ನವದೆಹಲಿ: ಹೋಟೆಲ್ನಲ್ಲಿ ಮಹಿಳಾ ಉದ್ಯೋಗಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಆರೋಪ ಎದುರಿಸುತ್ತಿರುವ ದೆಹಲಿಯ 23 ವರ್ಷದೊಳಗಿನವರ ತಂಡದ ಕೆಲವು ಆಟಗಾರರ ವಿಚಾರಣೆಗೆ ಶಿಸ್ತು ಸಮಿತಿ ನೇಮಕ ಮಾಡಲಾಗಿದೆ.

ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆಯ ಮಾಜಿ ಅಧೀಕ್ಷಕ ನಂದನ್ ಶರ್ಮಾ ಈ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಅಲೋಕ್ ಮಿತ್ತಲ್, ಅಪೂರ್ವ ಜೈನ್ ಮತ್ತು ಸುಧೀರ್ ಅಗರವಾಲ್ ಸದಸ್ಯರಾಗಿದ್ದಾರೆ. ಕುಲದೀಪ್ ಯಾದವ್ ಮತ್ತು ಲಕ್ಷ್ಯ ತರೇಜಾ ವಿರುದ್ಧ ದೂರು ದಾಖಲಾಗಿದೆ.

‘ಈ ಪ್ರಕರಣದ ಕುರಿತು ಸಮಿತಿಯು ಕೂಲಂಕಷವಾಗಿ ಪರಿಶೀಲನೆ ಮಾಡಿ ವರದಿ ಸಲ್ಲಿಸಲಿದೆ’ ಎಂದು ದೆಹಲಿ ಡಿಸ್ಟ್ರಿಕ್ಸ್ಟ್ಕ್ರಿಕೆಟ್ ಸಂಸ್ಥೆಯ ಹಿರಿಯ ಅಧಿಕಾರಿ ರವಿ ಜೈನ್ ತಿಳಿಸಿದ್ದಾರೆ.

ವರ್ಮಾ ನೇಮಕ: ನಿವೃತ್ತ ನ್ಯಾಯ ಮೂರ್ತಿ ದೀಪಕ್ ವರ್ಮಾ ಅವರನ್ನು ಡಿಡಿಸಿಎಗೆ ಒಂಬುಡ್ಸ್ಮನ್ ಆಗಿ ನೇಮಕ ಮಾಡಲಾಗಿದೆ. ಈ ಹಿಂದೆ ಇದ್ದ ಬದರ್ ದರೇಜ್ ಅಹಮದ್ ಅವರನ್ನು ಕೈಬಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.