‘ಪ್ರತೀ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಮತ್ತು ಪ್ರತಿದಿನ ಹೊಸ ವಿವಾದ ಸೃಷ್ಟಿಸುವ ಅಗತ್ಯವಿಲ್ಲ’ ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ಕೆಲವು ಸಂಘಟನೆಗಳ ಕಣ್ಣು ತೆರೆಸಬೇಕು. ಮುಸ್ಲಿಮರು ಹೊರಗಿನಿಂದ ಬಂದು ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾರೆ. ಇದು ಈಗ ಇತಿಹಾಸ. ಆಗಿದ್ದು ಆಗಿಹೋಗಿದೆ. ಇಂತಹ ಪ್ರತಿಯೊಂದು ವಿಷಯವನ್ನೂ ಮುನ್ನೆಲೆಗೆ ತರುವ ಬದಲು, ಮಾತುಕತೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎನ್ನುವ ಅವರ ಸಲಹೆ ಚಿಂತನಾರ್ಹ ಮತ್ತು ಈ ದಿಸೆಯಲ್ಲಿ ಬಿಗುವಿನ ವಾತಾವರಣವನ್ನು ತಿಳಿಗೊಳಿಸಲು ಅವರ ಈ ಹೇಳಿಕೆ ಸಹಾಯಕವಾಗಬಹುದು.

ದೇಶದ ಎಲ್ಲಾ ಮಸೀದಿಗಳ ಸಮೀಕ್ಷೆ ನಡೆಸಬೇಕು ಎನ್ನುವ ಒತ್ತಾಯದ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ತೂಕ ಪಡೆದುಕೊಂಡಿದೆ.

ರಮಾನಂದ ಶರ್ಮಾ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.