ಮೆಲ್ಬರ್ನ್: ಸ್ಮೃತಿ ಮಂದಾನ ಅರ್ಧಶತಕದ ಬಲದಿಂದ ಭಾರತ ಮಹಿಳಾ ತಂಡವು ಶನಿವಾರ ಇಲ್ಲಿ ನಡೆದ ಟ್ವೆಂಟಿ–20 ಕ್ರಿಕೆಟ್ ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯಾ ಎದುರು 7 ವಿಕೆಟ್ಗಳಿಂದ ಗೆದ್ದಿತು.

ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆಸ್ಟ್ರೇಲಿಯಾ ತಂಡವು ಆ್ಯಷ್ಲೀ ಗಾರ್ಡನರ್ (93; 57ಎಸೆತ,) ಮತ್ತು ಮೆಗ್ಲ್ಯಾನಿಂಗ್ (37; 22ಎಸೆತ) ಅವರ ಬ್ಯಾಟಿಂಗ್ ಬಲದಿಂದ 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 173 ರನ್ ಗಳಿಸಿತು. ಅದಕ್ಕುತ್ತರವಾಗಿ ಭಾರತ ತಂಡವು 19.4 ಓವರ್ಗಳಲ್ಲಿ 3 ವಿಕೆಟ್ಗಳಿಗೆ 177 ರನ್ ಗಳಿಸಿತು. ಇದರೊಂದಿಗೆ ತಂಡವು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಮೊದಲ ಸ್ಥಾನದಲ್ಲಿ ಇಂಗ್ಲೆಂಡ್ ಇದೆ.

ಈ ಪಂದ್ಯದಲ್ಲಿ ಭಾರತ ತಂಡವು ಬ್ಯಾಟಿಂಗ್ ಸಮಸ್ಯೆಯಿಂದ ಹೊರಬಂದಿತು. 16 ವರ್ಷದ ಆಟಗಾರ್ತಿ ಶಫಾಲಿ ವರ್ಮಾ ಅಬ್ಬರದ ಬ್ಯಾಟಿಂಗ್ ಮಾಡಿದರು. ಒಂದು ರನ್ ಅಂತರದಿಂದ ಅವರು ಅರ್ಧಶತಕ ತಪ್ಪಿಸಿಕೊಂಡರು. ಎಂಟು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಬಾರಿಸಿ ಮಿಂಚಿದರು.

ಭಾನುವಾರ ನಡೆಯಲಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ನಂತರವಷ್ಟೇ ಫೈನಲ್ ಆಡುವ ತಂಡಗಳು ನಿಗದಿಯಾಗಲಿವೆ. 12ರಂದು ಫೈನಲ್ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು:ಆಸ್ಟ್ರೇಲಿಯಾ: 20 ಓವರ್ಗಳಲ್ಲಿ 5ಕ್ಕೆ173 (ಆ್ಯಷ್ಲೀ ಗಾರ್ಡನರ್ 93, ದೀಪ್ತಿ ಶರ್ಮಾ 27ಕ್ಕೆ2), ಭಾರತ: 19.4 ಓವರ್ಗಳಲ್ಲಿ 3ಕ್ಕೆ177 (ಸ್ಮೃತಿ ಮಂದಾನ 55, ಶಫಾಲಿ ವರ್ಮಾ 49, ಮೇಗನ್ ಶೂಟ್ 26ಕ್ಕೆ1) ಫಲಿತಾಂಶ: ಭಾರತ ತಂಡಕ್ಕೆ 7 ವಿಕೆಟ್ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.