ದೇಶ ಕಳೆದ ಎರಡು ದಶಕಗಳಲ್ಲಿ ಕೈಗಾರಿಕೆ, ವಾಣಿಜ್ಯ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಕಂಡಿದೆ. ಇದರಿಂದ ಪ್ರಮುಖ ನಗರಗಳೂ ಸೇರಿದಂತೆ ಹಲವು ನಗರ, ಪಟ್ಟಣಗಳು ಗ್ರಾಮಾಂತರ ಪ್ರದೇಶದಿಂದ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ಇದರ ಪರಿಣಾಮವಾಗಿ ನಗರ ಪ್ರದೇಶಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ಪ್ರತಿ ದಿನ ಸಾವಿರಾರು ವಾಹನಗಳು ಹೊಸದಾಗಿ ರಸ್ತೆಗೆ ಇಳಿಯುತ್ತಿವೆ. ಆದರೆ ಅದಕ್ಕೆ ತಕ್ಕಂತೆ ಸಮರ್ಪಕವಾದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ದೆಹಲಿ, ಕೋಲ್ಕತ್ತ, ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಹೈದರಾ-ಬಾದ್ನಂತಹ ದೇಶದ ಪ್ರಮುಖ ಮಹಾನಗರಗಳ ರಸ್ತೆಗಳಲ್ಲಿ ದಿನಕ್ಕೆ 20 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಇದರಿಂದ ಸಂಚಾರ ದಟ್ಟಣೆ ಅಧಿಕವಾಗುತ್ತಿದೆ. ಅದು ಎಷ್ಟರ ಮಟ್ಟಿಗಿದೆ ಎಂದರೆ, ನಗರ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯ ದಿನನಿತ್ಯದ ಕಾರ್ಯ ನಿರ್ವಹಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಹಾಗೂ ಪತ್ತೆ ಕಾರ್ಯಕ್ಕಿಂತಲೂ ಹೆಚ್ಚಾಗಿ ಸಂಚಾರ ನಿಯಂತ್ರಣ ಸಮಸ್ಯೆಯೇ ಬೃಹದಾಕಾರವಾಗಿ ಬೆಳೆದು ನಿಂತಿದೆ.
ಮಿತಿಮೀರಿದ ಪ್ರಮಾಣದಲ್ಲಿ ವಾಹನಗಳು ಬೀದಿಗಿಳಿಯುತ್ತಿರುವುದರಿಂದ ಸಂಚಾರ ನಿಯಂತ್ರಣ ಅಸಮರ್ಪಕವಾಗುತ್ತಿದೆ. ಇದರ ಜೊತೆಗೆ ವಾಹನ ಚಾಲಕರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸದೇ ಇರುವುದು ಸಹ ಸಂಚಾರ ದಟ್ಟಣೆ ಮತ್ತು ರಸ್ತೆಯಲ್ಲಿನ ಅಶಿಸ್ತಿಗೆ ತನ್ನದೇ ಕೊಡುಗೆ ನೀಡುತ್ತಿದೆ. ಇವೆಲ್ಲವೂ ರಸ್ತೆ ಅಪಘಾತಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ.

ಅಲ್ಲಿದೆ ಶಿಸ್ತು: ಕೊಲ್ಲಿ ರಾಷ್ಟ್ರಗಳಲ್ಲಿ ರಸ್ತೆ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಅತ್ಯಂತ ಕಠಿಣವಾದ ಕಾನೂನುಗಳು ಜಾರಿಯಲ್ಲಿವೆ. ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆ ನೀಡುವುದರಿಂದ ವಾಹನ ಚಾಲಕರು ಅನ್ಯ ಮಾರ್ಗವಿಲ್ಲದೇ ಸಂಚಾರ ನಿಯಮಗಳನ್ನು
ಕಡ್ಡಾಯವಾಗಿ ಪಾಲನೆ ಮಾಡುತ್ತಾರೆ. ಇದರಿಂದ ಆ ರಾಷ್ಟ್ರಗಳಲ್ಲಿ ಅತ್ಯಂತ ಉತ್ತಮವಾದ ಸುಗಮ ಸಂಚಾರ ವ್ಯವಸ್ಥೆಯನ್ನು ನಾವು ಕಾಣಬಹುದು. ಜೊತೆಗೆ ಅಪಘಾತಗಳ ಸಂಖ್ಯೆಯೂ ಅಲ್ಲಿ ಕಡಿಮೆ ಪ್ರಮಾಣದಲ್ಲಿ ಇದೆ. ನಮ್ಮ ದೇಶದಲ್ಲಿ ಈವರೆಗೆ ಅಲ್ಲಿಯಂತೆ ಕಠಿಣವಾದ ಕಾನೂನುಗಳು ಜಾರಿಯಲ್ಲಿ ಇರಲಿಲ್ಲ. ಇದಕ್ಕಿಂತ ಹೆಚ್ಚಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ವಾಹನ ಚಾಲಕರಿಗೆ ಇರುವಂತೆ ಸ್ವಯಂ ಪ್ರೇರಿತವಾದ ಶಿಸ್ತೂ ನಮ್ಮವರಿಗೆ ಇಲ್ಲ. ಈಗಿನ ನಮ್ಮ ಕಾನೂನಿನ ಪ್ರಕಾರ, ಕೆಲವು ರಸ್ತೆ ನಿಯಮಗಳ ಉಲ್ಲಂಘನೆಗೆ ಕೇವಲ ₨ 100 ದಂಡ ವಿಧಿಸಲಾಗುತ್ತಿದೆ.

ರಸ್ತೆ ಅಪಘಾತಗಳಿಂದ ಆಗುವ ಹಾನಿಯ ಪ್ರಮಾಣಕ್ಕೆ ಹೋಲಿಸಿದರೆ ಈ ಅತ್ಯಲ್ಪವಾದ ದಂಡದ ಮೊತ್ತ ಒಂದು ಹಾಸ್ಯಾಸ್ಪದ ವ್ಯವಸ್ಥೆಯಂತೆ ಗೋಚರಿಸುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಉತ್ತಮವಾಗುತ್ತಿರುವುದರಿಂದ ಹೆಚ್ಚಿನ ವಾಹನ ಸವಾರರಿಗೆ ₨ 100 ದಂಡದ ಮೊತ್ತ ಪಾವತಿಸುವುದು ದೊಡ್ಡ ಸಂಗತಿಯೇ ಅಲ್ಲ. ಹೀಗಾಗಿ ತಾವು ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಅಥವಾ ದಂಡಪಾವತಿಸಬೇಕಾಗುತ್ತದೆ ಎಂಬ ಭೀತಿಯೇ ಬಹುತೇಕರಿಗೆ ಇರದು. ಅಂತಹವರು ಮತ್ತೆಮತ್ತೆ ಸಂಚಾರ ನಿಯಮ ಉಲ್ಲಂಘಿಸುತ್ತಲೇ ಇರುತ್ತಾರೆ. ದಂಡದ ಮೊತ್ತವನ್ನು ಪಾವತಿಸುತ್ತಲೇ ಇರುತ್ತಾರೆ. ಇಂತಹ ವ್ಯವಸ್ಥೆ ಇರುವುದರಿಂದಲೇ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಯಾವ ಯೋಜನೆಗಳೂ ಪರಿಣಾಮಕಾರಿ ಆಗುತ್ತಿಲ್ಲ.

ಸ್ವಾಗತಾರ್ಹ ಕ್ರಮ: ನಮ್ಮ ದೇಶದಲ್ಲೂ ರಸ್ತೆ ನಿಯಮಗಳನ್ನು ಉಲ್ಲಂಘಿಸಿದವರಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಇರುವಂತೆ ಉಗ್ರವಾದ ಶಿಕ್ಷೆ ವಿಧಿಸುವ ಕಾನೂನು ಜಾರಿಯಾಗಬೇಕು. ಇದರ ಪ್ರಕಾರ ಅತಿ ಹೆಚ್ಚಿನ ಮೊತ್ತದ ದಂಡ ವಿಧಿಸುವುದರ ಜೊತೆಗೆ ವಾಹನ ಸವಾರರ ಚಾಲನಾ ಪರವಾನಗಿ, ವಾಹನದ ಪರವಾನಗಿ/ಆರ್.ಸಿ. ಅಮಾನತು ಮಾಡುವುದು ಅಥವಾ ರದ್ದು ಮಾಡುವಂತಹ ಕಠಿಣ ಕ್ರಮಗಳನ್ನು ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಹಳೆಯ ಕಾನೂನಿಗೆ ತಿದ್ದುಪಡಿ ತರಲು ಹೊರಟಿರುವ ಸರ್ಕಾರದ ಕ್ರಮ ಸ್ವಾಗತಾರ್ಹ.
ಇಂತಹ ಕಠಿಣ ಕ್ರಮಗಳ ಜೊತೆಜೊತೆಗೇ ವಾಹನ ಚಾಲಕರು ಸ್ವಯಂಪ್ರೇರಿತರಾಗಿ ರಸ್ತೆ ಶಿಸ್ತನ್ನು ಮೈಗೂಡಿಸಿಕೊಳ್ಳುವಂತೆ ಮಾಡಬೇಕಾದ ಸವಾಲೂ ನಮ್ಮ ಮುಂದೆ ಇದೆ. ಆಗ ಮಾತ್ರ ಸುಗಮ ಸಂಚಾರ ಸಾಧ್ಯವಾಗುತ್ತದೆ ಹಾಗೂ ರಸ್ತೆ ಅಪಘಾತಗಳ ಸಂಖ್ಯೆಯೂ ಇಳಿಮುಖವಾಗುತ್ತದೆ.

(ಲೇಖಕರು ಮೈಸೂರು ನಗರದ ಪೊಲೀಸ್ ಕಮೀಷನರ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.