ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಜಯ ಗಳಿಸಿದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಏಳು ಸಾವಿರ ರನ್ ಪೂರೈಸಿದರು.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್‌ಗಳಿಂದ ಗೆದ್ದಿತ್ತು. ಪಾಕಿಸ್ತಾನದ ವಿರುದ್ಧ ಗುರಿ ಬೆನ್ನಟ್ಟಿ ಗಳಿಸಿದ ಅತಿದೊಡ್ಡ ಜಯವಾಗಿದೆ ಇದು. ಪಂದ್ಯದಲ್ಲಿ ಮೋಹಕ ಶತಕ ಗಳಿಸಿದ ರೋಹಿತ್ ಶರ್ಮಾ ಅತಿವೇಗದಲ್ಲಿ ಏಳು ಸಾವಿರ ರನ್ ಗಳಿಸಿದ ಐದನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

210 ಗುರಿ ಬೆನ್ನಟ್ಟಿದ ಸಂದರ್ಭದಲ್ಲಿ ಭಾರತದ ದಾಖಲೆಯ ಮೊದಲ ವಿಕೆಟ್ (ರೋಹಿತ್ ಶರ್ಮಾ–ಶಿಖರ್ ಧವನ್) ಜೊತೆಯಾಟ. 2009ರಲ್ಲಿ ನ್ಯೂಜಿಲೆಂಡ್ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ವೀರೇಂದ್ರ ಸೆಹ್ವಾಗ್–ಗೌತಮ್ ಗಂಭೀರ್ ಜೊತೆಯಾಗಿ
201 ರನ್ ಗಳಿಸಿದ್ದರು.

159 ಪಾಕಿಸ್ತಾನ ವಿರುದ್ಧ ಈ ಹಿಂದೆ ಭಾರತ ಮೊದಲ ವಿಕೆಟ್‌ಗೆ ಸೇರಿಸಿದ್ದ ರನ್. ಸೌರವ್ ಗಂಗೂಲಿ–ಸಚಿನ್ ತೆಂಡೂಲ್ಕರ್ 1998ರಲ್ಲಿ ಢಾಕಾದಲ್ಲಿ ಈ ಸಾಧನೆ ಮಾಡಿದ್ದರು.

7 ಬಾರಿ ಭಾರತದ ಆರಂಭಿಕ ಜೋಡಿ ಶತಕ ಗಳಿಸಿದೆ. ಗುರಿ ಬೆನ್ನಟ್ಟಿದಾಗ ಈ ಸಾಧನೆ ಮಾಡಿದ ಎರಡನೇ ಜೋಡಿ ರೋಹಿತ್ ಮತ್ತು ಶಿಖರ್. 2002ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೌರವ್ ಗಂಗೂಲಿ–ಸೆಹ್ವಾಗ್ ಶತಕ ಬಾರಿಸಿದ್ದರು.

13 ರೋಹಿತ್ ಶರ್ಮಾ–ಶಿಖರ್ ಧವನ್ ನಡುವಿನ ಶತಕದ ಜೊತೆಯಾಟಗಳ ಸಂಖ್ಯೆ. ಇದು ಭಾರತದ ಜೋಡಿಯೊಂದರ ಎರಡನೇ ಗರಿಷ್ಠ ಸಾಧನೆ. ಸಚಿನ್ ತೆಂಡೂಲ್ಕರ್–ಸೌರವ್ ಗಂಗೂಲಿ ನಡುವೆ 21 ಶತಕದ ಜೊತೆಯಾಟ ಮೂಡಿಬಂದಿದೆ.

ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಜಯ ಗಳಿಸಿದ್ದರ ಶ್ರೇಯ ಬೌಲರ್‌ಗಳಿಗೆ ಸಲ್ಲಬೇಕು. ತಂಡದ ಬೌಲಿಂಗ್ ವಿಭಾಗದವರು ಎದುರಾಳಿಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ಬೌಲರ್‌ಗಳು ಆರಂಭದಿಂದಲೇ ಶಿಸ್ತಿನ ದಾಳಿ ನಡೆಸುತ್ತ ಬಂದಿದ್ದು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಯೋಜನೆಗಳನ್ನು ಹಾಕಿದ್ದೆವು. ಇದು ಫಲ ನೀಡಿತು
-ರೋಹಿತ್ ಶರ್ಮಾ, ಭಾರತ ತಂಡದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.