ದಿವಾಳಿ ಆಗದಿರಲಿ ದೀಪಾವಳಿ

ಇತ್ತೀಚಿನ ದಿನಗಳಲ್ಲಿ ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರುವವರು ‘ದಿವಾಳಿ’ ಎಂಬ ಪದವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ದಿವಾಳಿ ಎಂದರೆ ಎಲ್ಲವನ್ನೂ ಕಳೆದುಕೊಂಡವ, ಏನೂ ಇಲ್ಲದವ ಎಂದರ್ಥ. ಇದರ ಅರ್ಥ ಗೊತ್ತಿದ್ದರೂ ದಿವಾಳಿ ಪದದ ಬಳಕೆ ಹೆಚ್ಚಾಗುತ್ತಿರುವುದು ವಿಪರ್ಯಾಸ.

ಕನ್ನಡಿಗರಾದ ನಾವು ನಮ್ಮ ಭಾಷೆ, ಸಂಸ್ಕಾರ– ಸಂಸ್ಕೃತಿ, ಆಚಾರ– ವಿಚಾರಗಳನ್ನು ಉಳಿಸಿಕೊಂಡು ಹೋಗಬೇಕು. ಮುಂದಿನ ಪೀಳಿಗೆ ಇವುಗಳನ್ನು ಮುಂದುವರಿಸುವಂತೆ ಮಾಡಬೇಕು. ಹೀಗಾಗಿ, ದೀಪಾವಳಿ ‘ದಿವಾಳಿ’ ಆಗದಿರಲಿ, ದಿವಾಳಿಯು ‘ದೀಪಾವಳಿ’ ಆಗಲಿ

.⇒ಶರತ್ ಆರ್., ಕಡೂರು

ಅರ್ಥವಿಲ್ಲದ ತೀರ್ಮಾನ, ಸಂಪನ್ಮೂಲದ ದುರ್ಬಳಕೆ

ಹೊಸ ಪ್ರವಾಸೋದ್ಯಮ ನೀತಿಯ ಅನ್ವಯ, ರಾಜ್ಯದ ವಿವಿಧೆಡೆ ಪ್ರವಾಸೋದ್ಯಮ ಇಲಾಖೆಯ ಒಡೆತನದಲ್ಲಿರುವ 680 ಎಕರೆ ಜಮೀನನ್ನು ಮಾರಿ, ಅದರಿಂದ ಬರುವ ಹಣವನ್ನು ಪ್ರವಾಸೋದ್ಯಮ ಯೋಜನೆಗಳಿಗೆ ಬಳಸಿಕೊಳ್ಳುವ ಸರ್ಕಾರದ ತೀರ್ಮಾನ ಅರ್ಥವಿಲ್ಲದ್ದು. ಜೊತೆಗೆ ಇದು, ಇರುವ ಅಲ್ಪ ಪ್ರಮಾಣದ ಸಂಪನ್ಮೂಲದ ದುರ್ಬಳಕೆ ಎಂದೇ ಹೇಳಬಹುದು. ರಾಜ್ಯದಲ್ಲಿರುವ ಕೆಲವು ಪ್ರಖ್ಯಾತ ಪ್ರೇಕ್ಷಣೀಯ ಸ್ಥಳಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಮಾಡುವತ್ತ ಗಮನ ಹರಿಸಬೇಕಾಗಿರುವುದು ತುಂಬಾ ಅವಶ್ಯ. ಉದಾಹರಣೆಗೆ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಹಾಕೂಟದಂತಹ ಕ್ಷೇತ್ರಗಳು ಅಂತರರಾಷ್ಟ್ರೀಯ ಮನ್ನಣೆ ಗಳಿಸಿ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಲೇ ಇವೆ. ಆದರೂ ಈ ಸ್ಥಳಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದು ಆಶ್ಚರ್ಯಕರ.

ರಸ್ತೆ ಸಂಪರ್ಕ ಅಸಮರ್ಪಕವಾಗಿರುವುದು, ಪ್ರವಾಸಿಗರಿಗೆ ರಸ್ತೆ ಮಾರ್ಗದರ್ಶನದ ನಾಮಫಲಕಗಳು ಮತ್ತು ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು, ತಂಗಲು ತಕ್ಕಮಟ್ಟಿಗೆ ವ್ಯವಸ್ಥಿತವಾಗಿರುವ ಹೋಟೆಲ್ಗಳ ಕೊರತೆ, ಜನಜಂಗುಳಿಯಿಂದ ತುಂಬಿರುವ ಕಿರಿದಾದ ರಸ್ತೆಗಳು, ಸಾಲದ್ದಕ್ಕೆ ಬೀಡಾಡಿ ದನಗಳ ಹಾವಳಿಯಿಂದ ಈ ತಾಣಗಳು ಬಳಲುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಐತಿಹಾಸಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದರತ್ತ ಸರ್ಕಾರ
ಗಮನಹರಿಸಲಿ.

⇒ಗಿರಿಯಪ್ಪ ಕೊಳ್ಳಣ್ಣವರ, ಆಡಗಲ್, ಬಾದಾಮಿ

ದೇಶಕ್ಕೆ ಮಾರಕವಾದ ಕ್ಷಮಾಗುಣ

ರಾಜಕಾರಣಿಗಳ ಸ್ವಾರ್ಥ, ಭ್ರಷ್ಟಾಚಾರ, ಕುಟುಂಬರಾಜಕಾರಣದಂತಹ ಗುಣಗಳು ಸಾರ್ವಜನಿಕರಿಗೆ ಸ್ವೀಕಾರಾರ್ಹವಾಗಿರುವುದನ್ನು ಚಂದ್ರಕಾಂತ ವಡ್ಡು ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಅ. 24) ಗುರುತಿಸಿದ್ದಾರೆ. ಇವಷ್ಟೇ ಅಲ್ಲ, ಅವರ ಗೂಂಡಾಗಿರಿ, ಕೊಲೆಗಡುಕತನ ಮತ್ತು ಲಂಪಟತನವನ್ನೂ ಮತದಾರರು ಈಗಾಗಲೇ ಕ್ಷಮಿಸಿಯಾಗಿದೆ. ಇಲ್ಲದಿದ್ದರೆ ಕೊಲೆ ಆರೋಪ ಎದುರಿಸುತ್ತಿರುವವರು, ಅದಿರು ಕಳ್ಳತನ ಮಾಡಿದವರು, ಅನೈತಿಕ ಸಂಬಂಧ ಹೊಂದಿದವರೆಲ್ಲ ಚುನಾವಣೆಯಲ್ಲಿ ಸೋಲುತ್ತಿರಲಿಲ್ಲವೇ? ಮತದಾರನ ಇಂತಹ ಕ್ಷಮಾಗುಣವೇ ದೇಶಕ್ಕೆ ಮಾರಕ.

⇒ಗೋವಿಂದ ಎಸ್. ಭಟ್ಟ, ಶಿರಸಿ

ಲಾಕರ್ ಕಳ್ಳತನ: ಆತಂಕಕಾರಿ ವಿದ್ಯಮಾನ

ಜನಸಾಮಾನ್ಯರು ಕಷ್ಟಪಟ್ಟು ಸಂಪಾದಿಸಿದ ಚಿನ್ನಾಭರಣಗಳನ್ನು ಕಳ್ಳಕಾಕರ ಭಯದಿಂದ ರಕ್ಷಿಸಿಕೊಳ್ಳಲು, ತಮಗೆ ಸಮೀಪ ಇರುವ ಬ್ಯಾಂಕ್ನಲ್ಲಿ ಲಾಕರ್ ತೆರೆದು, ಅದಕ್ಕೆ ಪ್ರತಿವರ್ಷ ಸೇವಾ ಶುಲ್ಕ ಪಾವತಿಸಿ, ಅದರಲ್ಲಿ ತಮ್ಮ ಆಭರಣಗಳನ್ನು ಇಡುತ್ತಾರೆ. ಅವಶ್ಯಕತೆ ಇದ್ದಾಗ ಉಪಯೋಗಿಸಿ ಮತ್ತೆ ಅವುಗಳನ್ನು ಲಾಕರ್ನಲ್ಲಿ ಇಡುತ್ತಾರೆ. ಆದರೆ ಮೊನ್ನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ನಗರದ ಎಸ್ಬಿಎಂ ಶಾಖೆಯಲ್ಲಿ ₹ 13 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿರುವುದು ಆತಂಕ ಹುಟ್ಟಿಸುವ ಸಂಗತಿ. ಗ್ರಾಹಕರು ಅಪಾರ ನಂಬಿಕೆಯಿಂದ ಬ್ಯಾಂಕ್ನಲ್ಲಿ ಇಟ್ಟ ಚಿನ್ನಾಭರಣಕ್ಕೇ ಸುರಕ್ಷತೆ ಇಲ್ಲವೆಂದ ಮೇಲೆ ಇನ್ನು ನಂಬುವುದಾದರೂ ಯಾರನ್ನು? ಜನಸಾಮಾನ್ಯರು ತಮ್ಮ ಚಿನ್ನಾಭರಣಗಳ ಸುರಕ್ಷತೆಗಾಗಿ ಇನ್ನೆಲ್ಲಿ ಹೋಗಬೇಕು?

ಇಂತಹ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳೆಂದರೆ, ನಾವು ಲಾಕರ್ನಲ್ಲಿ ಎಷ್ಟು ಚಿನ್ನಾಭರಣಗಳನ್ನು ಇಟ್ಟಿರುತ್ತೇವೆ ಎಂಬುದು ಬ್ಯಾಂಕ್ನವರಿಗೂ ತಿಳಿದಿರುವುದಿಲ್ಲ. ಅದು ಗ್ರಾಹಕರಿಗೆ ಮಾತ್ರ ತಿಳಿದಿರುತ್ತದೆ. ಒಂದು ವೇಳೆ ಗ್ರಾಹಕರೊಬ್ಬರು ತಮ್ಮ ಲಾಕರ್ನಲ್ಲಿ ₹ 2 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ಇಟ್ಟು, ಈ ರೀತಿ ಬ್ಯಾಂಕ್ ದರೋಡೆ ಆದಾಗ ತಾವು ಲಾಕರ್ನಲ್ಲಿ ₹ 10 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ಇಟ್ಟಿದ್ದುದಾಗಿ ಹೇಳಿದರೆ ಅದಕ್ಕೆ ಹೊಣೆ ಯಾರು? ಒಂದು ವೇಳೆ ಪರಿಹಾರ ನೀಡಿದರೂ ಗ್ರಾಹಕರಿಗೆ ಮೂಲ ಚಿನ್ನಾಭರಣ ಸಿಗುವುದಿಲ್ಲ. ಇದಕ್ಕೆಲ್ಲ ಯಾರು ಹೊಣೆ?

⇒ಬೂಕನಕೆರೆ ವಿಜೇಂದ್ರ, ಮೈಸೂರು

ಕವಿಗಳ ನಾಮಫಲಕಕ್ಕೆ ವಿರೋಧ: ಸಲ್ಲದ ನಡೆ

ಕನ್ನಡ ನುಡಿಯನ್ನು ತನ್ನ ಆಡಳಿತ ಭಾಷೆಯಾಗಿ ಮಾಡಿಕೊಂಡಿರುವ ಕರ್ನಾಟಕದ ಒಂದು ಪ್ರದೇಶದಲ್ಲಿ ಕನ್ನಡ ಕವಿಗಳ ನಾಮಫಲಕ ಅಳವಡಿಸಲು ಪ್ರತಿರೋಧ ವ್ಯಕ್ತಪಡಿಸುತ್ತಿರುವ ನಡವಳಿಕೆ ಅಸಹನೀಯ. ಕನ್ನಡದ ಸುದ್ದಿಗೆ ಬಂದರೂ ಸಹನೆಯಿಂದ ಮೌನ ವಹಿಸುತ್ತಾರೆ ಎಂದು ತಿಳಿದು ಕೆಣಕುತ್ತಿರುವವರು ಯಾರು ಎನ್ನುವುದನ್ನು ಗುರುತಿಸಿ ಬುದ್ಧಿ ಹೇಳಬೇಕು. ಕನ್ನಡದ ಸಮೃದ್ಧಿಗೆ, ಸಹಿಷ್ಣುತೆಗೆ ತಳಪಾಯ ಹಾಕಿ ಸರ್ವ ಜನಾಂಗದ ತೋಟವಾಗಿ ರೂಪಿಸಿರುವ ನಾಡಿನಲ್ಲಿದ್ದು, ಇರುವ ಮನೆಗೇ ಬೆಂಕಿ ಹಚ್ಚಿ ಶಾಂತಿ ಕದಡುವುದು ಖಂಡನೀಯ.

ಕನ್ನಡದ ಸುದ್ದಿಗೆ ಬಂದರೆ ನಾವು ಸುಮ್ಮನಿರುವುದಿಲ್ಲ ಎನ್ನುವ ಕವಿಯ ವಾಣಿ ನಮ್ಮ ಸರ್ಕಾರಕ್ಕೆ ಸ್ಫೂರ್ತಿಯಾಗಲಿ. ತಕ್ಷಣವೇ ಕಠಿಣ ಕ್ರಮ ತೆಗೆದುಕೊಂಡು ಇಂತಹ ವಿಕೃತ ಮನಸ್ಸಿನವರಿಂದ ಕ್ಷಮೆ ಕೇಳಿಸಿ, ಇನ್ನೆಂದೂ ಇಂತಹ ಒಡಕು ಧ್ವನಿ ಕೇಳದಂತೆ ಅದನ್ನು ಮೊಳಕೆಯಲ್ಲಿಯೇ ಬೇರು ಸಹಿತ ಕಿತ್ತೆಸೆಯುವುದಕ್ಕೆ ಇದು ಸಕಾಲ.

⇒ಸತ್ಯಬೋಧ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.