ಬೆಂಗಳೂರು: ಟೀಮ್ ಇಂಡಿಯಾದ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿಗೆ ಇಂದು (ಜೂ.25) 40 ವರ್ಷಗಳ ಸಂಭ್ರಮ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಕ್ರಿಕೆಟ್ ದಿಗ್ಗಜರ ಸಾಧನೆಗೆ ಗಾನ ಗೌರವವನ್ನು ಸಲ್ಲಿಸಲಾಗಿದೆ.

1983 ಜೂನ್ 25ರಂದು ಕ್ರಿಕೆಟ್ ತವರೂರು ಲಾರ್ಡ್ಸ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಬಲಿಷ್ಠ ವೆಸ್ಟ್‌ಇಂಡೀಸ್ ತಂಡವನ್ನು ಮಣಿಸಿದ್ದ ಕಪಿಲ್ ದೇವ್ ಬಳಗವು ಚೊಚ್ಚಲ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿತ್ತು.

ಕೇರಳದ ಕೋಯಿಕ್ಕೋಡ್‌ನ ಮಲಬಾರ್ ಕ್ರಿಶ್ಚಿಯನ್ ಕಾಲೇಜಿನ ಇತಿಹಾಸ ವಿಭಾಗದ ನಿವೃತ್ತ ನಿರ್ದೇಶಕ ಪ್ರೊ. ವಸಿಷ್ಠ ಎಂಬವರು ಭಾರತದ ವಿಜಯದ ನೆನಪುಗಳನ್ನು ಮೆಲುಕು ಹಾಕುತ್ತಾ ಗಾನ ಗೌರವವನ್ನು ಸಲ್ಲಿಸಿದ್ದಾರೆ.

ವಿಶ್ವಕಪ್ ಗೆಲ್ಲುವುದರೊಂದಿಗೆ ಭಾರತದ ತ್ರಿವರ್ಣ ಪತಾಕೆಯನ್ನು ಉತ್ತುಂಗಕ್ಕೇರಿಸಿದ ಎಲ್ಲ ಕ್ರಿಕೆಟಿಗರಿಗೆ ಈ ಹಾಡಿನ ಮೂಲಕ ಗೌರವ ಸಲ್ಲಿಸಲಾಗುತ್ತಿದೆ. ಈ ಮೂಲಕ ಏಕತೆಯ ಸಂದೇಶವನ್ನು ಸಾರಲಾಗಿದೆ ಎಂದು ವಸಿಷ್ಠ ಅವರು ತಿಳಿಸಿದ್ದಾರೆ.

ಇಲ್ಲಿ ನೋಡಿ ವಿಡಿಯೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.