ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PAK vs BAN Test | ಬಾಂಗ್ಲಾದೇಶಕ್ಕೆ ಚಾರಿತ್ರಿಕ ಗೆಲುವು

ಶಕೀಬ್, ಮೆಹದಿ ಅಮೋಘ ಬೌಲಿಂಗ್; ಪಾಕ್ ವಿರುದ್ಧ ಶಾಂತೋ ಪಡೆಗೆ ಜಯ
Published : 25 ಆಗಸ್ಟ್ 2024, 14:25 IST
Last Updated : 25 ಆಗಸ್ಟ್ 2024, 14:25 IST
ಫಾಲೋ ಮಾಡಿ
Comments

ರಾವಲ್ಪಿಂಡಿ, ಪಾಕಿಸ್ತಾನ: ರಾಜಕೀಯ ದಳ್ಳುರಿಯಲ್ಲಿ ಬೆಂದಿರುವ ಬಾಂಗ್ಲಾದೇಶದ ಜನರಿಗೆ ಒಂದಿಷ್ಟು ಚೇತೋಹಾರಿಯಾಗುವಂತಹ ಚಾರಿತ್ರಿಕ ಸಾಧನೆಯನ್ನು ಅಲ್ಲಿಯ ಕ್ರಿಕೆಟ್ ತಂಡ ಭಾನುವಾರ ಮಾಡಿದೆ. 

ಪಾಕಿಸ್ತಾನ ತಂಡವನ್ನು ಅದರ ನೆಲದಲ್ಲಿಯೇ 10 ವಿಕೆಟ್‌ಗಳಿಂದ ಮಣಿಸಿದೆ. ಪಾಕ್ ವಿರುದ್ಧ ಬಾಂಗ್ಲಾ ಜಯಿಸಿದ ಮೊದಲ ಟೆಸ್ಟ್ ಪಂದ್ಯ ಇದಾಗಿದೆ.  ಉಭಯ ತಂಡಗಳು ಇದುವರೆಗೆ 14 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ 12 ಪಂದ್ಯಗಳನ್ನು ಪಾಕ್ ಜಯಿಸಿತ್ತು. ಒಂದು ಡ್ರಾ ಆಗಿತ್ತು.  

ಎಡಗೈ ಸ್ಪಿನ್ನರ್ ಶಕೀಬ್ ಅಲ್ ಹಸನ್ (ಬಾಂಗ್ಲಾದ ಈ ಹಿಂದಿನ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರದಲ್ಲಿ ಸಂಸದರಾಗಿದ್ದರು) ಅವರು 3 ಹಾಗೂ  ಹಾಗೂ ಮೆಹದಿ ಹಸನ್  ಮಿರಾಜ್ 4 ವಿಕೆಟ್‌ಗಳನ್ನು ಗಳಿಸಿ ಪಾಕ್ ತಂಡಕ್ಕೆ ಬಲವಾದ ಪೆಟ್ಟುಕೊಟ್ಟರು.  ಇದರಿಂದಾಗಿ ಪಂದ್ಯದ ಕೊನೆಯ ದಿನದಾಟದಲ್ಲಿ ನಾಟಕೀಯ ರೀತಿಯಲ್ಲಿ ಕುಸಿಯಿತು.  ಪಾಕ್ ತಂಡಕ್ಕೆ ಕೇವಲ 30 ರನ್‌ಗಳ ಗೆಲುವಿನ ಗುರಿ ನೀಡಿತು. ಬಾಂಗ್ಲಾ ತಂಡವು ವಿಕೆಟ್ ನಷ್ಟವಿಲ್ಲದೇ ಕೇವಲ 6.3 ಓವರ್‌ಗಳಲ್ಲಿ ಗುರಿ ಮುಟ್ಟಿ ಗೆದ್ದಿತು. 

ಮೊದಲ ಇನಿಂಗ್ಸ್‌ನಲ್ಲಿ 448 ರನ್ ಗಳಿಸಿದ್ದ ಆತಿಥೇಯ ತಂಡವು ಡಿಕ್ಲೇರ್ ಮಾಡಿಕೊಂಡಿತ್ತು. ಆದರೆ ಬಾಂಗ್ಲಾ ತಂಡವು 117 ರನ್‌ಗಳ ಮುನ್ನಡೆ ಸಾಧಿಸಿತ್ತು.  ಎರಡನೇ ಇನಿಂಗ್ಸ್‌ನಲ್ಲಿ ಬಾಂಗ್ಲಾ ತಂಡಕ್ಕೆ ಬೃಹತ್ ಗುರಿ ನೀಡುವ ಹಾದಿಯಲ್ಲಿ ಪಾಕ್ ಎಡವಿತು.  

ಅಬ್ದುಲ್ಲಾ  ಸಿದ್ಧೀಕ್ (37; 86ಎ) ಮತ್ತು ಅರ್ಧಶತಕ ಗಳಿಸಿದ ಮೊಹಮ್ಮದ್ ರಿಜ್ವಾನ್ (51; 80ಎ) ಅವರಿಬ್ಬರ ಹೋರಾಟದ ಬಲದಿಂದ 146 ರನ್ ಗಳಿಸಿತು. ಅದರೆ ಇದು ಪಾಕ್ ತಂಡಕ್ಕೆ ಜಯ ಕೊಡಿಸಲು ಸಾಕಾಗಲಿಲ್ಲ. ಇದರಿಂದಾಗಿ ಶಾನ್ ಮಸೂದ್ ನಾಯಕತ್ವದ ಪಾಕ್ ತಂಡವು ಆಘಾತ ಅನುಭವಿಸಿತು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪಾಕಿಸ್ತಾನ: 113 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 448 ಡಿಕ್ಲೇರ್ಡ್. ಬಾಂಗ್ಲಾದೇಶ: 167.3 ಓವರ್‌ಗಳಲ್ಲಿ 565. ಎರಡನೇ ಇನಿಂಗ್ಸ್: ಪಾಕಿಸ್ತಾನ: 55.5 ಓವರ್‌ಗಳಲ್ಲಿ 146 (ರಿಜ್ವಾನ್ 51, ಶಕೀಬ್ ಅಲ್ ಹಸನ್ 44ಕ್ಕೆ3, ಮೆಹದಿ ಹಸನ್ ಮಿರಾಜ್ 21ಕ್ಕೆ4) ಬಾಂಗ್ಲಾದೇಶ: 6.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 30 (ಝಕೀರ್ ಹಸನ್ ಔಟಾಗದೆ 15, ಶಾದ್ಮನ್ ಇಸ್ಲಾಂ ಔಟಾಗದೆ 9) ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ 10 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ: ಮುಷ್ಫಿಕುರ್ ರಹೀಮ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT