ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬಲಗೈ ವೇಗದ ಬೌಲರ್ ಭುವನೇಶ್ವರ್ ಕುಮಾರ್ 150 ವಿಕೆಟ್ ಸಾಧನೆ ಮಾಡಿದ್ದಾರೆ.

ಈ ಮೂಲಕ ಐಪಿಎಲ್ನಲ್ಲಿ 150 ವಿಕೆಟ್ ಕಬಳಿಸಿದ ಭಾರತದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:20ನೇ ಓವರ್ ಮೇಡನ್, 4 ವಿಕೆಟ್; ಉಮ್ರಾನ್ ಮಲಿಕ್ ಜಾದೂ!

ಒಟ್ಟಾರೆಯಾಗಿ ಐಪಿಎಲ್ನಲ್ಲಿ 150 ವಿಕೆಟ್ ಗಳಿಸಿದ ಏಳನೇ ಹಾಗೂ ಭಾರತದ ಐದನೇ ಬೌಲರ್ ಎನಿಸಿದ್ದಾರೆ. ಈಗಾಗಲೇ ಭಾರತದ ನಾಲ್ವರು ಸ್ಪಿನ್ನರ್ಗಳು ಈ ಸಾಧನೆ ಮಾಡಿದ್ದಾರೆ.

ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೊ (174 ವಿಕೆಟ್) ಮುಂಚೂಣಿಯಲ್ಲಿದ್ದು, ಶ್ರೀಲಂಕಾದ ಲಸಿತ್ ಮಾಲಿಂಗ (170 ವಿಕೆಟ್) ಎರಡನೇ ಸ್ಥಾನದಲ್ಲಿದ್ದಾರೆ.

ಭಾರತೀಯರ ಪೈಕಿ ಅಮಿತ್ ಮಿಶ್ರಾ 166, ಪಿಯೂಷ್ ಚಾವ್ಲಾ 157, ಯಜುವೇಂದ್ರ ಚಾಹಲ್ 151 ಹಾಗೂ ಹರಭಜನ್ ಸಿಂಗ್ 150 ವಿಕೆಟ್ಗಳನ್ನು ಕಬಳಿಸಿದ್ದಾರೆ.

ಐಪಿಎಲ್ 2022ನೇ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಭುವಿ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಸ್ಮರಣೀಯವಾಗಿಸಿದರು.

138ನೇ ಐಪಿಎಲ್ ಪಂದ್ಯದಲ್ಲಿ ಭುವಿ ಈ ಸಾಧನೆ ಮಾಡಿದ್ದಾರೆ. ಪಂದ್ಯದಲ್ಲಿ ಒಟ್ಟು ಮೂರು ವಿಕೆಟ್ಗಳನ್ನು ಪಡೆದರು.

ಐಪಿಎಲ್ನಲ್ಲಿ ಗರಿಷ್ಠ ವಿಕೆಟ್ ಸರದಾರರು:
ಡ್ವೇನ್ ಬ್ರಾವೊ: 174
ಲಸಿತ್ ಮಾಲಿಂಗ: 170
ಅಮಿತ್ ಮಿಶ್ರಾ: 166
ಪಿಯೂಷ್ ಚಾವ್ಲಾ: 157
ಯಜುವೇಂದ್ರ ಚಾಹಲ್: 151
ಭುವನೇಶ್ವರ್ ಕುಮಾರ್: 150
ಹರಭಜನ್ ಸಿಂಗ್: 150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.