ಬೆಂಗಳೂರು: ಪವನ್ ಶೆರಾವತ್ ನಾಯಕತ್ವದ ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮತ್ತೊಂದು ಸೋಲಿನ ಕಹಿ ಅನುಭವಿಸಿತು.

ವೈಟ್ಫೀಲ್ಡ್ನಲ್ಲಿರುವ ಶೆರಟನ್ ಗ್ರ್ಯಾಂಡ್ ಹೋಟೆಲ್ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 35–37ರಿಂದ ಪುಣೇರಿ ಪಲ್ಟನ್ ವಿರುದ್ಧ ಸೋತಿತು. ತಂಡಕ್ಕೆ ಇದು ಟೂರ್ನಿಯಲ್ಲಿ ಐದನೇ ಸೋಲಾಗಿದೆ. ಒಟ್ಟು 13 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದಿದ್ದು, ಒಂದರಲ್ಲಿ ಟೈ ಮಾಡಿಕೊಂಡಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಈ ಪಂದ್ಯವು ಬುಲ್ಸ್ನ ಪವನ್ ಮತ್ತು ಪುಣೇರಿಯ ಮೋಹಿತ್ ಗೋಯತ್ ಅವರ ನಡುವಿನ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿತ್ತು. ಪ್ರತಿಯೊಂದು ಹಂತವೂ ರೋಚಕ ರಸದೌತಣ ನೀಡಿತು. ಪವನ್ ಒಟ್ಟು ಹತ್ತು ಅಂಕ ಕಲೆಹಾಕಿದರು. ಅದೇ ಮೋಹಿತ್ 13 ಅಂಕಗಳನ್ನು ಸೂರೆ ಮಾಡಿದರು.

ಆರಂಭದಿಂದಲೂ ತುರುಸಿನ ಪೈಪೋಟಿ ಇದ್ದ ಕಾರಣ ಪ್ರಥಮಾರ್ಧದ ವಿರಾಮದ ವೇಳೆಗೆ ಪುಣೇರಿ 16–15ರಿಂದ ಮುನ್ನಡೆಯಲಿತ್ತು. ಕೊನೆಯವರೆಗೂ ಒಂದು ಅಥವಾ ಎರಡು ಅಂಕಗಳ ವ್ಯತ್ಯಾಸದ ಹೋರಾಟವೇ ಕಂಡುಬಂದಿತು.

ಮುಂಬಾ ಜಯಭೇರಿ: ರೇಡರ್ ಅಭಿಷೇಕ್ ಸಿಂಗ್ ಅವರ ಆಟದ ಬಲದಿಂದ ಯು ಮುಂಬಾ ತಂಡವು 42–35ರಿಂದ ತೆಲುಗು ಟೈಟನ್ಸ್ ವಿರುದ್ಧ ಜಯಭೇರಿ ಬಾರಿಸಿತು.

ಅಭಿಷೇಕ್ ಸಿಂಗ್ 15 ಅಂಕಗಳನ್ನು ಗಳಿಸಿದ ತಂಡದ ಜಯದ ರೂವಾರಿಯಾದರು. ರಕ್ಷಣಾ ವಿಭಾಗದಲ್ಲಿ ಫಜಲ್ ಅತ್ರಾಚಲಿ ಕೂಡ ಮಿಂಚಿದರು. ಆರು ಅಂಕಗಳನ್ನು ಗಳಿಸಿದರು. ಟೈಟನ್ಸ್ ತಂಡದ ಆದರ್ಶ 12 ಅಂಕಗಳನ್ನು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.