ಜನಪದ ರಂಗಕಲೆಗಳಿಗೆ ಸಂಬಂಧಿಸಿದಂತೆ, ನಮ್ಮ ವಿಶ್ವವಿದ್ಯಾಲಯಗಳು ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗದೆ ಸ್ವಂತ ಉದ್ಯೋಗವನ್ನೇ ಸೃಷ್ಟಿಸಿಕೊಳ್ಳುವಂತಹ ವಿದ್ಯಾರ್ಥಿಗಳನ್ನು ಸೃಷ್ಟಿಸಬೇಕು, ಇದಕ್ಕಾಗಿ ಉದ್ಯೋಗ ಆಧಾರಿತ ರಂಗಪಠ್ಯವನ್ನು ಅಳವಡಿಸಿಕೊಳ್ಳಬೇಕು ಎಂಬ ಸದಾಶಯ ಡಿ.ಎಸ್.ಚೌಗಲೆ ಅವರ ವಿಶ್ಲೇಷಣೆಯಲ್ಲಿ (ಪ್ರ.ವಾ., ಏ.29) ಮೂಡಿಬಂದಿದೆ.

ಆ ನಿಟ್ಟಿನಲ್ಲಿ ಕಲಾವಿದರು ಬೆಳೆದರೆ, ಅವರ ಕಲಾಸೇವೆಯನ್ನು ಸಮಾಜ ಸ್ವೀಕರಿಸಿದರೆ ತುಂಬಾ ಸಂತೋಷ. ಈ ಕಲೆಗಳನ್ನು ಬಲಪಡಿಸುವ ಉದ್ದೇಶದಿಂದಲೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಪ್ರತ್ಯೇಕ ಡಿಪ್ಲೊಮಾ ಕೋರ್ಸ್ಗಳನ್ನು ಮತ್ತು ತರಬೇತಿ ಕಾರ್ಯಾಗಾರಗಳನ್ನು ಪ್ರತಿ ಶೈಕ್ಷಣಿಕ ವರ್ಷದಲ್ಲೂ ಹಮ್ಮಿಕೊಂಡು ಬರುತ್ತಿದೆ. ಆದರೆ ಸುಶಿಕ್ಷಿತ ಯುವಕರು ಸರ್ಕಾರಿ ಉದ್ಯೋಗವನ್ನೇ ನೆಚ್ಚಿಕೊಂಡವರಾಗಿದ್ದು ಆ ನಿಟ್ಟಿನಲ್ಲಿಯೇ ಪ್ರಯತ್ನಶೀಲರಾಗಿರುತ್ತಾರೆ. ಹೀಗಾಗಿ ಇದು ಮುನ್ನೆಲೆಗೆ ಬರದಂತಾಗಿದೆ. ಜಾನಪದ ವಿಶ್ವವಿದ್ಯಾಲಯವು ದೇಶಿ ಜ್ಞಾನವನ್ನು ಬೆಳೆಸಲು ವಿವಿಧ ರೀತಿಯಿಂದ ಪ್ರಯತ್ನಿಸುತ್ತಿದೆ. ಈ ಪ್ರಯತ್ನಕ್ಕೆ ಸರ್ಕಾರ, ಸಂಘ ಸಂಸ್ಥೆಗಳು, ಸುಸಂಸ್ಕೃತರು, ಜನಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆ ಸಹಕರಿಸಬೇಕು. ಅಂದಾಗ ಮಾತ್ರ ಜನಪದ ರಂಗಕಲೆಗಳ ಕಲಿಕೆಗೆ ಅರ್ಥ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.