ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗದಿದ್ದಾಗ, ಪಿತ್ತ ಹೆಚ್ಚಾದಾಗ, ಬಸ್ಸಿನಲ್ಲಿ ಹೋಗುವಾಗ, ಗರ್ಭಿಣಿಯಾದಾಗ... ಹೀಗೆ ಅನೇಕ ಕಾರಣಗಳಿಗೆ ವಾಂತಿ ಆಗಬಹುದು. ಅಂಥ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಯ ರೂಪದಲ್ಲಿ ಏನು ಮಾಡಬಹುದು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಅಜೀರ್ಣವಾಗಿದ್ದರೆ
* ಏಲಕ್ಕಿ ಬೀಜಗಳನ್ನು ಬಾಯಲ್ಲಿಟ್ಟು ಚೀಪುತ್ತಿದ್ದರೆ ವಾಕರಿಕೆ ವಾಂತಿ ಕಮ್ಮಿ ಆಗುತ್ತದೆ. ಗರ್ಭಿಣಿಯಾದಾಗ ಆಗುವ ವಾಂತಿಗೂ ಹೀಗೆಯೇ ಮಾಡಬಹುದು.

* ಪುದೀನಾ ಎಲೆಗಳನ್ನು ಜಗಿಯುವುದರಿಂದ ವಾಂತಿಯನ್ನು ತಡೆಯಬಹುದು. 4-5 ಪುದೀನಾ ಎಲೆಗಳನ್ನು ಕಿವುಚಿ ವಾಸನೆಯನ್ನು ಆಘ್ರಾಣಿಸಿದರೂ ವಾಂತಿಯನ್ನು ತಡೆಯಬಹದು.

* ಕೆಲವರಿಗೆ ವಾಂತಿ ಆರಂಭವಾಗುವ ಮುನ್ನ ಹೊಟ್ಟೆ ಕಿವುಚಿದಂತೆ ಆಗುವುದು. ಆ ಸಮಯದಲ್ಲಿ ವಾಂತಿ ಬಂದಂತೆ ಆದರೂ ಬರುವುದಿಲ್ಲ. ಆಗ ಚಿಕ್ಕ ಗಾತ್ರದ ಶು೦ಠಿಯನ್ನು ಜಗಿಯಬೇಕು.

ಚಹ ತಯಾರಿಸುವಾಗ ಶುಂಠಿಯನ್ನು ಹಾಕಿ ಕುದಿಸಿ ಬಳಸಲೂಬಹುದು. ಶುಂಠಿಯ ಬೇರು ಹಾಗೂ ನಾರು ಜೀರ್ಣಕಾರಕ ಕಿಣ್ವಗಳನ್ನು ಉತ್ಪಾದಿಸುತ್ತವೆ. ಅಷ್ಟೇ ಅಲ್ಲ, ಈ ಕಿಣ್ವಗಳು ಹೊಟ್ಟೆಯಲ್ಲಿ ಉತ್ಪಾದನೆಯಾದ ಆಮ್ಲವನ್ನು ಸ್ಥಿರಗೊಳಿಸುತ್ತದೆ.

* ಕಾರ್ಬನ್ ಡೈಯಾಕ್ಸೈಡ್ ರಹಿತ ಪಾನೀಯಗಳು ಸಕ್ಕರೆ ಅ೦ಶವನ್ನು ಹೊ೦ದಿರುವುದರಿ೦ದ ಹೊಟ್ಟೆಯನ್ನು ತಣ್ಣಗಿರಿಸುತ್ತವೆ. ಇದರಲ್ಲಿರುವ ಸಕ್ಕರೆ ಅಂಶ ವಾಂತಿಗೆ ಕಾರಣವಾಗುವ ಆಮ್ಲಪಿತ್ತವನ್ನು ಕಡಿಮೆ ಮಾಡುತ್ತದೆ. ಒ೦ದು ನಿಂಬೆಹಣ್ಣಿನ ತುಂಡನ್ನು ತೆಗೆದುಕೊಂಡು ವಾಸನೆಯನ್ನು ಆಘ್ರಾಣಿಸಿದರೆ ವಾಕರಿಕೆ ಕಡಿಮೆಯಾಗುತ್ತದೆ.

ವಾಂತಿ-ಬೇಧಿಯಿದ್ದರೆ
* ಮೇಲಿಂದ ಮೇಲೆ ಭೇದಿಯಾಗುತ್ತಿದ್ದರೆ ಸ್ವಲ್ಪ ಏಲಕ್ಕಿಯನ್ನು ಬೆಣ್ಣೆಯೊಡನೆ ಅರೆದು ತಿನ್ನಬೇಕು.
* ಭೇದಿಯಾಗುತ್ತಿರುವಾಗ ಖರ್ಜೂರ ಸೇವಿಸಿದರೆ ಪ್ರಯೋಜನಕಾರಿ.

* ಆಮಶಂಕೆ ಭೇದಿಯಾಗುತ್ತಿದ್ದರೆ ಕರಿಬೇವಿನ ಕಷಾಯ ಉತ್ತಮ.
* ರಕ್ತಭೇದಿಯ ಬಾಧೆ ಇದ್ದವರು ಕರಿಬೇವಿನ ಚಟ್ನಿ ತಿನ್ನಬೇಕು.

* ವಾಂತಿಭೇದಿ ಆದಾಗ ತುಳಸಿಯ ಬೀಜ ಬಳಸಬೇಕು.
* ರಕ್ತಭೇದಿ ಬಾಧೆಗೆ 10 ಗ್ರಾಂ ಗುಲಾಬಿಹೂಗಳನ್ನು ಎರಡು ಗಂಟೆಕಾಲ ನೀರಲ್ಲಿ ನೆನೆಯಿಟ್ಟು, ನುಣ್ಣಗೆ ಅರೆದು, ಅದಕ್ಕೆ ಕಲ್ಲುಸಕ್ಕರೆಪುಡಿ ಬೆರಸಿ ದಿನದಲ್ಲಿ ಎರಡು ಬಾರಿ ಸೇವಿಸಬೇಕು.

* ಸ್ವಲ್ಪ ಹುಣಸೆಹಣ್ಣಿಗೆ ಅಷ್ಟೆ ಪ್ರಮಾಣದ ಬೆಲ್ಲ, ಒಂದು ಚಮಚ ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಕುಟ್ಟಿ ಮುದ್ದೆ ಮಾಡಿ, ಬಾಯಲ್ಲಿರಿಸಿ ಚಪ್ಪರಿಸುತ್ತಿದ್ದರೆ ಹೊಟ್ಟೆ ತೊಳಸುವಿಕೆ, ತಲೆಸುತ್ತು, ವಾಂತಿ, ವಾಕರಿಕೆಯಂತಹ ಪಿತ್ತ ವಿಕಾರಗಳು ಹೋಗುತ್ತವೆ.

* ಸೀಬೆಗಿಡದ ಎಲೆಗಳ ಕಷಾಯ ಉದರದ ತೊಂದರೆಗಳನ್ನು ನಿವಾರಿಸುತ್ತದೆ. ಅಜೀರ್ಣ, ವಾಂತಿ, ಬೇಧಿ ಮುಂತಾದ ತೊಂದರೆಗಳು ನಿವಾರಣೆಯಾಗುತ್ತವೆ.
* ಆಹಾರ ಸೇವಿಸಿದ ನಂತರ ಹೊಟ್ಟೆ ಉರಿಯುವುದು ಮತ್ತು ಹಳದಿ ವಾಂತಿ ಆಗುತ್ತಿದ್ದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ರಸಕ್ಕೆ ಒಂದಿಷ್ಟು ಕಲ್ಲುಸಕ್ಕರೆ ಸೇರಿಸಿ ಕುಡಿಯಬೇಕು.

ಪಿತ್ತದ ವಾಂತಿ
* ಒಂದು ಚಮಚ ಪುದೀನ ರಸಕ್ಕೆ ಅರ್ಧ ಚಮಚ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ ಸೇವಿಸಿದರೆ ಪಿತ್ತ ಹೆಚ್ಚಾದಾಗ ಕಾಡುವ ವಾಂತಿ, ತಲೆನೋವು ಕಡಿಮೆಯಾಗುತ್ತದೆ.

ಬಸ್ಸಿನಲ್ಲಿ ಹೋಗುವಾಗ
* ಬಸ್ಸಿನಲ್ಲಿ ಓಡಾಡುವಾಗ ವಾಂತಿ ಬರುವ ವ್ಯಕ್ತಿಗಳು ಕಿತ್ತಳೆ ಹಣ್ಣನ್ನು ಮೂಸಿ ನೋಡುವುದರಿಂದ ವಾಂತಿಯಾಗುವುದು ತಪ್ಪುತ್ತದೆ. ನಿಂಬೆಹಣ್ಣನ್ನೂ ಆಘ್ರಾಣಿಸುತ್ತಿರಬೇಕು.
ಗರ್ಭಿಣಿಯಾಗಿದ್ದರೆ

* ನಿಂಬೆಹಣ್ಣಿನ ತುಂಡನ್ನು ಕಡಿಮೆ ಉರಿಯಲ್ಲಿ ಸುಟ್ಟು ನಂತರ ಅದನ್ನು ಬಿಸಿಲಿನಲ್ಲಿಟ್ಟು ಒಣಗಿಸಿ ಅದನ್ನು ಪುಡಿ ಮಾಡಿ, ಆ ಪುಡಿಯನ್ನು ವಾಂತಿ ಬರುತ್ತಿದೆ ಎಂದು ಅನಿಸುವಾಗ ಕುಡಿಯಿರಿ. ಈ ರೀತಿ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ, ವಾಂತಿ ಕೂಡ ಬರುವುದಿಲ್ಲ.

* ವಾಂತಿ ಬರುವ ರೀತಿ ಅನಿಸದಿರಲು ಚಿಕ್ಕ ತುಂಡು ಶುಂಠಿ ತಿನ್ನಿರಿ. ಒಮ್ಮೆ ತಿಂದರೆ ಆ ದಿನವಿಡೀ ವಾಂತಿ ಬರದಂತೆ ತಡೆಯುತ್ತದೆ.
* ನಿಂಬೆ ಪಾನಕ ಕುಡಿಯುವುದರಿಂದ ವಾಂತಿ ಬರದಂತೆ ತಡೆಯಬಹುದು, ಸುಸ್ತೂ ಕಡಿಮೆಯಾಗುತ್ತದೆ.

* ಏಲಕ್ಕಿಯನ್ನು ಜಗಿದರೆ ವಾಂತಿ ಆಗುವುದು ಕಡಿಮೆಯಾಗುತ್ತದೆ. ಇದನ್ನು ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯಿರಿ.
* ಶುಂಠಿಯಿಂದ ತಯಾರಿಸಿದ ಹರ್ಬಲ್ ಟೀ ಕುಡಿಯುವುದರಿಂದ ವಾಂತಿ ಬರುವುದನ್ನು ಕಡಿಮೆ ಮಾಡಬಹುದು.
(ಸಂಗ್ರಹ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.