‘ವ್ಯಭಿಚಾರ ಅಪರಾಧವಲ್ಲ... ಮುಂದೇನು?’ (ಪ್ರ.ವಾ.,ಅ. 6) ಲೇಖನವು ಐಪಿಸಿ ಸೆಕ್ಷನ್ 497 ರದ್ದತಿಯ ಸಾಧಕ- ಬಾಧಕಗಳನ್ನು ಎಲ್ಲಾ ಆಯಾಮಗಳಿಂದ ಪರಿಶೀಲಿಸಿದೆ. ಆದರೆ, ಲೇಖಕರು ಅಂತ್ಯದಲ್ಲಿ ‘ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು ಸಮಂಜಸ’ ಎಂದಿದ್ದಾರೆ. ಆ ಅಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲ.

ಕಾನೂನು ಆಯೋಗವು ಇತ್ತೀಚೆಗೆ ನೀಡಿದ ವರದಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರಸ್ತಾಪಿಸುತ್ತ, ‘ಸದ್ಯದ ಸ್ಥಿತಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಅಪೇಕ್ಷಣೀಯವೂ ಅಲ್ಲ ಅದರ ಅಗತ್ಯವೂ ಇಲ್ಲ’ ಎಂದು ಹೇಳಿರುವುದನ್ನು ಸ್ಮರಿಸಬೇಕು.

ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸಮಯ ಇನ್ನೂ ಪಕ್ವವಾಗಿಲ್ಲ. ಆ ಕುರಿತು ಜನರಲ್ಲಿ ಅರಿವು ಮೂಡಿದ ನಂತರವೇ ಜಾರಿಗೆ ತರಬೇಕು. ನಮ್ಮ ಸಮಾಜವು ಅಂಥ ವ್ಯವಸ್ಥೆಗೆ ಒಗ್ಗಿಕೊಳ್ಳಲು ಸಿದ್ಧವಾಗದಿರುವಾಗ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದರೆ ಅದರಿಂದ ಪ್ರಯೋಜನಕ್ಕಿಂತ ಕೆಡುಕೇ ಹೆಚ್ಚಾದೀತು.

ದರ್ಶನ್ ಕೆ.ಒ., ಕಾರನಘಟ್ಟ , ಚಿಕ್ಕಮಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.