ಎಸ್ಎಸ್ಎಲ್ಸಿ ಪರೀಕ್ಷೆಯ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಛಾಯಾ ಪ್ರತಿಗಾಗಿ ಹಾಗೂ ಮರು ಮೌಲ್ಯಮಾಪನಕ್ಕಾಗಿ ಆನ್ಲೈನ್ನಲ್ಲಿ ನಿಗದಿತ ಅರ್ಜಿ ಸಲ್ಲಿಸುವ ವೇಳಾಪಟ್ಟಿ ಪ್ರಕಟವಾಗಿದೆ. ಆದರೆ, ಒಂದು ವಿಷಯದ ಛಾಯಾ ಪ್ರತಿಗಾಗಿ ₹ 405 ಹಾಗೂ ಒಂದು ವಿಷಯದ ಮರು ಮೌಲ್ಯಮಾಪನಕ್ಕಾಗಿ ₹ 805 ಶುಲ್ಕ ನಿಗದಿಪಡಿಸಲಾಗಿದೆ.ಬಡ ವಿದ್ಯಾರ್ಥಿಗಳಿಗೆ ಇದು ಅತ್ಯಂತ ದುಬಾರಿ ಶುಲ್ಕವಾಗಿದೆ. ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮೌಲ್ಯಮಾಪಕರ ಕಣ್ತಪ್ಪಿನಿಂದ ತಪ್ಪುಗಳು ಉಂಟಾಗುವುದನ್ನೂ ಅಲ್ಲಗಳೆಯಲಾಗದು. ಇಂದು ಪ್ರತಿ ಅಂಕವೂ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಾನಮಾನವನ್ನು ನಿರ್ಧರಿಸುತ್ತದೆ.

ಪ್ರತಿ ವಿದ್ಯಾರ್ಥಿಗೂ ಮೌಲ್ಯಮಾಪನಗೊಂಡ ತನ್ನ ಉತ್ತರ ಪತ್ರಿಕೆಗಳ ಛಾಯಾ ಪ್ರತಿಯನ್ನು ಉಚಿತವಾಗಿ ಪಡೆ
ಯುವ ನ್ಯಾಯಯುತ ಹಕ್ಕಿದೆ. ಆದರೆ ಈಗಿನ ವ್ಯವಸ್ಥೆಯಲ್ಲಿ, ಬಡ ವಿದ್ಯಾರ್ಥಿಗಳು ‘ದುಬಾರಿ ಶುಲ್ಕ’ದ ಕಾರಣದಿಂದಾಗಿ ಈ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಅವರ ಹಿತ ಕಾಯಬೇಕಿದೆ.

–ಭಾಗ್ಯಶ್ರೀ ಶಂಕರಗೌಡ ಪಾಟೀಲ,ಯಡ್ರಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.