ನಿರಾಸೆ ಮೂಡಿಸಿದ ನೇಮಕಾತಿ ಪ್ರಕ್ರಿಯೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು 2,700ಕ್ಕೂ ಅಧಿಕ ಹುದ್ದೆಗಳಿಗೆ ಇತ್ತೀಚೆಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸದೆ, ಹತ್ತನೇ ತರಗತಿ ಅಂಕಗಳ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಮುಂದಾಗಿರುವುದು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ. ಕೊರೊನಾ ಕಾಲದಲ್ಲಿ ಹತ್ತನೇ ತರಗತಿ ಕಲಿತವರಿಗೆ ಸರ್ಕಾರವೇ ಕೃಪಾಂಕಗಳನ್ನು ನೀಡಿ ಪಾಸ್ ಮಾಡಿದ್ದು ಸ್ವತಃ ಸರ್ಕಾರಕ್ಕೆ ಗೊತ್ತಿರದ ವಿಷಯವೇನಲ್ಲ. ಈ ರೀತಿ ನೇಮಕ ಮಾಡಿಕೊಂಡರೆ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ಪರೀಕ್ಷೆ ಮೂಲಕ ನೇಮಕಾತಿ ಮಾಡಲು ಸರ್ಕಾರ ಆದೇಶ ಹೊರಡಿಸಬೇಕು. ಇದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರ ಒತ್ತಾಯ ಕೂಡಾ ಆಗಿದೆ.

⇒ಬಸವರಾಜ ಕರೇಕಲ್ಲ, ಮಾವಿನ ಇಟಗಿ, ಕುಷ್ಟಗಿ

ಟೆಸ್ಟ್ ಪಂದ್ಯಗಳಲ್ಲಿ ಆಡುವ ತಾಳ್ಮೆ ಎಲ್ಲಿದೆ?

ಭಾರತ ಕ್ರಿಕೆಟ್ ತಂಡವು ತವರು ನೆಲದಲ್ಲೇ ಹೀನಾಯವಾಗಿ ಸರಣಿ ಸೋಲು ಕಂಡ ಬಗ್ಗೆ ಆತ್ಮಾವಲೋಕನ ಅಗತ್ಯ ಎಂಬ ಸಂಪಾದಕೀಯ (ಪ್ರ.ವಾ., ಅ. 28) ಸಮಯೋಚಿತವಾಗಿದೆ. ತಂಡದಲ್ಲಿ ದಶಕಗಳಿಂದಲೂ ಆಡುತ್ತಿರುವ ಹಿರಿಯ ಆಟಗಾರರು ನಿವೃತ್ತಿ ಪಡೆದು ಯುವ ಆಟಗಾರರಿಗೆ ಅವಕಾಶ ಕಲ್ಪಿಸಬೇಕು. ಈ ಮೂಲಕ ತಂಡಕ್ಕೆ ಸ್ಥಿರತೆ ತಂದುಕೊಡಬೇಕಾದ ಅಗತ್ಯವನ್ನು ಈ ಸರಣಿ ಸೋಲು ಎತ್ತಿ ತೋರಿಸಿದೆ. ಟಿ20 ಪಂದ್ಯಗಳಲ್ಲಿ ಹರಿಯುವ ಹಣದ ಹೊಳೆಯಲ್ಲಿ ಮಿಂದಿರುವ ಭಾರತೀಯ ಕ್ರಿಕೆಟ್ ಕಲಿಗಳಿಗೆ ಅಲ್ಪಾವಧಿಯಲ್ಲಿ ಭಾರಿ ಹಣ ಗಳಿಸುವುದರೆಡೆಗೆ ಮಾತ್ರ ಗಮನ ಇರುವಂತೆ ಕಾಣುತ್ತದೆ. ಟೆಸ್ಟ್ ಪಂದ್ಯಗಳ ಬಗೆಗೆ ಆಸಕ್ತಿ ಕುಂದುತ್ತಿರುವ ಈ ಕಾಲಘಟ್ಟದಲ್ಲಿ 5 ದಿನ ಆಡುವ ತಾಳ್ಮೆ ಎಲ್ಲಿದೆ? ಅದರ ಫಲವೇ ಈ ಫಲಿತಾಂಶ.

⇒ಮುಳ್ಳೂರು ಪ್ರಕಾಶ್, ಮೈಸೂರು

ಕೃಷಿ ಪದವಿಯಲ್ಲಿತ್ತು ಕನ್ನಡದಲ್ಲಿ ಬೋಧನೆ

ಪ್ರಾದೇಶಿಕ ಭಾಷೆಯಲ್ಲಿ ವಿಜ್ಞಾನ– ತಂತ್ರಜ್ಞಾನದ ಬೋಧನೆ ಕುರಿತ ಎಚ್.ಕೆ.ಶರತ್ ಅವರ ಲೇಖನ (ಸಂಗತ, ಅ. 29) ಈ ಪದ್ಧತಿಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದೆ. ಈ ದಿಸೆಯಲ್ಲಿ, ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಅಧ್ಯಾಪಕನಾದ ನನ್ನ ಕಹಿ ಅನುಭವವೊಂದನ್ನು ಹಂಚಿಕೊಳ್ಳುತ್ತೇನೆ. ಈ ಹಿಂದೆ, ನಾಲ್ಕು ದಶಕಗಳ ಮೊದಲೇ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಕೃಷಿ ಪದವಿ ತರಗತಿಯನ್ನು ಕನ್ನಡ ಮಾಧ್ಯಮದಲ್ಲಿ ಪ್ರಾರಂಭಿಸಲಾಗಿತ್ತು. ಒಂದೆರಡು ಬ್ಯಾಚ್ ಹೊರಬರುವಷ್ಟರಲ್ಲಿ ‘ಸುಸ್ತಾಗಿ’ ನಿಲ್ಲಿಸಲಾಯಿತು. ಕಾರಣವಿಷ್ಟೇ, ಅಂತರರಾಷ್ಟ್ರೀಯ ಮಟ್ಟದ ಸಂಶೋಧನೆ, ವಿಜ್ಞಾನ ಸಂವಹನಗಳಿಗೆ ಆ ಪಠ್ಯಕ್ರಮ ಮತ್ತು ಸಿದ್ಧತೆ ಅಪಕ್ವವಾಗಿತ್ತು.

ಕನ್ನಡ ಕೃಷಿ ಪದವೀಧರರು ತ್ರಿಶಂಕು ಸ್ಥಿತಿಯಲ್ಲಿ ಇದ್ದರು. ನೌಕರಿಯೂ ಇಲ್ಲ, ಸಂಶೋಧನೆ ನಡೆಸಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗಿತ್ತು. ಈ ವಿಷಯದಲ್ಲಿ ಭಾವನಾತ್ಮಕತೆಗಿಂತ ವಾಸ್ತವವನ್ನು ಅರಿತು, ಸಕಲ ಸಿದ್ಧತೆ ಮಾಡಿಕೊಂಡು ಮುಂದುವರಿಯುವುದು ಸೂಕ್ತ.⇒ಅನಿಲಕುಮಾರ

–ಮುಗಳಿ, ಧಾರವಾಡ

ಜನಸಂಖ್ಯೆಯಷ್ಟೇ ಆಧಾರವಾಗದಿರಲಿ

2026ರ ಬಳಿಕ ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ನಡೆದರೆ, ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗಲಿದೆ, ಉತ್ತರದ ರಾಜ್ಯಗಳ ಪ್ರಾತಿನಿಧ್ಯ ಹೆಚ್ಚಾಗಲಿದೆ ಎಂದು ವರದಿಗಳು ಹೇಳಿವೆ. ವಾಸ್ತವವಾಗಿ ಬರೀ ಜನಸಂಖ್ಯೆ ಆಧಾರದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ನಿಗದಿಪಡಿಸುವುದು ವೈಜ್ಞಾನಿಕ ಆಗಲಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಬೇರೆ ಬೇರೆ ಇಲಾಖೆಗಳಿದ್ದು, ಜನಸಂಖ್ಯೆಯನ್ನು ಮಾತ್ರ ಆಧರಿಸದೆ, ಕ್ಷೇತ್ರ ವ್ಯಾಪ್ತಿಯನ್ನೂ ಅವಲಂಬಿಸಿ ಅವು ಕೆಲಸ ಮಾಡುತ್ತಿವೆ.

ದೇಶ ಅಂದರೆ ಜನಸಂಖ್ಯೆ ಮಾತ್ರವೇ ಆಗದೆ, ವಿಸ್ತಾರ, ಅರಣ್ಯ ಸಂಪತ್ತು, ಸಮುದ್ರತೀರ ಪ್ರದೇಶ, ಭೂ ಮತ್ತು ಗಣಿ, ರಸ್ತೆ ಸಾರಿಗೆ, ಕೃಷಿ ಭೂಮಿ, ಆರೋಗ್ಯ, ಶಿಕ್ಷಣ, ವ್ಯಾಪಾರ ವಹಿವಾಟು, ರಾಷ್ಟ್ರ ಸಂಪತ್ತಿಗೆ ನೀಡುತ್ತಿರುವ ಆರ್ಥಿಕ ಕೊಡುಗೆ, ಪ್ರಾಚ್ಯವಸ್ತು ಕ್ಷೇತ್ರ ಇವೆಲ್ಲವೂ ಲೋಕಸಭಾ ಸದಸ್ಯರ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ, ರಾಜ್ಯಗಳ ಕ್ಷೇತ್ರ ವಿಸ್ತೀರ್ಣ ಮತ್ತು ಆ ವ್ಯಾಪ್ತಿಯಲ್ಲಿ ಬರುವ ಸಂಪನ್ಮೂಲಗಳ ಸಂರಕ್ಷಣೆಯನ್ನು ಗಮನದಲ್ಲಿ ಇಟ್ಟುಕೊಂಡು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ನಿರ್ಧರಿಸುವುದು ಸೂಕ್ತ

.⇒ತಾ.ಸಿ.ತಿಮ್ಮಯ್ಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.