ಸಿಲ್ಹೆಟ್: ಅನುಭವಿ ಆಟಗಾರ ಮಷ್ರಫೆ ಮೊರ್ತಜಾ ಅವರು ಬಾಂಗ್ಲಾದೇಶ ಏಕದಿನ ಕ್ರಿಕೆಟ್ ತಂಡದ ನಾಯಕತ್ವ ತೊರೆದಿದ್ದಾರೆ. ಗುರುವಾರ ಈ ನಿರ್ಧಾರ ಪ್ರಕಟಿಸಿದ್ದಾರೆ.

‘ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ಅವಕಾಶ ಸಿಕ್ಕರೆ ಆಟಗಾರನಾಗಿ ತಂಡದಲ್ಲಿ ಮುಂದುವರಿಯುತ್ತೇನೆ’ ಎಂದು 36 ವರ್ಷ ವಯಸ್ಸಿನ ಮೊರ್ತಜಾ ತಿಳಿಸಿದ್ದಾರೆ.

ಮೊರ್ತಜಾ ಅವರು ಏಕದಿನ ಮಾದರಿಯಲ್ಲಿ ಬಾಂಗ್ಲಾದೇಶದ ಯಶಸ್ವಿ ನಾಯಕ ಎನಿಸಿದ್ದಾರೆ. ಅವರ ಮುಂದಾಳತ್ವದಲ್ಲಿ 87 ಪಂದ್ಯಗಳನ್ನು ಆಡಿರುವ ತಂಡ 49ರಲ್ಲಿ ಗೆದ್ದಿದೆ.

2017ರಲ್ಲಿ ಟ್ವೆಂಟಿ–20 ಮಾದರಿಗೆ ವಿದಾಯ ಹೇಳಿದ್ದ ಮೊರ್ತಜಾ, ಗಾಯದ ಕಾರಣ 2009ರ ನಂತರ ಒಂದೂ ಟೆಸ್ಟ್ ಆಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.