಶ ಮಾಡಿದ್ದಕ್ಕೆ ಪ್ರತಿಯಾಗಿ ಗ್ರಾಮದ ಸವರ್ಣೀಯರು ಅಲ್ಲಿನ ಉತ್ಸವ ಮೂರ್ತಿಯನ್ನು ಹೊರತಂದ ಸುದ್ದಿಯನ್ನು ತಿಳಿದು ಅತೀವ ವೇದನೆಯಾಯಿತು. ಇದೊಂದು ಅಮಾನವೀಯ ಪ್ರಕರಣ. ಹಿಂದೂಗಳು ಎಲ್ಲ ಒಂದು ಎನ್ನುತ್ತೇವೆ. ಬಸವಣ್ಣನವರು ದಯೆಯೇ ಧರ್ಮದ ಮೂಲವಯ್ಯ ಎಂದರು. ಮಾನವೀಯತೆಯೇ ನಿಜವಾದ ಧರ್ಮ. ಆದರೆ ವಸ್ತುಸ್ಥಿತಿ ಬೇರೆಯೇ ಇದೆ ಎಂಬುದಕ್ಕೆ ಹನಕೆರೆ ಪ್ರಕರಣ ನಿದರ್ಶನವಾಗಿ ನಿಲ್ಲುತ್ತದೆ.

– ಗುರು ಜಗಳೂರು, ಹರಿಹರ

ಸ್ಥಳೀಯ ಭಾಷೆಗೆ ಆದ್ಯತೆ: ಇತರ ಬ್ಯಾಂಕುಗಳಿಗೂ ವಿಸ್ತರಿಸಿ

ಸ್ಥಳೀಯ ಭಾಷಾ ಜ್ಞಾನ ಇರುವವರನ್ನು ಮಾತ್ರ ನೇಮಿಸಲು ಅನುವಾಗುವಂತೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ (ಆರ್ಆರ್ಬಿ) ನೇಮಕಾತಿ ನಿಯಮವನ್ನು ಮಾರ್ಪಡಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೂಚನೆ ನೀಡಿರುವುದಾಗಿ ವರದಿಯಾಗಿದೆ. ಅಭ್ಯರ್ಥಿಗಳಿಗೆ ಇರುವ ಸ್ಥಳೀಯ ಭಾಷೆಯ ಜ್ಞಾನ ಮತ್ತು ಪ್ರಾವೀಣ್ಯವನ್ನು ಖಚಿತಪಡಿಸಿಕೊಳ್ಳಲು ನೇಮಕಾತಿ ನಿಯಮಗಳನ್ನು ಪರಿಶೀಲಿಸಲು ಮತ್ತು ಅವನ್ನು ಸೂಕ್ತವಾಗಿ ಮಾರ್ಪಡಿಸಲು ಹಣಕಾಸು ಸೇವೆಗಳ ಇಲಾಖೆಗೆ ಅವರು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಇದು ಎಂದೋ ಆಗಬೇಕಾಗಿದ್ದ ಕೆಲಸ. ಈಗ ವಿಳಂಬವಾದರೂ ಸಂಬಂಧಪಟ್ಟವರ ಗಮನಕ್ಕೆ ಬಂದು, ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿರುವುದು ಸ್ವಾಗತಾರ್ಹ.

ಹಿಂದಿಯೇತರ ರಾಜ್ಯಗಳಲ್ಲಿ, ಮುಖ್ಯವಾಗಿ ದಕ್ಷಿಣದ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಗ್ರಾಮೀಣ ಬ್ಯಾಂಕ್ ಗ್ರಾಹಕರು ಭಾಷಾ ಗೊಂದಲವಿಲ್ಲದೆ ತಮ್ಮ ಬ್ಯಾಂಕ್ ವ್ಯವಹಾರವನ್ನು ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಹಾಗೆಯೇ ಸಚಿವರ ಈ ನಿರ್ದೇಶನ ಇತರ ಬ್ಯಾಂಕುಗಳಿಗೂ ವಿಸ್ತರಿಸಲಿ ಎಂಬ ಆಶಯ ಗ್ರಾಹಕರದ್ದಾಗಿದೆ.

– ರಮಾನಂದ ಶರ್ಮಾ, ಬೆಂಗಳೂರು

ಹಣ, ಉಡುಗೊರೆ ತಲುಪಿಸಲು ಬಳಕೆ?

ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆ ಹಾಗೂ ಕರ್ನಾಟಕದ ಉಪಚುನಾವಣೆಯಲ್ಲಿನ ಪ್ರಚಾರದ ವೈಖರಿಯು ಪ್ರಜಾಪ್ರಭುತ್ವಕ್ಕೆ ಹಿನ್ನಡೆಯಾಗುವ ರೀತಿಯಲ್ಲಿತ್ತು ಎಂಬ ವೆಂಕಟೇಶ ಮಾಚಕನೂರ ಅವರ ಅಭಿಪ್ರಾಯ (ವಾ.ವಾ., ನ. 12) ಸರಿಯಾದುದು. ಚುನಾವಣೆಯಲ್ಲಿ ಪ್ರಚಾರ ಮತ್ತು ಜನಸಂಪರ್ಕದ ಅವಕಾಶವು ಹಣ, ಮದ್ಯದಂತಹವುಗಳ ಹಸ್ತಾಂತರಕ್ಕೆ ಬಳಕೆ ಆಗುತ್ತಿದೆ ಎಂಬ ಅನುಮಾನವಿದೆ. ಚುನಾವಣಾ ಆಯೋಗವು ಕಣ್ಣು ಮುಚ್ಚಿ ಕೂತಿದೆಯೇನೊ ಎಂಬ ಗುಮಾನಿ ಮೂಡುವುದುಂಟು.

– ಆರ್.ಕೆ.ದಿವಾಕರ, ಬೆಂಗಳೂರು

ಕಾಂಗ್ರೆಸ್ ದುರಂತವಲ್ಲ, ಎಡಪಕ್ಷಗಳ ದುರಂತ

‘ಅಮೆರಿಕದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಪಾಠವಿದೆ’ ಎಂಬ ಎ.ಸೂರ್ಯ ಪ್ರಕಾಶ್ ಅವರ ಲೇಖನದಲ್ಲಿ
(ಪ್ರ.ವಾ., ನ. 11) ಹಲವು ಸತ್ಯಾಂಶಗಳಿವೆ. ಲೇಖಕರು ಕಾಂಗ್ರೆಸ್ ಪಕ್ಷವು ತನ್ನನ್ನು ಹೈಜಾಕ್ ಮಾಡಲು ಎಡಪಂಥೀಯರಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಇದು ನಿಜವೇ ಆಗಿದ್ದರೆ ಅದು ಕಾಂಗ್ರೆಸ್ ಪಕ್ಷದ ದುರಂತವಲ್ಲ, ಎಡಪಕ್ಷಗಳ ದುರಂತ ಎನ್ನಬಹುದು. ತೃತೀಯ ರಂಗದ ನೇತೃತ್ವ ವಹಿಸಿ ಅದನ್ನು ಸಂಘಟಿಸಬೇಕಾಗಿದ್ದ ಎಡಪಕ್ಷಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟಕ್ಕೆ ಜೋತುಬಿದ್ದ ಪರಿಣಾಮವಾಗಿ, ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಎನ್ಡಿಎ ಪರ ವಾಲುವಂತಾಯಿತು. ರಾಜ್ಯ ಮಟ್ಟದಲ್ಲಿ ಆ ಪಕ್ಷಗಳಿಗೆ ಕಾಂಗ್ರೆಸ್ ಎದುರಾಳಿ ಆಗಿದ್ದುದೇ ಇದಕ್ಕೆ ಕಾರಣ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತೃತೀಯರಂಗದ ಅಸ್ತಿತ್ವವೇ ಇರಲಿಲ್ಲವಾದ್ದರಿಂದ, ಕಾಂಗ್ರೆಸ್ ವಿರೋಧಿ ಮತಗಳೆಲ್ಲವೂ ಅನಿವಾರ್ಯವಾಗಿ ಎನ್ಡಿಎ ಕೂಟಕ್ಕೆ ಬೀಳುವಂತಾಯಿತು. ಬಿಜೆಪಿಯು ಬರೀ 240 ಸ್ಥಾನಗಳಿಗೆ ಸೀಮಿತವಾದ ಈ ಸಂದರ್ಭದಲ್ಲಿ, ಒಂದು ವೇಳೆ ತೃತೀಯ ರಂಗವು ಅಸ್ತಿತ್ವದಲ್ಲಿ ಇದ್ದಿದ್ದರೆ ಯಾರು ಸರ್ಕಾರ ರಚಿಸುತ್ತಿದ್ದರು ಎನ್ನುವುದನ್ನು ಊಹಿಸಬಹುದು.

– ಭೀಮನಗೌಡ ಕಾಶಿರೆಡ್ಡಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.